(www.vknews.in) : ಗದಗ ಜಿಲ್ಲೆಯ ನರಗುಂದದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಸಂಘಪರಿವಾರದ ಗೂಂಡಾ ಪಡೆ ಗಂಭೀರವಾಗಿ ದಾಳಿ ನಡೆಸಿ ಓರ್ವನನ್ನು ಹತ್ಯೆ ಮಾಡಿ ಮತ್ತೊಬ್ಬರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಖಂಡನೀಯ. ಕೂಡಲೇ ಪೊಲೀಸ್ ಅಧಿಕಾರಿಗಳು ನೈಜ ಅಪರಾಧಿಗಳು ಹಾಗೂ ಅವರಿಗೆ ಪ್ರಚೋದನೆ ನೀಡಿದವವರನ್ನು ಬಂಧಿಸಬೇಕೆಂದು 𝚂𝚈𝚂 ಹಾಸನ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸಂಘ ಪರಿವಾರದ ಕಾರ್ಯಕರ್ತರ ದಾಳಿಯಿಂದಾಗಿ ನರಗುಂದದಲ್ಲಿ ಸಮೀರ್(18) ಮೃತಪಟ್ಟಿದ್ದಾನೆ. ಸಂಶೀರ್(19) ಎಂಬಾತ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಹಲವು ದಿನಗಳಿಂದ ನರಗುಂದದಲ್ಲಿ ಸಂಘ ಪರಿವಾರದ ಮುಖಂಡರು ಅಶಾಂತಿ ವಾತಾವರಣ ಸೃಷ್ಟಿ ಮಾಡುವ ದುರುದ್ದೇಶವಿಟ್ಟುಕೊಂಡು ಯುವಕರನ್ನು ಪ್ರಚೋದನೆಗಳ ಮೂಲಕ ದುಷ್ಕೃತ್ಯವೆಸಗಲು ಹುರಿದುಂಬಿಸಿದ್ದಾರೆ.
ಇದರಿಂದ ಪ್ರೇರಿತರಾದ ಯುವಕರಿಂದ ಈ ಕೊಲೆ ನಡೆದಿದ್ದು ಇಂತವರನ್ನು ಮಟ್ಟಹಾಕುವ ಸಂಪೂರ್ಣ ಹೊಣೆಯನ್ನು ಪೊಲೀಸ್ ಇಲಾಖೆ ವಹಿಸಿಕೊಳ್ಳಬೇಕು ಎಂದು 𝚂𝚈𝚂 ಹಾಸನ ಜಿಲ್ಲಾ ಸಮಿತಿ ಆಗ್ರಹಿಸಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳು ಮತ್ತು ಅವರಿಗೆ ಪ್ರಚೋದನೆ ನೀಡಿದವರನ್ನು ಬಂದಿಸಿ ಶಿಕ್ಷೆಯಾಗುವಂತೆ ನೋಡಿ ಕೊಳ್ಳಬೇಕು.
ಪೋಲೀಸರು ಕರ್ತವ್ಯಲೋಪ ಎಸಗಿದ್ದರೆ ಅಂತಹ ಪೊಲೀಸರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಸಂತ್ರಸ್ತ ಕುಟುಂಬಕ್ಕೆ ಶೀಘ್ರವೇ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡಬೇಕು ಎಂದು ಜಿಲ್ಲಾ ಸಮಿತಿಯ ಮುಖಂಡರಾದ ಸಲೀಂ ಪೈಝಿ ,ಬದ್ರುದ್ದೀನ್ ದಾರಿಮಿ,ಇಬ್ರಾಹಿಂ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.