ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್) : SKSSF ವಿಟ್ಲ ವಲಯದ ವತಿಯಿಂದ ಮುಸ್ಲಿಂ ಸಮುದಾಯದ ವಿರುದ್ದ ನಡೆಯುತ್ತಿರುವ ನಿರಂತರ ದೌರ್ಜನ್ಯ, ಪ್ರಚೋದನಕಾರಿ ಹೇಳಿಕೆ ಹಾಗೂ ಪ್ರವಾದಿ (ಸ.ಅ) ನಿಂದನೆಯನ್ನು ವಿರೋಧಿಸಿ ವಿಟ್ಲ ಜಂಕ್ಷನಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ C.H ಇಬ್ರಾಹಿಂ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು. ರಫೀಕ್ ಮುಸ್ಲಿಯಾರ್ ಕಡಂಬು ಎಲ್ಲರನ್ನೂ ಸ್ವಾಗತಿಸಿದರು.
ಮುಖ್ಯ ಪ್ರಭಾಷಣ ನಡೆಸಿದ ಉವೈಸ್ ತೋಕೆ ಭಾರತ ದೇಶದ ಸೌಹಾರ್ದತೆಯ ಪರಂಪರೆಯನ್ನು, ಪ್ರವಾದಿ(ಸ್ವ.ಅ) ಕರುಣೆಯ, ಮಮತೆಯ ಉದಾತ್ತವಾದ ಸಂದೇಶವನ್ನು ಸಾರಿದರು. ರಾಜಕೀಯ ಹಿತಾಸಕ್ತಿಗಾಗಿ ಧರ್ಮದ ಗಂಧ ಗಾಳಿ ತಿಳಿಯದ ಧರ್ಮದ ಸಂರಕ್ಷರೆಂಬ ಸ್ವಯಂ ಘೋಷಿತ ಕೆಲವೊಂದು ಸೋ ಕಾಲ್ಡ್ ಬಾಡಿಗೆ ಭಾಷಣಕಾರರಿಂದ ಧರ್ಮವನ್ನು ಕಲಿಯದೆ ಧರ್ಮಗುರುಗಳಿಂದ ಧರ್ಮ ಕಲಿತು ಧರ್ಮದ ತಿರುಳು ಅರಿತು ಸಮಾಜದಲ್ಲಿ ಸೌಹಾರ್ದತೆ ಕಾಪಾಡಬೇಕೆಂದು ಕರೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.