ದಾವಣಗೆರೆ(ವಿಶ್ವಕನ್ನಡಿಗ ನ್ಯೂಸ್): “ಭರವಸೆಯ ಚಿಗುರು” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಎಸ್.ಜೆ.ಎಮ್ ಪ್ರತಿಭಾ ಸಂಗಮ ಇದರ ದಾವಣಗೆರೆ ಸಂಯುಕ್ತ ರೇಂಜ್ ಸಮಿತಿಗಳ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ ನಿನ್ನೆ ರಾತ್ರಿ ದಾವಣಗೆರೆ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪ್ರೌಢ ಸಮಾಪ್ತಿ ಪಡೆಯಿತು.
ನಿನ್ನೆ ಬೆಳಿಗ್ಗೆ ಸಯ್ಯಿದ್ ತ್ವಾಹಾ ಹಿಮಮಿ ಸಖಾಫಿ ತಙಲ್ ದಾವಣಗೆರೆ ರವರ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಕೆ.ಕೆ ಸಖಾಫಿ ಚೆರಿಯ ಎ.ಪಿ ಉಸ್ತಾದರ ಅನುಸ್ಮರಣಾ ಭಾಷಣ ಮಾಡಿ ಕಲಾ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಯಾಸಿನ್ ಸಖಾಫಿ ಸ್ವಾಗತ ಭಾಷಣ ಮಾಡಿದರು.
ಐದು ರೇಂಜ್’ಗಳ ಒಂಭತ್ತು ಜಿಲ್ಲೆಗಳಿಂದ ಸುಮಾರು ನೂರ ಎಪ್ಪತ್ತಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ವೇದಿಕೆ ಮತ್ತು ವೇದಿಕೆಯೇತರ ಸ್ಪರ್ಧಾ ಕಾರ್ಯಕ್ರಮಗಳಾಗಿ ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಿತು. ಕನ್ನಡ, ಉರ್ದು, ಇಂಗ್ಲಿಷ್, ಅರಬಿ ಸೇರಿ ನಾಲ್ಕು ಭಾಷೆಗಳ ಭಾಷಣ, ಉರ್ದು, ಕನ್ನಡ ಹಾಡು, ಸಯನ್ಸ್ ಮೋಡೆಲ್, ಬುರ್ದಾ, ಕವಾಲಿ ಮುಂತಾದ ವೈವಿಧ್ಯಮಯ ಆಕರ್ಷಣೀಯ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು. ಮೂರು ವೇದಿಕೆಗಳಲ್ಲಿ ನಡೆದ ಈ ಕಲಾ ಕಾರ್ಯಕ್ರಮಕ್ಕೆ ವಿಭಿನ್ನ ಕಡೆಗಳ ತೀರ್ಪುಗಾರರು ಹಾಜರಾಗಿದ್ದರು. SJM, SSF, SYS ಸೇರಿ ವಿವಿಧ ಸುನ್ನಿ ಉಲಮಾ ಸಂಘಟನೆಯ ಹಲವಾರು ಉಲಮಾ ಶಿರೋಮಣಿಗಳು, ಹಲವಾರು ಧನ್ಯ ವ್ಯಕ್ತಿತ್ವಗಳಿಂದ ಈ ಕಾರ್ಯಕ್ರಮ ಧನ್ಯಗೊಂಡಿತು.
ನಿನ್ನೆ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ತ್ವಾಹಾ ತಙಲ್ ಪ್ರಾರ್ಥಿಸಿ ಕೆ.ಕೆ ಅಶ್ರಫ್ ಸಖಾಫಿ ಸ್ವಾಗತಿಸಿದರು. ಅಲ್ತಾಫ್ ಅಸ್ಸ’ಅದಿ ಉದ್ಘಾಟಿಸಿದರು. ತರುವಾಯ ಪ್ರತಿಭಾ ಸಂಗಮದಲ್ಲಿ ಪ್ರಥಮ, ದ್ವಿತೀಯ ಬಹುಮಾನ ಪಡೆದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಉಳಿದ ಎಲ್ಲಾ ಸ್ಪರ್ಧಾರ್ಥಿಗಳಿಗೂ ಆಯಾ ರೇಂಜ್ ನಾಯಕರ ಕೈಯಲ್ಲಿ ಬಹುಮಾನ ನೀಡಲಾಯಿತು. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಜನರಲ್ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದು ವೈಯಕ್ತಿಕ ಚಾಂಪಿಯನ್ ಪಡೆದ ಸ್ಪರ್ಧಾರ್ಥಿಗಳಿಗೆ ಟ್ರೋಫಿ ವಿತರಿಸಲಾಯಿತು. ಕೊನೆಗೆ ಚಾಂಪಿಯನ್, ರನ್ನರ್ ಆಫ್ ರೇಂಜನ್ನು ಘೋಷಿಸಲಾಯಿತು. ಐದು ಬೃಹತ್ ರೇಂಜ್’ಗಳ ಪ್ರತಿಭಾ ಸಂಗಮದಲ್ಲಿ ಹಡಗಲಿ ರೇಂಜ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಹರಿಹರ ರೇಂಜ್ ದ್ವಿತೀಯ, ಗದಗ ರೇಂಜ್ ತೃತೀಯ ಸ್ಥಾನ ಪಡೆಯಿತು.
ಈ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ ದಾವಣಗೆರೆ SJM ಜಿಲ್ಲಾ ನಾಯಕರು, ವಿಶೇಷವಾಗಿ ನಿನ್ನೆ ನಡೆದ ಕಾರ್ಯಕ್ರಮಕ್ಕೆ ಸ್ಥಳ, ಕಾರ್ಯಕ್ರಮಕ್ಕಾಗಿ ಸಂಪೂರ್ಣ ಸ್ಕೂಲ್ ಜಿಲ್ಲಾ ಸಮಿತಿಗೆ ಬಿಟ್ಟುಕೊಟ್ಟ ಸ್ಕೂಲ್ ನ ನೇತೃತ್ವ, ಪದಾಧಿಕಾರಿಗಳು ಹಾಗೂ ಇದರ ಯಶಸ್ವಿಗೆ ರಾತ್ರಿ ಹಗಲೆನ್ನದೆ ದುಡಿದ ಸಿದ್ದೀಕ್ ಸಖಾಫಿ ಮುಸ್ತಫ ಸಅದಿ ಬದ್ರುದ್ದೀನ್ ಸಖಾಫಿ ಕೆಕೆ ಅಶ್ರಫ್ ಸಖಾಫಿ ಶೆರೀಫ್ ಸಖಾಫಿ ಸಿನಾನ್ ಹಿಮಮಿ ಎಲ್ಲರಿಗೂ ಅಲ್ಲಾಹು ಒಳಿತನ್ನು ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ಮನದಾಳದಿಂದ ಧನ್ಯವಾದ ಸಮರ್ಪಿಸುತ್ತಿದ್ದೇನೆ. ಕಾರ್ಯಕ್ರಮದ ಯಶಸ್ವಿಯ ಕೇಂದ್ರ ಬಿಂದು ಕಾರ್ಯಕ್ರಮದ ಸ್ವಾಗತ ಸಂಘದ ಪದಾಧಿಕಾರಿಗಳು, ಕಾರ್ಯಕ್ರಮದ ಆಯೋಜಕರು, ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಸೇವೆ ಮಾಡಿದವರು, ಎಲ್ಲಾ ರೀತಿಯ ಸೇವೆ ಮಾಡಿ ಸಹಕಾರ ಮಾಡಿದ ಹಡಗಲಿ, ಹರಿಹರ, ಗದಗ, ಸವಣೂರು, ಬಳ್ಳಾರಿ SJM ನಾಯಕರು ಎಲ್ಲರಿಗೂ ಮನದಾಳದಿಂದ ಧನ್ಯವಾದ ಸಮರ್ಪಿಸುತ್ತಿದ್ದೇನೆ.
SJM ದಾವಣಗೆರೆ ಜಿಲ್ಲಾ ಸಮಿತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.