ಮಡಿಕೇರಿ(www.vknews.in): ತ್ರಿಪುರದಲ್ಲಿ ಅಲ್ಪಸಂಖ್ಯಾತರ ಹಾಗೂ ಆರಾಧನಾ ಕೇಂದ್ರಗಳ ಮೇಲೆ ಹಿಂದುತ್ವವಾದಿಗಳ ದಾಳಿ ಮುಂದುವರಿಯಿತ್ತಿದೆ. ಮನೆ ಹಾಗೂ ಮಳಿಗೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಕರ್ಫ್ಯೂ ಚಾಲ್ತಿಯಲ್ಲಿರುವ ಪ್ರದೇಶಗಳಲ್ಲಿ ಈ ರೀತಿ ಆಕ್ರಮಣ ವ್ಯಾಪಿಸುತ್ತಿರುವುದು ಆತಂಕ ಸೃಷ್ಟಿಸುತ್ತಿದೆ ಎಂದು ಎಸ್.ಕೆ ಎಸ್.ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ಮಡಿಕೇರಿ ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳ ಬೆಂಬಲದೊಂದಿಗೆ ಆಕ್ರಮಣ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಸಿಸಿಟಿವಿ ಕ್ಯಾಮರಗಳನ್ನು ಸಹ ನಾಶಪಡಿಸಿ ಅಕ್ರಮಕೋರರು ತಾಂಡವವಾಡುತ್ತಿದ್ದಾರೆ. ಇದರಿಂದಾಗಿ ಅನೇಕ ಮುಸ್ಲಿಂ ಕುಟುಂಬಗಳು ಪಲಾಯನ ಮಾಡುವ ಪರಿಸ್ಥಿತಿ ಎದುರಾಗಿದೆ. ಅತ್ಯಂತ ಹೀನಾಯವಾದ ಈ ಏಕಾಏಕಿ ದಾಳಿಯ ವಿರುದ್ಧ ಧ್ವನಿಯೆತ್ತಲು ಜಾತ್ಯತೀತ ಪಕ್ಷಗಳು ಮುಂದೆಬರಬೇಕಾಗಿದೆ. ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಿ ತ್ರಿಪುರದ ಅಲ್ಪಸಂಖ್ಯಾತ ಜನರಿಗೆ ಸುರಕ್ಷಿತತೆ ಒದಗಿಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು SKSSF ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ಮಡಿಕೇರಿ ಒತ್ತಾಯ ಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.