(www.vknews.com) : ಮರಿ ಟೈಗರ್ ವಿನೋದ್ ಪ್ರಭಾಕರ್ ಅವರು ಚಾಲನೆ ನೀಡಿದ “ಹಂಸಿನಿ ಕ್ರಿಯೇಷನ್ಸ್” ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ “ವೇಷ” ಚಿತ್ರ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇದೇ ಸಂದರ್ಭ ಚಿತ್ರತಂಡ ಚಿತ್ರದ ಮೋಷನ್ ಟೀಸರನ್ನು ಹೆಸರಾಂತ ಯೂಟ್ಯೂಬ್ ಚಾನೆಲ್ A2 ಮ್ಯೂಸಿಕ್ ನಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇವತ್ತು ವೇಷ ಚಿತ್ರದ ಪೋಸ್ಟರ್ ಒಂದು A2 ಮ್ಯೂಸಿಕ್ ನಲ್ಲಿ ಬಿಡುಗಡೆಗೊಂಡಿದ್ದು, ಪೋಸ್ಟರ್ ಬಾರಿ ಕುತೂಹಲವನ್ನು ಕೆರಳಿಸಿದೆ. ಪೋಸ್ಟರ್ ನಲ್ಲಿ ಇರುವ ಕಪ್ಪು “ವೇಷಧಾರಿ”ಯ “ವೇಷ”ವು ಭಾರೀ ಕುತೂಹಲ ಮೂಡಿಸಿದೆ. ಆ ಕಪ್ಪು ಬಣ್ಣದ ವ್ಯಕ್ತಿ ಯಾರೆಂಬುದು ಅನೇಕ ಜನರಲ್ಲಿ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇದೇ ಅಕ್ಟೋಬರ್ 17 ರಂದು ಬೆಳಿಗ್ಗೆ 11 ಗಂಟೆಗೆ A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ವೇಷ ಚಿತ್ರದ ಮೋಷನ್ ಟೀಸರ್ ಬಿಡುಗಡೆಯಾಗುತ್ತಿದೆ.
ವೇಷ ಚಿತ್ರವನ್ನು ಕ್ರಷ್ಣ ಎನ್ನುವ ಯುವ ಪ್ರತಿಭೆ ನಿರ್ದೇಶನ ಮಾಡಿದ್ದು, ಸದಾ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುವ “ಕಿರಿಕ್ ಹುಡ್ಗ” ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿದ್ದು, ರಘು ಅವರು ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಅದರ ಜೊತೆ ಜಯ್ ಶೆಟ್ಟಿ ಎನ್ನುವ ಯುವ ಪ್ರತಿಭೆ “ಖಡಕ್” ಖಳನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರೆ. ಉತ್ತಮ್ ಸಾರಂಗ್ ರವರ ಸಂಗೀತವಿದ್ದು, ಇದ್ದು ಸುರೇಂದ್ರ ಪಣಿಯೂರ್ ಅವರ ಛಾಯಾಗ್ರಹಣ ವೇಷ ಚಿತ್ರಕ್ಕೆ ಇದೆ. ಸಾಕಷ್ಟು ಕೂತೂಹಲ ಮೂಡಿಸಿರುವ ಕನ್ನಡ ಚಿತ್ರ ಇದಾಗಿದ್ದು, ಭಾನುವಾರದ ಮೋಷನ್ ಟೀಸರ್ ನೊಂದಿಗೆ ಕನ್ನಡಿಗರ ಮೆಚ್ಚುಗೆ ಪಡೆಯಲು ಸಿದ್ಧವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.