ವಿಶ್ವ ಕನ್ನಡಿಗ ನ್ಯೂಸ್
ಮಂಗಳೂರು (www.vknews.com): ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೊಂದಿಗೆ ಬೆರೆಯಬೇಕು. ಸರ್ಕಾರದಿಂದ ನೀಡಿರುವ ಸೌಲಭ್ಯವನ್ನು ಸದುಪಯೋಗ ಪಡಿಸುವುದರೊಂದಿಗೆ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.
ಅವರು ಇತ್ತೀಚೆಗೆ ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡುವುದರೊಂದಿಗೆ ಸರಕಾರದಿಂದ ಅವರುಗಳಿಗೆ ನೀಡಿರುವ ಮೂಲಭೂತ ಸೌಕರ್ಯಗಳನ್ನು ತಲುಪಿಸುವ ಕೆಲಸವಾಗಬೇಕು ಎಂದರು.
ಅವರುಗಳಿಗೆ ಗುರುತಿನ ಚೀಟಿ ನೀಡಲು ಮಾಹಿತಿಯನ್ನು ಸಂಬಂಧಪಟ್ಟ ಕಚೇರಿಯಲ್ಲಿ ಸಂಗ್ರಹಿಸಿ ನೀಡಬೇಕು ಎಂದ ಅವರು, ಗುರುತಿನ ಚೀಟಿ ನಕಲು ಆಗದಂತೆ ಹಾಗೂ ಇತರರಿಗೆ ಲಭ್ಯವಾಗದಂತೆ ಎಚ್ಚರ ವಹಿಸಬೇಕು ಎಂದರು.
ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೋಸ್ಕರ ಜಾರಿಗೆ ತಂದಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ, ಅವರನ್ನು ಫಲಾನುಭವಿಗಳನ್ನಾಗಿಸಬೇಕು ಎಂದರು.
ಜಿಲ್ಲೆಯಲ್ಲಿ ಮೈತ್ರಿ ಯೋಜನೆಯಡಿ 22 ಫಲಾನುಭವಿಗಳಿದ್ದಾರೆ. ಅವರುಗಳಿಗೆ ಸರಿಯಾಗಿ ಪಿಂಚಣಿ ಬರುತ್ತಿಲ್ಲ ಎಂಬ ಬಗ್ಗೆ ದೂರು ಕೇಳಿ ಬರುತ್ತಿದೆ. ಈ ಬಗ್ಗೆ ಕಂದಾಯ ಇಲಾಖೆಯ ಶಿರಾಸ್ಥಿದಾರರು ಗಮನಹರಿಸುವುದರೊಂದಿಗೆ ಎಲ್ಲಾ ಫಲಾನುಭವಿಗಳಿಗೆ ಪಿಂಚಣಿ ದೊರೆಯುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಒದಗಿಸಲು ಜಾಗ ಗುರುತಿಸುವುದರೊಂದಿಗೆ ಅವರುಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅರ್ಹರಿಗೆ ನಿವೇಶನ ನೀಡಬೇಕು ಎಂದರು.
ಹಿಂದುಕುಷ್ಟ್ ನಿವಾರಣ್ ಸಂಘ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ದಮನಿತ ಮಹಿಳೆಯರಿಗೆ ಸೂಕ್ತ ಸಲಹೆ ನೀಡಿ ಅವರನ್ನು ಕೌನ್ಸಿಲಿಂಗ್ ನಡೆಸಿ ಅದರಿಂದ ಹೊರತರುವ ಪ್ರಯತ್ನ ನಡೆಸಬೇಕು. ಇದರಲ್ಲಿ 10 ಮಂದಿ ಎಚ್.ಐ.ವಿ ಸೋಂಕಿತರಿದ್ದು, ಅವರನ್ನು ಸರಿಯಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಬೇಕು. ಅಲ್ಲದೇ ಎಲ್ಲಾ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಒಂದು ಶಿಬಿರ ಆಯೋಜಿಸಿ ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ದಮನಿತ ಮಹಿಳೆಯರಿಗೆ ಪಡಿತರ ಚೀಟಿಗಳನ್ನು ನೀಡಬೇಕು ಎಂದ ಅವರು, ಈಗಾಗಲೇ ಗುರುತಿಸಿರುವ 17 ದಮನಿತ ಮಹಿಳೆಯರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿ.ಪಿ.ಎಲ್ ಕಾರ್ಡ್ನ್ನು ಶೀಘ್ರವಾಗಿ ನೀಡಬೇಕು ಎಂದರು.
ಪ್ರಸ್ತುತ ಸಾಲಿನಲ್ಲಿ ಧನಶ್ರೀ ಯೋಜನೆಯಡಿ 8 ಜನರಿಗೆ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ವಿಳಂಬವಿಲ್ಲದೆ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್, ವೆನ್ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಶಾನ್ಭೋಗ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
(www.vknews.com) : ಚರಿತ್ರೆ ಪ್ರಸಿದ್ಧವಾದ ವಲಿಯು ಲ್ಲಾಹಿ ದರ್ಗಾ ಷರೀಫ್ ಪೇರಡ್ಕದಲ್ಲಿ ವರ್ಷಮ್ಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭಕ್ಕೆ ಮಾರ್ಚ 5 ರಂದು ಚಾಲನೆ ನೀಡಲಾಯಿತು.
ಪೇರಡ್ಕ ಜಮಾಅತ್ ಅಧ್ಯಕ್ಷರಾದ ಎಸ್ ಆಲಿ ಹಾಜಿ ದ್ವಜಾರೋಹಣ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು,ಪೇರಡ್ಕ ಖತೀಬ್ ಉಸ್ತಾದ್ ಸುಹೈಲ್ ದಾರಿಮಿ ದುಹಾ ನೇತೃತ್ವ ವಹಿಸಿದ್ದರು.
ಬಳಿಕ ದರ್ಗಾ ಅಲಂಕಾರ ಮತ್ತು ದ್ವಜರೋಹಣ ಕಾರ್ಯಕ್ರಮವನ್ನು ಪೇರಡ್ಕ ಜಮಾಅತ್ ಗೌರವಾಧ್ಯಕ್ಷರಾದ ಟಿ,ಎಂ, ಶಾಹಿದ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಝಾಕ್ ಹಾಜಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್, ಇಬ್ರಾಹಿಂ ಕರಾವಳಿ ,ಮಹಮ್ಮದ್ ಕುಂಞ ತೆಕ್ಕಿಲ್, ಸದರ್ ಉಸ್ತಾದ್ ಜಕರಿಯ,ಇಬ್ರಾಹಿಂ ಸೆಟ್ಯಡ್ಕ, ರಿಯಾಝ್ ಕಲ್ಲುಗುಂಡಿ,ಎನ್ ಎಚ್ ಹಾರೀಸ್,ಮುನೀರ್ ದಾರಿಮಿ, ಪಾಂಡಿ ಅಬ್ಬಾಸ್, ಐ ಜಿ . ಇಸ್ಮಾಯಿಲ್ . ಅಶ್ರಫ್ ತರ್ಲಿ.ಬಶೀರ್ ತೆಕ್ಕಿಲ್,ಫಿ ಕೆ,ಉಮ್ಮರ್,ಕಾದರ್ ಮೊಟ್ಟೆ0ಗಾರ್,ಅಶ್ರಫ್ ಟರ್ಲಿ,MRDA ಅದ್ಯಕ್ಶಜರಾದ ಝಕೀರ್ ಹುಸೈನ್ ಶಾಫಿ ಕಲ್ಲುಗುಂಡಿ .ಉಪಸ್ಥಿತರಿದ್ದರು.
ಅಬುಧಾಬಿ (www.vknews.com) : ಸಂಯುಕ್ತ ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ನೂರಾರು ಯುವಕ ಯುವತಿಯರಿಗೆ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ವತಿಯಿಂದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ -2021 ಎಂಬ ಕಾರ್ಯಕ್ರಮ ಫೆಬ್ರವರಿ 26ರಂದು ಜೂಮ್ ಅಂತರ್ಜಾಲದ ಮೂಲಕ ನಡೆಯಿತು , ಈ ಒಂದು ಕಾರ್ಯಕ್ರಮಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಿವಿಧ ಎಮಿರೇಟುಗಳಿಂದ ಕೆಲಸ ಹುಡುಕುವ ಹಲವು ಕನ್ನಡಿರು ಪಾಲ್ಗೊಂಡು ನುರಿತ ತರಬೇತುದಾರರಿಂದ ಜಾಬ್ ಇಂಟರ್ವ್ಯೂ ಹೇಗೆ ಎದುರಿಸಬೇಕು, ಯಾವ ರೀತಿಯಲ್ಲಿ ಯಾವ ಯಾವ ಕಡೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಮುಂತಾದ ಹತ್ತು ಹಲವು ವಿಷಯದ ಬಗ್ಗೆ ಕೂಲಂಕುಷವಾಗಿ ಮಾಹಿತಿಯನ್ನು ಪಡೆದುಕೊಂಡರು ಹಾಗು ಹಲವು ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಿಂದ ಹಲವು ರೀತಿಯ ಉದ್ಯೋಗ ಅವಕಾಶ ಲಭಿಸಿತು.
ದುಬೈ ಸಮಯ ಸರಿಯಾಗಿ ಸಂಜೆ 5ಘಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಯುಎಇ, ಭಾರತದ ರಾಷ್ಟ್ರ ಗೀತೆ, ಕರ್ನಾಟಕ ನಾದ ಗೀತೆ ಮೂಲಕ ಅಧಿಕೃತ ಚಾಲನೆ ನೀಡಲಾಯಿತು, ಹೆಮ್ಮೆಯ ಕನ್ನಡಿಗರು ತಂಡದ ಮಹಿಳಾ ಘಟಕದ ಸಂಚಾಲಕಿಯಾದ ಶ್ರೀಮತಿ ಹಾದಿಯ ಮಂಡ್ಯ ಅವರು ಸಭೆಗೆ ಆಗಮಿಸಿದ ಸರ್ವ ಗಣ್ಯರನ್ನು , ಅಭ್ಯರ್ಥಿಗಳನ್ನು, ವೀಕ್ಷಕರನ್ನು ಮತ್ತು ಮಾರ್ಗದರ್ಶಕರನ್ನು ಸ್ವಾಗತ ಮಾಡಿದರು, ತಂಡದ ಮಹಿಳಾ ಘಟಕದ ಮತ್ತೊಬ್ಬರು ಸಂಚಾಲಕಿಯಾದ ಶ್ರೀಮತಿ ಪಲ್ಲವಿ ದಾವಣಗೆರೆ ಅವರು ಇಂದಿನ ಕಾರ್ಯಕ್ರಮದ ಉದ್ದೇಶ ತಿಳಿಸಿದರು ಹಾಗು ಹೆಮ್ಮೆಯ ಕನ್ನಡಿಗರು ಮಾಡಿದ ಕಾರ್ಯಗಳ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ತಂಡವು ಮಾಡಲಿರುವ ಕಾರ್ಯಕ್ರಮದ ಮತ್ತು ಕಾರ್ಯಗಳ ಬಗ್ಗೆ ಹಾಗು ತಂಡದ ಸರ್ವ ಸಮಿತಿ ಸದಸ್ಯರ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರು ಅಲಂಕರಿಸಿ ತಂಡದ ಕಾರ್ಯಗಳು ಮತ್ತು ತಂಡಕ್ಕೆ ಯುಎಇ ಕನ್ನಡಿಗರ ಬೆಂಬಲ ಮುಂತಾದ ಹಿತನುಡಿಗಳನ್ನು ನುಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯುಎಇಯಲ್ಲಿನ ಕನ್ನಡ ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ಪೋಷಕರು ಹೆಮ್ಮೆಯ ಕನ್ನಡಿಗರು ತಂಡದ ಗೌರವಾಧ್ಯಕ್ಷರು ಎಮ್ಸ್ಕ್ವೇರ್ ಎಂಜಿನೀರಿಂಗ್ ಕನ್ಸಲ್ಟೆಂಟ್ ಮಾಲಿಕರಾದ ಶ್ರೀಯುತ ಮೊಹಮ್ಮದ್ ಮುಸ್ತಫಾ ಅವರು ಪಾಲ್ಗೊಂಡು ಕೆಲಸ ಹುಡುಕುವ ಅಭ್ಯರ್ಥಿಗಳಿಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು, ಕಾರ್ಯಕ್ರಮದಲ್ಲಿ ವೃತ್ತಿ ಮಾರ್ಗದರ್ಶಕರಾಗಿ ಅಲ್ ಐನ್ ಜೂನಿಯರ್ ಸ್ಕೂಲ್ ಪರ್ಸನಾಲಿಟಿ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಉಮ್ಮರ್ ಫಾರೂಕ್, ಪಾನ್ ವರ್ಲ್ಡ್ ಎಜುಕೇಶನ್ ನಿರ್ದೇಶಕರಾದ ಶ್ರೀಯುತ ರಾಘವೇಂದ್ರ, ವೃತ್ತಿ ಮಾರ್ಗದರ್ಶಕ ತಜ್ಞರು ಮೋಟಿವೇಷನಲ್ ಮಾತುಗಾರರು ಆದ ಶ್ರೀಯುತ ಗುರು ನಾಡಕರ್ಣಿ ಮತ್ತು ಎಚ್ ಆರ್ ಎಕ್ಸಿಕ್ಯೂಟಿವ್ ಶ್ರೀಮತಿ ರಾಧಾ ಜೀವನ್ ಅವರು ಕೆಲಸ ಹುಡುಕ್ಕುತ್ತಿರುವ ಅಭ್ಯರ್ಥಿಗಳಿಗೆ ಪ್ರೊಜೆಕ್ಟರ್ ಮುಂತಾದ ಸಲಕರಣೆ ಉಪಯೋಗಿಸಿ ಬಹಳ ಉತ್ತಮ ರೀತಿಯಲ್ಲಿ ಮನಸ್ಸಿನಲ್ಲಿ ನಾಟುವ ಹಾಗೆ ಸಿ ವಿ ಹೇಗೆ ಇರಬೇಕು, ಸಂದರ್ಶನ ಹೇಗೆ ಎದುರಿಸಬೇಕು, ಯಾವ ಯಾವ ಕಡೆಗಳಲ್ಲಿ ಕೆಲಸಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಇತ್ಯಾದಿ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಜಾಬ್ ಪೋರ್ಚಲ್ ವಿಭಾಗದ ಸಂಚಾಲಕರಾದ ನವೀನ ಬೆಂಗಳೂರು ಅವರು ಪ್ರೇರಣಾ ಮಾತುಗಳಿಂದ ತಮ್ಮದೇ ಶೈಲಿಯಲ್ಲಿ ಅಭ್ಯರ್ಥಿಗಳನ್ನು ಹುರಿದುಂಬಿಸುತ್ತಾ ಬಹಳ ಅಚ್ಚುಕಟ್ಟಾಗಿ ಕೊನೆಯವರೆಗೂ ನೆರವೇರಿಸಿದರು, ಕರ್ನಾಟಕ ಏನ್ ಆರ್ ಐ ಫೋರಮ್ ಯುಎಇ ಘಟಕದ ಅಧ್ಯಕ್ಷರಾದ ಶ್ರೀಯುತ ಪ್ರವೀಣ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭ್ಯರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದು ಅಲ್ಲದೆ 8ಜನ ಕನ್ನಡಿಗರಿಗೆ ತಮ್ಮ ಹೋಟೆಲಿನಲ್ಲಿ ಕೆಲಸವನ್ನು ನೀಡಿದರು, ತಂಡದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಅವರು ಕೆಲಸ ಹುಡುಕಲು ಕೆಲವು ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಹೆಮ್ಮೆಯ ಕನ್ನಡಿಗರು ತಂಡದ ದುಬೈ ಕನ್ನಡ ಸಾಹಿತ್ಯ ಘಟಕದ ಮುಖ್ಯ ಸಂಚಾಲಕರಾದ ವಿಷ್ಣುಮೂರ್ತಿ ಮೈಸೂರು ಅವರು ಬಾಗವಹಿಸಿದ ಎಲ್ಲಾ ಮಾರ್ಗದರ್ಶಕರಿಗೂ, ಉದ್ಯಮಿಗಳಿಗೂ, ಅತಿಥಿಗಳಿಗೂ, ಅಭ್ಯರ್ಥಿಗಳಿಗೂ, ವೀಕ್ಷರಿಗೂ, ನಿರೂಪಕರಿಗೂ ಹಾಗು ಕಾರ್ಯಕ್ರಮ ಯಶಸ್ವಿಯಾಗಲು ಬಹಳ ಶ್ರಮಪಟ್ಟ ತಂಡದ ಮುಖ್ಯ ಕಾರ್ಯದರ್ಶಿ ಸೆಂತಿಲ್ ಬೆಂಗಳೂರು ಮತ್ತು ತಂಡದ ಮಾಧ್ಯಮ ಘಟಕದ ಸದಸ್ಯರಾದ ಸಾದತ್ ಬೆಂಗಳೂರು ಅವರಿಗೂ ಹಾಗು ತಂಡದ ಎಲ್ಲಾ ಸದಸ್ಯರಿಗೂ ವಂದನಾರ್ಪಣೆಗಳನ್ನು ತಿಳಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಇಸ್ಲಾಮಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಮಾತುಕತೆ ಮೂಲಕ ಗಡಿ ವಿವಾದ ಇತ್ಯರ್ಥಕ್ಕೆ ನಾವು ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
We also demonstrated to the world Pakistan’s responsible behaviour in the face of India's irresponsible military brinkmanship, by returning the captured Indian pilot. We have always stood for peace & remain ready to move forward to resolve all outstanding issues through dialogue. — Imran Khan (@ImranKhanPTI) February 27, 2021
We also demonstrated to the world Pakistan’s responsible behaviour in the face of India's irresponsible military brinkmanship, by returning the captured Indian pilot. We have always stood for peace & remain ready to move forward to resolve all outstanding issues through dialogue.
— Imran Khan (@ImranKhanPTI) February 27, 2021
ಈ ಕುರಿತಂತೆ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ‘ಭಾರತದ ಜತೆಗಿನ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಾವು ಸಿದ್ಧ, ಗಡಿ ನಿಯಂತ್ರಣ ರೇಖೆಯಲ್ಲಿ ಕದನವಿರಾಮ ಜಾರಿಗೊಳಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಉಭಯ ದೇಶಗಳ ನಡುವೆ ಮತ್ತಷ್ಟು ಸೌಹಾರ್ದಯುತ ಕ್ರಮಗಳನ್ನು ಕೈಗೊಳ್ಳಲು ಪೂರಕ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಂತೆ ಕಾಶ್ಮೀರ ಜನತೆಯ ಬೇಡಿಕೆಗಳು ಮತ್ತು ಹಕ್ಕುಗಳನ್ನು ಈಡೇರಿಸಲು ಭಾರತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
(ವಿಶ್ವ ಕನ್ನಡಿಗ ನ್ಯೂಸ್) : ಟೀಂ ಇಂಡಿಯಾ ಮಾಜಿ ದಾಂಡಿಗ ಯೂಸೂಫ್ ಪಠಾಣ್ ಹಾಗು ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
I thank my family, friends, fans, teams, coaches and the whole country wholeheartedly for all the support and love. #retirement pic.twitter.com/usOzxer9CE — Yusuf Pathan (@iamyusufpathan) February 26, 2021
I thank my family, friends, fans, teams, coaches and the whole country wholeheartedly for all the support and love. #retirement pic.twitter.com/usOzxer9CE
— Yusuf Pathan (@iamyusufpathan) February 26, 2021
ಟ್ವೀಟ್ ಮೂಲಕ ಇಬ್ಬರೂ ಆಟಗಾರರು ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯೂಸೂಫ್ ಪಠಾಣ್ ಅವರು 57 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 810 ರನ್ ಬಾರಿಸಿದ್ದಾರೆ. 123 ಅವರ ಗರಿಷ್ಠ ಮೊತ್ತವಾಗಿದೆ. ಬೌಲಿಂಗ್ ನಲ್ಲೂ ಮಿಂಚಿದ್ದ ಅವರು 33 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು 22 ಟಿ20 ಪಂದ್ಯಗಳನ್ನಾಡಿರುವ ಅವರು 236 ರನ್ ಬಾರಿಸಿದ್ದಾರೆ.
Thankyou all for your love and support throughout my career. Today I hang up my boots. 🙏🙏❤️ #ProudIndian pic.twitter.com/ht0THqWTdP — Vinay Kumar R (@Vinay_Kumar_R) February 26, 2021
Thankyou all for your love and support throughout my career. Today I hang up my boots. 🙏🙏❤️ #ProudIndian pic.twitter.com/ht0THqWTdP
— Vinay Kumar R (@Vinay_Kumar_R) February 26, 2021
2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ವಿನಯ್ ಕುಮಾರ್ 31 ಏಕದಿನ ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ. ಇನ್ನು 9 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದ ಅವರು ಒಂದು ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದಾರೆ.
ಅಬುಧಾಬಿ (www.vknews.com) : ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ಈ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ತೆರಳುತ್ತಿದ್ದರು, ಆದರೆ ಕಳೆದ ಹಲವು ದಿನಗಳಿಂದ ವಿಶ್ವದಾದ್ಯಂತ ಕೋರೋನ ಆರ್ಭಟ ಹೆಚ್ಚಿದ್ದರಿಂದ ಸೌದಿ ಮತ್ತು ಕುವೈತ್ ದೇಶಗಳು ದುಬೈಯಿಂದ ಸಹ ವಾಯು ಮಾರ್ಗ ಮತ್ತು ಗಡಿಗಳನ್ನು ಮುಚ್ಚಿ ಪ್ರಯಾಣ ನಿರ್ಬಂಧ ಹೇರಿದ್ದದ್ದು ಸಾವಿರಾರು ಅನಿವಾಸಿಗಳು ದುಬೈಯಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೆ ಒಳಪಟ್ಟರು .
ಹೀಗೆ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ಮರಳಿ ಭಾರತಕ್ಕೆ ತೆರಳಲು ದುಬೈಯಲ್ಲಿರುವ ಭಾರತೀಯ ದೂತಾವಾಸ ಕೇಂದ್ರ ಉಚಿತವಾಗಿ ವಿಮಾನ ಸೇವೆಯನ್ನು ಕಲ್ಪಿಸಿತ್ತು , ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಸೇವೆಯನ್ನು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಹೆಮ್ಮೆಯ ದುಬೈ ಕನ್ನಡ ಸಂಘವು ಕಾನ್ಸುಲೇಟಿನಲ್ಲಿ ಅರ್ಜಿ ಸಲ್ಲಿಸಿ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು, ದುಬೈ ಕಾನ್ಸುಲೇಟ್ ಅವರು ಇಂದು ದುಬಾಯಿಂದ ಮೊದಲನೇ ಹಂತದಲ್ಲಿ ಹಲವು ಅನಿವಾಸಿಗಳನ್ನು ತಾಯಿನಾಡು ಸೇರಿಸಿದ್ದು ಅದರಲ್ಲಿರುವ ಅನಿವಾಸಿ ಕನ್ನಡಿಗರಿಗೆ ಇಂದು ದುಬೈ ಹೆಮ್ಮೆಯ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಕಾರ್ಯದರ್ಶಿ ಸೆಂತಿಲ್ ಬೆಂಗಳೂರು ಮತ್ತು ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಅವರು ವಿಮಾನ ನಿಲ್ದಾಣಕ್ಕೆ ಹೋಗಿ ಉಚಿತ ವಿಮಾನ ಟಿಕೇಟನ್ನು ಹಸ್ತಾಂತರಿಸಿದರು, ಸಂಘದ ಅಧ್ಯಕ್ಷರು ದುಬೈ ಭಾರತೀಯ ಕಾನ್ಸುಲೇಟ್ ಮತ್ತು ಟಿಕೆಟ್ ಪಡೆಯಲು ಸಹಾಯ ಮಾಡಿದ ಕೇರಳದ ಕೆ ಎಮ್ ಸಿ ಸಿ ಸಂಘಟನೆಗೂ ಧನ್ಯವಾದಗಳನ್ನು ತಿಳಿಸಿದರು.
(www.vknews.com) : ಬೆಳ್ತಂಗಡಿಯ ತೀರಾ ಹತ್ತಿರವಿರುವ ಪ್ರತಿಷ್ಠಿತ ಊರು ಉಜಿರೆ. ಇಲ್ಲಿನ ನಿವಾಸಿ ಅಬ್ದುಲ್ ರಝಾಕ್. ಇದೀಗ ದುಬೈಯ ಅನಿವಾಸಿ ಭಾರತೀಯ. ಕಳೆದ 13 ವರ್ಷಗಳಿಂದ ದುಬೈ ವಾಸ. ಅಲ್ ಸೀರ್ ಎಂಬ ಕಂಪೆನಿಯಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ.
ಪತ್ನಿ ಮಕ್ಕಳ ಜೊತೆಗಿದ್ದರೂ ಬಿಡುವಿನ ಸಮಯ ಮಾನವೀಯ ಸೇವೆಗಾಗಿ ಮೀಸಲು. ಇದು ಇವರ ವಿಶೇಷತೆ. ಎಲ್ಲೆಲ್ಲೂ ಸ್ವಾರ್ಥವೇ ತುಂಬಿ ತುಳುಕುತ್ತಿರುವ ಸಂಧರ್ಭದಲ್ಲಿ ಇಂತಹ ವ್ಯಕ್ತಿಗಳು ಕಾಣಸಿಗುವುದು ಬಹಳ ಅಪರೂಪ. ಅದಾಗಲೇ ಕೋವಿಡ್ ಸಂಧರ್ಭದಲ್ಲಿ ಸ್ವ ರಕ್ಷಣೆಗಾಗಿ ಪ್ರತಿಯೊಬ್ಬರೂ ಆದ್ಯತೆ ನೀಡುತ್ತಿದ್ದ ಸಮಯ. ಆಗ ರಝಾಕ್ ರವರ ಮಾನವೀಯ ಗುಣಗಳು ಹೊರಬಂದ, ಆ ಅಪೂರ್ವ ಕ್ಷಣಗಳನ್ನು ಶಬ್ದಗಳಲ್ಲಿ ವಿವರಿಸಲು ಅಸಾಧ್ಯ. ಗಲ್ಫ್ ನಾದ್ಯಂತ ವಿಶೇಷವಾಗಿ ಅತೀ ಹೆಚ್ಚು ಪ್ರಸಾರಿಸಲ್ಪಡುವ ಪತ್ರಿಕೆ. “ಗಲ್ಫ್ ನ್ಯೂಸ್”. ಇವರ ಸೇವೆಯನ್ನು ಈ ಪತ್ರಿಕೆಯು ಎಳೆ ಎಳೆಯಾಗಿ ವಿವರಿಸಿದೆ. ಅಲ್ಲಿನ ಟಿ.ವಿ.ಯಲ್ಲೂ , ರೇಡಿಯೋದಲ್ಲೂ ಪ್ರಸಾರಿತವಾಗಿದೆ.
ಇದರಿಂದ ಉತ್ತೇಜಿತಗೊಂಡು ಅವರು ಕೆಲವು ತನ್ನ ಸ್ನೇಹಿತರ ಜೊತೆಗೂಡಿ ಇಂದಿಗೂ ನಿರಂತರವಾಗಿ ಆ ಮೌಲ್ಯಗಳನ್ನು ಪಾಲಿಸುವಲ್ಲಿ ತನ್ನದೇ ಆದ ಮಹತ್ತರ ಪಾತ್ರವನ್ನು ವಹಿಸಿರುವುದು. ಇವರ ಹೃದಯ ವೈಶಾಲ್ಯತೆಗೆ ಎತ್ತಿ ಹಿಡಿದ ಕನ್ನಡಿಯಾಗಿದೆ. ಅದೆಷ್ಟೋ ಕುಟುಂಬಗಳು ಕಂಗಾಲಾಗಿ ರೇಷನ್ ಗಾಗಿ, ಊಟಕ್ಕಾಗಿ, ವಸತಿಗಾಗಿ, ಪತ್ನಿ ಮಕ್ಕಳ ಆರೋಗ್ಯಕ್ಕಾಗಿ ಇಂದಿಗೂ ಇವರನ್ನು ಸಂಪರ್ಕಿಸುತ್ತಿದ್ದಾರೆ. ಮಾತ್ರವಲ್ಲ ದುಬೈಯಿಂದ ವಾಪಾಸಾಗಿ ಭಾರತದಲ್ಲಿದ್ದೂ ಸಂಕಷ್ಟಕ್ಕಾಗಿ ಇವರ ಮೊರೆ ಹೋಗುತ್ತಿದ್ದಾರೆ.
ಎಷ್ಟೇ ಕಾರ್ಯನಿಬಿಡತೆಯಲ್ಲಿದ್ದರೂ ಅವರೊಂದಿಗೆ ಹೃದಯವಂತಿಕೆಯನ್ನು ತೋರಿ ಸಾಧ್ಯವಿದ್ದಷ್ಟು ಸಹಾಯವನ್ನು ನೀಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ಬಿಲ್ಲನ್ನು ಮಾಫ್ ಮಾಡಿಸುತ್ತಿದ್ದಾರೆ. ಅಥವಾ ಆದಷ್ಟು ಕಡಿಮೆ ಮಾಡಿಸುತ್ತಿದ್ದಾರೆ. ಇದು ಇವರ ನಿತ್ಯದ ಕಾಯಕವಾಗಿದೆ.
ನನ್ನನ್ನು ಆಗಾಗ ಸಂಪರ್ಕಿಸುತ್ತಿದ್ದು ತನ್ನ ಕಾರ್ಯಕಲಾಪಗಳನ್ನು ವಿವರಿಸುತ್ತಿರುತ್ತಾರೆ. ಮಾನವ ಸೇವೆಯ ಬಗ್ಗೆ ಅವರ ಹೃದಯ ಮಿಡಿತವನ್ನು ಅವರಿಂದಲೇ ಕೇಳಿಸಿಕೊಂಡಲ್ಲಿ ಖಂಡಿತವಾಗಿಯೂ ಅಶ್ರುಧಾರೆಯು ಹರಿಯದೆ ಇರಲಾರದು.
ಕರ್ನಾಟಕದವರೇ ಆದ ಇವರ ಈ ಕಳಕಳಿಯನ್ನು ಕಂಡು ನಮ್ಮ ಕರ್ನಾಟಕ ಸರಕಾರವು ಮಾನವೀಯ ಮೌಲ್ಯಗಳಿಗಾಗಿ ನೀಡುವ ಪ್ರಶಸ್ತಿಯನ್ನು ಇವರಿಗೆ ನೀಡಬೇಕು ಎಂದು ನನ್ನ ಮನದಾಳದ ಬಯಕೆ.
ಅಲ್ಲಾಹು ಇನ್ನಷ್ಟು ಎತ್ತರಕ್ಕೆ ಇವರನ್ನು ಏರಿಸಲಿ. ಇವರು ಕೆಲಸ ಮಾಡುತ್ತಿರುವ ಕಂಪೆನಿಯು ಇವರಿಗೆ ಉನ್ನತ ಮಟ್ಟದ ಜವಾಬ್ದಾರಿಯನ್ನು ನೀಡಲಿ. ತನ್ನ ಸಹಾಯಹಸ್ತವನ್ನು ಇನ್ನಷ್ಟು ವಿಸ್ತರಿಸಲಿಕ್ಕಾಗಿ ವಿಶೇಷಃ ಕರುಣೆಯನ್ನು ಇವರ ಮೇಲೆ ತೋರಲಿ. ಆಮೀನ್.
– ಮೌಲಾನಾ ಅಬ್ದುಲ್ ಹಫೀಝ್, ಅಲ್, ಕಾಸಿಮೀ, ಕಾರ್ಕಳ.
ಲೇಖನ : ಎಸ್.ಎ.ರಹಿಮಾನ್ ಮಿತ್ತೂರು, ಸೌದಿ ಅರೇಬಿಯಾ
(www.vknews.com) : ವಿದೇಶಗಳಿಂದ ತಾಯ್ನಾಡಿಗೆ ಪ್ರಯಾಣಿಸುವವರಿಗೆ ಫೆಬ್ರವರಿ 22 ರಿಂದ ಭಾರತ ಸರಕಾರವು ಕೊವಿಡ್ ನೆಗೆಟಿವ್ ಸರ್ಟಿಫಿಕೆಟ್ ಕಡ್ಜಾಯಗೊಳಿಸಿದ್ದು, ಯಾತ್ರಿಕರು ಪ್ರಯಾಣದ ಸಮಯದಲ್ಲಿ ತಮ್ಮ ಪ್ರಯಾಣದ 72 ತಾಸುಗಳೊಳಗೆ ನಡೆಸಿದ ಕೊವಿಡ್ ಪಿಸಿಆರ್ ಪರೀಕ್ಷೆಯ ನೆಗೆಟೆವ್ ವರದಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಮಾತ್ರವಲ್ಲ ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಈ ವರದಿಯ ಪ್ರತಿಯೊಂದನ್ನು ‘ಏರ್ ಸುವಿಧಾ’ ಪೋರ್ಟಲ್ ನಲ್ಲಿ ಅಪ್ಲೊಡ್ ಮಾಡಬೇಕು. ಇದರ ಹೊರತಾಗಿಯೂ ಭಾರತದಲ್ಲಿ ಬಂದಿಳಿದ ತಕ್ಷಣ ವಿಮಾನ ನಿಲ್ದಾಣದಲ್ಲಿಯೇ ತಮ್ಮ ಸ್ವಂತ ಖರ್ತಿನಲ್ಲೇ ಪುನಃ ಕೊವಿಡ್ ಪಿಸಿಆರ್ ಪರೀಕ್ಷೆ ಮಾಡಿಸಬೇಕಾಗುತ್ತದೆ ಇದು ಕೇಂದ್ರ ಸರ್ಕಾರ ಮಾಡಿರುವ ಹೊಸ ನಿಯಮ.
ಸುಮಾರು 5000 ರೂಪಾಯಿ ತೆತ್ತು ತಮ್ಮ ಪ್ರಯಾಣದ ಮೂರು ದಿನಗಳ ಮೊದಲು ವಿದೇಶದಲ್ಲಿ ಮಾಡಿಸಿದ ಕೋವಿಡ್ ನೆಗೆಟಿವ್ ರಿಪೋರ್ಟ್ ಕೈಯಲ್ಲಿರುವಾಗ ಪುನಃ 1500 ರೂಪಾಯಿಗಳನ್ನು ವ್ಯಯಿಸಿ ವಿಮಾನ ನಿಲ್ದಾಣದಲ್ಲಿ ಕೊವಿಡ್ ಪಿಸಿಆರ್ ಪರೀಕ್ಷೆ ಮಾಡಿಸುವ ಔಚಿತ್ಯವಾದರೂ ಏನು? ಇದು ಅನಿವಾಸಿಗಳ ಗಾಯದ ಮೇಲಿನ ಬರೆಯಲ್ಲವೇ? ಕೊವಿಡ್ ಸಂಕಷ್ಟದಿಂದಾಗಿ ವ್ಯಾಪಾರದಲ್ಲಿ ಕೈಸುಟ್ಟುಕೊಂಡು ಅಥವಾ ಉದ್ಯೋಗವನ್ನು ಕಳೆದುಕೊಂಡು ಬರಿಗೈಯಲ್ಲಿ ತಾಯ್ನಾಡಿಗೆ ಮರಳುತ್ತಿರುವ ಅನಿವಾಸಿಗಳ ಮೇಲಿನ ಕೇಂದ್ರ ಸರಕಾರದ ಈ ತರದ ಗದಪ್ರಯೋಗವು ಖಂಡನೀಯವಾಗಿದೆ. ವಿದೇಶಗಳ ಅತ್ಯಾಧುನಿಕ ಲ್ಯಾಬ್ ಗಳಿಂದ ದೃಢೀಕರಿಸಿದ ಕೊವಿಡ್ ನೆಗೆಟಿವ್ ಸರ್ಟಿಫಿಕೆಟ್ ನಲ್ಲಿ ನಮ್ಮ ಸರಕಾರಕ್ಕೆ ವಿಶ್ವಾಸವಿಲ್ಲ ಎಂದ ಮೇಲೆ ವಿದೇಶದಲ್ಲಿ ಸುಮಾರು 5000 ರೂಪಾಯಿಗಳನ್ನು ವ್ಯಯಿಸಿ ಕಡ್ಡಾಯವಾಗಿ ಕೊವಿಡ್ ಟೆಸ್ಟ್ ಮಾಡಿಸುವ ಅಗತ್ಯವಾದರೂ ಏನು?
ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಯಾತ್ರಿಕರಿಗೆ ಭಾರತದಲ್ಲಿ ನಡೆಸುವ ಕೊವಿಡ್ ಪರೀಕ್ಷೆಯ ನಂತರ ವಿದೇಶದಲ್ಲಿ ಬೇರೊಂದು ಪಿಸಿಆರ್ ಪರೀಕ್ಷೆಯ ಅಗತ್ಯ ಇರುವುದಿಲ್ಲ ಆದರೆ ಭಾರತ ಸರಕಾರದ ಈ ಮಲತಾಯಿ ಧೋರಣೆಯು ಸಮಂಜಸವಲ್ಲ. ವಿದೇಶಗಳಿಂದ ತಾಯ್ನಾಡಿಗೆ ಬಂದಿಳಿಯುವ ಅನಿವಾಸಿ ಭಾರತೀಯರಿಗೆ ವಿಮಾನ ನಿಲ್ದಾಣದಲ್ಲಿಯೇ ಕಡ್ಡಾಯ ಮಾಡಿರುವ ಕೊವಿಡ್ ಪಿಸಿಆರ್ ಪರೀಕ್ಷೆಯನ್ನು ಕೇಂದ್ರ ಸರಕಾರವು ಪುನರ್ ಪರಿಶೀಲಿಸಿ ಆ ನಿಯಾಮವಳಿಗಳಿಗೆ ತಿದ್ದುಪಡಿ ಮಾಡುವ ಅಗತ್ಯವಿದೆ.
ದೇಶದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿರುವ ಅನಿವಾಸಿ ಭಾರತೀಯರನ್ನು ಪರಕೀಯರಂತೆ ಕಾಣುವ ಕೇಂದ್ರ ಸರಕಾರವು ತನ್ನ ಮನಸ್ಥಿತಿಯನ್ನು ಬದಲಾಯಿಸಿ ಎರಡೆರಡು ಬಾರಿ ಕಡ್ಡಾಯವಾಗಿಸಿದ ಕೊವಿಡ್ ಪಿಸಿಆರ್ ಪರೀಕ್ಷೆಯಲ್ಲಿ ಒಂದನ್ನು ಕೈಬಿಡುವ ಮೂಲಕ ಅನಿವಾಸಿಗಳ ಪಾಲಿಗೆ ಅಲ್ಪ ಸಾಂತ್ವನ ನೀಡುವ ಪ್ರಯತ್ನ ಮಾಡಬೇಕಿದೆ.
ಬೆಳ್ತಂಗಡಿ (www.vknews.com) : ಸಂಘಟನಾ ಕಾರ್ಯವೈಖರಿಯಲ್ಲಿ ನಿರತರಾಗಿದ್ದ ಇಬ್ಬರು ಪಿ ಎಫ್ ಐ ಅಮಾಯಕರನ್ನು ವಿನಾಕಾರಣ ಬಂಧಿಸಿ ,ಚಿತ್ರಹಿಂಸೆ ನೀಡಿದ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ರಾಷ್ಟ್ರ ವ್ಯಾಪ್ತಿಯಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು.
ಇದರ ಭಾಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ವತಿಯಿಂದ ಕಕ್ಕಿಂಜೆ, ಉಜಿರೆ, ಬೆಳ್ತಂಗಡಿ, ಕಾಜೂರು, ಗುರುವಾಯನಕೆರೆ, ಕನ್ನಡಿಕಟ್ಟೆ, ಪಿಳ್ಯ, ಪಡ್ಡಂದಡ್ಕ, ಮದ್ದಡ್ಕ, ಮಡಂತ್ಯಾರು, ಪುಂಜಾಲಕಟ್ಟೆ, ಪಾಂಡವರಕಲ್ಲು, ಮೂರುಗೋಳಿ, ಬಂಗೇರಕಟ್ಟೆ, ಕುದ್ರಡ್ಕ, ವಾಮದಪದವು ಮತ್ತು ಎನ್ ಸಿ ರೋಡ್ ಸೇರಿದಂತೆ 17 ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಘೋಷಣೆ ಮತ್ತು ಪ್ಲೆಕಾರ್ಡ್ ಪ್ರದರ್ಶನಗಳ ಮೂಲಕ ಉತ್ತರ ಪ್ರದೇಶ ಸರಕಾರ ಮತ್ತು ಉತ್ತರ ಪ್ರದೇಶ ಪೊಲೀಸರ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಸ್ಥಳೀಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗಿನ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಮೂಡುಬಿದಿರೆ (www.vknews.com) : ಜೈನಕಾಶಿ ಮೂಡುಬಿದಿರೆಯ ಬಡಗಬಸ್ತಿ ಯ ಭಗವಾನ್ ಶ್ರೀ ಚಂದ್ರಪ್ರಭಸ್ವಾಮಿಯ ರಥೋತ್ಸವ ಗುರುವಾರ ( 25/2/2021) ಅದ್ದೂರಿಯ ಜರಗಿತು .
‘ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’:
ಮೂಡುಬಿದಿರೆ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪಾವನ ಸಾನಿಧ್ಯವನ್ನು ವಹಿಸಿ , ಆಶೀರ್ವಚನ ನೀಡಿದರು.
ಅಳದಂಗಡಿ ಅರಮನೆಯ ಅರಸರದ ಡಾ. ಪದ್ಮಪ್ರಸಾದ್ ಅಜಿಲರು. ಶ್ರೀ ಕ್ಷೇತ್ರ ಧರ್ಮಸ್ಥಳ ಡಿ. ಸುರೇಂದ್ರ ಕುಮಾರ್ ಹೆಗ್ಗಡೆ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಹಿತ ಮೊದಲಾದ ಅನೇಕ ಗಣ್ಯ ಮಹನೀಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ ಆಶ್ರಯದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದದ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು , ಎಲ್ಲರ ಮೆಚ್ಚುಗೆ ಪಡೆಯಿತು . ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪಂಚಮಿ ಮಾರೂರು ಹಾಗೂ ಪ್ರಮಯಿ ಜೈನ್ ಮೂಡುಬಿದಿರೆ ನಿರೂಪಿಸಿದರು. ಚೇತನ ಕುಮಾರ್ ಜೈನ್ ವೇಣೂರು ಸಹಕರಿಸಿದರು.
ನಮ್ಮ ಜಾಲತಾಣದ ಇನ್ಸಾಗ್ರಾಂ,ಪೇಜ್ Follow ಮಾಡಿ ಮತ್ತು ಶೇರ್ ಮಾಡಿ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆಯಿರಿ
ನಮ್ಮ ಪೇಜ್ ನ್ನು Follow ಮಾಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ...
https://www.instagram.com/vknews_media/
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.