ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ವಾಸವಾಗಿರುವ 18 ವಯಸ್ಸಿಗಿಂತ ಮೇಲ್ಪಟ್ಟ ಎಲ್ಲಾ ನಾಗರೀಕರು ಹಾಗೂ ವಿದೇಶಿಗಳಿಗೆ ಕರೋನಾ ಲಸಿಕೆಯ ಮೂರನೇಯ ‘ಬೂಸ್ಟರ್’ ಡೋಸ್ ಗಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ.
ಈ ಮೊದಲು ಕಿಡ್ನಿ, ಹೃದಯ ಸಂಬಂಧಿ ಮೊದಲಾದ ಮಾರಕ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಈ ಬೂಸ್ಟರ್ ಡೋಸ್ ಪಡೆಯಲು ಸೌದಿ ಆರೋಗ್ಯ ಮಂತ್ರಾಲಯ ಸಲಹೆ ನೀಡಿತ್ತು. ಆದರೆ ಈಗ 18 ವಯಸ್ಸಿಗಿಂತ ಮೇಲ್ಪಟ್ಟ ಸರ್ವರಿಗೂ ಈ ಬೂಸ್ಟರ್ ಡೋಸ್ ಪಡೆಯಲು ಸೂಚಿಸಲಾಗಿದ್ದು, ಎರಡನೇ ಡೋಸ್ ಪಡೆದು ಆರು ತಿಂಗಳ ನಂತರವಷ್ಟೇ ಬೂಸ್ಟರ್ ಡೋಸ್ ಸ್ವೀಕರಿಸಲು ಹೇಳಲಾಗಿದೆ. ಸೆಹತಿ ಆ್ಯಪ್ ಮೂಲಕ ಮೂರನೇ ಡೋಸ್ ಬುಕ್ಕಿಂಗ್ ಈಗಾಗಲೇ ಪ್ರಾರಂಭಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.