ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಇಂದು ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 08 ಶುಕ್ರವಾರ ರಬೀವುಲ್ ಅವ್ವಲ್ ತಿಂಗಳ ಚಾಂದ್ ಒಂದು ಆಗಿದ್ದು, ಅಕ್ಟೋಬರ್ 19 ರಂದು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮದಿನ (ಈದ್ ಮೀಲಾದ್) ಆಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ನೂರಾರು ಮೊಹಲ್ಲಾಗಳ ಗೌರವಾನ್ವಿತ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ರಬೀವುಲ್ ಅವ್ವಲ್ ತಿಂಗಳಿನಲ್ಲಿ ಎಲ್ಲಾ ಮನೆ ಮಸೀದಿ, ಮೊಹಲ್ಲಾ ಜಮಾಅತುಗಳಲ್ಲಿ ಸಡಗರ ಸಂಭ್ರಮದಿಂದ ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೌಲಿದ್ ಆಚರಿಸಬೇಕು, ಮದ್ಹ್ ಕೀರ್ತನೆಗಳನ್ನು ಅಧಿಕಗೊಳಿಸಬೇಕೆಂದು ಅವರು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.