(www.vknews.in) : ಹೌದು., ಇದು ಕತಾರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದ ಸಂಪೂರ್ಣ ಭದ್ರತೆಯ ಉಸ್ತುವಾರಿಯನ್ನು ಹೊತ್ತುಕೊಂಡಿರುವ ಅಬ್ದುಲ್ಲಾ ನಸಾರಿ ಎಂಬ ಉನ್ನತ ಅಧಿಕಾರಿಯ ಮಾತುಗಳು. ನಾವು ಧರ್ಮ ಹಾಗೂ ನಮ್ಮ ತನವನ್ನು ಈ ಕೇವಲ 28 ದಿನಗಳಿಗಾಗಿ ಬದಲಾಯಿಸಲಾರೆವು. ನಮ್ಮ ನೆಲದ ಕಾನೂನು ಹಾಗೂ ಧರ್ಮವನ್ನು ಗೌರವಿಸುವವರು ಮಾತ್ರ ಈ ಬಾರಿಯ ವಿಶ್ವಕಪ್ ಫುಟ್ಬಾಲ್ ಪಂದ್ಯಾಟಗಳನ್ನು ನೋಡಲು ಕತಾರ್ ಗೆ ಬರಬಹುದು. ಅಂತಹವರನ್ನು ಮಾತ್ರ ನಾವು ಕತಾರ್ ಗೆ ಸ್ವಾಗತಿಸುತ್ತೇವೆ ಎಂದಿದ್ದಾರೆ ಅಬ್ದುಲ್ಲಾ ನಸಾರಿ.
ಸಾದಾರಣವಾಗಿ ವಿಶ್ವಕಪ್ ಫುಟ್ಬಾಲ್ ಪಂದ್ಯಾಟಗಳು ನಡೆಯುವ ಸ್ಥಳಗಳಲ್ಲಿ ಮದ್ಯ ಹಾಗೂ ವೇಶ್ಯಾವಟಿಕೆಗಳು ಸರ್ವೇಸಾಮಾನ್ಯವಾಗಿರುತ್ತದೆ. ಏಕೆಂದರೆ ವಿಶ್ವಕಪ್ ಫುಟ್ಬಾಲ್ ಆತಿಥ್ಯ ವಹಿಸುವುದೆಂದರೆ ಅದೊಂದು ಲಾಟರಿ ಹೊಡೆದಂತೆ. ಆ ದೇಶದ ಆರ್ಥಿಕ ಹಾಗೂ ಟೂರಿಸಂ ಕ್ಷೇತ್ರವು ಇದರಿಂದಾಗಿ ಸದೃಢ ಗೊಳ್ಳುತ್ತದೆ. ಇದರಲ್ಲಿ ಮದ್ಯ ಹಾಗೂ ವೇಶ್ಯಾವಟಿಕೆಯು ಪ್ರಮುಖ ಪಾತ್ರವಹಿಸುತ್ತದೆ. ಆದರೆ ಕತಾರ್ ಸರಕಾರವು ಇವೆರಡಕ್ಕೂ ನಿಷೇಧ ಹೇರಿದೆ. ಕೇವಲ ಫುಟ್ಬಾಲ್ ಎಂಬ ಆಟಕ್ಕೋಸ್ಕರ ನಮ್ಮ ಧರ್ಮ ಚೌಕಟ್ಟನ್ನು ನಾವು ಮೀರಲಾರೆವು ಎಂದು ಕಡಾಖಂಡಿತವಾಗಿ ಹೇಳಿದೆ.
ಇನ್ನು ಕತಾರ್ ತನ್ನ ದೇಶದಲ್ಲಿ ನಡೆಯುವ ಪ್ರತೀ ಫುಟ್ಬಾಲ್ ಪಂದ್ಯಾಟಗಳಲ್ಲಿ ಇಸ್ಲಾಮಿನ ಸಂಸ್ಕ್ರತಿಯನ್ನು ಪ್ರತಿಬಿಂಬಿಸಲು ಸಜ್ಜಾಗಿದೆ. ಈ ಬಾರಿಯ ವರ್ಲ್ಡ್ ಕಪ್ ಪಂದ್ಯಾಟವನ್ನು ವಿಶ್ವದಲ್ಲೇ ಮೊದಲ ಬಾರಿಗೆ ಪರಿಶುದ್ಧ ಕುರಾನ್ ವಚನದೊಂದಿಗೆ ಉದ್ಘಾಟಿಸಲಾಗಿದೆ. ಫುಟ್ಬಾಲ್ ಪಂದ್ಯಾವಳಿಗಳು ನಡೆಯುವ ಪ್ರತೀ ಸ್ಟೇಡಿಯಂಗಳಲ್ಲೂ ಪ್ರವಾದಿ ವಚನಗಳನ್ನು ಬರೆಯಲಾಗಿದೆ. ವಿಶ್ವಕಪ್ ಫುಟ್ಬಾಲ್ ಪಂದ್ಯಾಟಗಳು ನಡೆಯುವ ಎಲ್ಲಾ ಎಂಟು ಕ್ರೀಡಾಂಗಣಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ವಿಶ್ವದ ವಿವಿದ ಭಾಗಗಳಿಂದ ಬಂದ ಆಟಗಾರರು ಹಾಗೂ ಕ್ರೀಡಾಭಿಮಾನಿಗಳು ತಂಗುವ ಹೋಟೆಲ್ ಕೊಠಡಿಗಳಲ್ಲಿ, ಇಸ್ಲಾಂ ಧರ್ಮದ ಬೋಧನೆಗಳು, ಹದೀಸ್ ಮತ್ತು ಇಸ್ಲಾಮಿನ ಸರಳ ವ್ಯಾಖ್ಯಾನವನ್ನು ಪರಿಚಯಿಸುವ ಬಾರ್ಕೋಡ್ ಅಳವಡಿಸಲಾಗಿದೆ. ನಮಾಝ್ ಸಮಯದ ಆಝಾನ್ ಗಾಗಿ ಕ್ರೀಡಾಂಗಣಗಳಲ್ಲಿ ಮೈಕ್ರೊಫೋನ್ಗಳನ್ನು ಅಳವಡಿಸಲಾಗಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಕ್ರೀಡಾಂಗಣದಲ್ಲೇ ಅಂಗ ಶುದ್ಧಿಗಾಗಿ ಹಾಗೂ ನಮಾಝ್ ನಿರ್ವಹಿಸಲು ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗಿದೆ.
ಕತಾರ್ ನಲ್ಲಿ ವಿಶ್ವಕಪ್ ಪಂದ್ಯಾಟಗಳು ನಡೆಯುವ 28 ದಿನಗಳು ದಅವಾ ಅಥವಾ ದೀನೀ ಬೋಧನೆಗಾಗಿ ಸುಮಾರು 2,000 ಜನರ ತಂಡವು ಕಾರ್ಯಪ್ರವೃತವಾಗಿದೆ. ಅದಲ್ಲದೇ 10 ಮೊಬೈಲ್ ಕಾರುಗಳು ಮತ್ತು 10 ವಿಶೇಷ ಟೆಂಟ್ಗಳನ್ನು ದಅವಾ ಕಾರ್ಯಕ್ರಮಕ್ಕೆ ಸಿದ್ಧಪಡಿಸಲಾಗಿದೆ. ವಿಶ್ವದ ಬಹುತೇಕ ಬಾಷೆಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ದಅವಾ ನೀಡಲು ಧಾರ್ಮಿಕ ಸ್ವಯಂ ಸೇವಕರು ಸಜ್ಜಾಗಿದ್ದಾರೆೆ.
ಬಹುತೇಕ ಮುಸ್ಲಿಂ ರಾಷ್ಟ್ರಗಳು ಹಣಕ್ಕಾಗಿ ಹಾಗೂ ವಿದೇಶಿಗಳನ್ನು ಆಕರ್ಷಿಸಲು ಸಂಪ್ರದಾಯವನ್ನು ಮುರಿದು ಧರ್ಮದ ಚೌಕಟ್ಟನ್ನು ಮೀರಿ ತಮ್ಮ ಸ್ವಹಿತವನ್ನು ಕಾಪಾಡಲು ಹೆಣಗುತ್ತಿದ್ದರೆ ಅದಕ್ಕೆ ತದ್ವಿರುದ್ಧವಾಗಿ ಕತಾರ್ ಎಂಬ ಪುಟ್ಟ ರಾಷ್ಟ್ರವು ಕೇವಲ ಫುಟ್ಬಾಲ್ ಎಂಬ ಆಟಕ್ಕಾಗಿ ತಮ್ಮ ತನವನ್ನು ಬಿಟ್ಟುಕೊಡದೆ ಧರ್ಮದ ಚೌಕಟ್ಟಿನಡಿಯಲ್ಲಿ ಕ್ರೀಡೆಯನ್ನು ಸಂಘಟಿಸುವುದು ಮಾತ್ರವಲ್ಲದೆ ಕ್ರೀಡೆಯ ಮೂಲಕ ಧರ್ಮ ಪ್ರಚಾರವನ್ನು ಮಾಡುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗುತ್ತಿದೆ. ಲವ್ ಯೂ ಕತಾರ್..
– ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.