ಕಲ್ಲಡ್ಕ(ವಿಶ್ವ ಕನ್ನಡಿಗ ನ್ಯೂಸ್): 74 ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಯುನೈಟೆಡ್ ಫ್ರೆಂಡ್ಸ್ ಸರ್ಕಲ್ ಕೆ.ಸಿ.ರೋಡ್ ಕಲ್ಲಡ್ಕ ವತಿಯಿಂದ 74 ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಯುನೈಟೆಡ್ ಫ್ರೆಂಡ್ಸ್ ಸರ್ಕಲ್ ಕೆ.ಸಿ.ರೋಡ್- ಕಲ್ಲಡ್ಕ ವತಿಯಿಂದ ಪ್ರಥಮ ಬಾರಿಗೆ ನಡೆದ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಕಲ್ಲಡ್ಕ ಮಸ್ಜಿದ್ ಖತೀಬರಾದ ಉಸ್ತಾದ್ ಶೇಖ್ ಮಹಮ್ಮದ್ ಫೈಝಿ ಇರ್ಫಾನಿ ಮತ್ತು ಕೆ.ಸಿ.ರೋಡ್ ಮಸ್ಜಿದ್ ಖತೀಬರಾದ ಅಬ್ದುಲ್ ಹಮೀದ್ ದಾರಿಮಿ ಹಾಗೂ ಗೋಳ್ತಮಜಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕೆ.ಎಸ್ ಮುಸ್ತಫಾ ಮತ್ತು ಜವಾಝ್ ಕಲ್ಲಡ್ಕ ಹಾಗೂ ಕೆ.ಎಮ್ ಶರೀಫ್ ರವರು ನೆರವೇರಿಸಿದರು ಪ್ರಾಸ್ತಾವಿಕವಾಗಿ ಕಲ್ಲಡ್ಕ ಖತೀಬರು ಶೇಖ್ ಮಹಮ್ಮದ್ ಫೈಝಿ ಇರ್ಫಾನಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಾಡಿನ ಹಿರಿಯರು ಕಿರಿಯರು ಪುಟಾಣಿಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮವನ್ನು ಶಂಸುದ್ದೀನ್ ಸ್ವಾಗತಿಸಿ ನಿರೂಪಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.