ಕೋಲಾರ(ವಿಶ್ವ ಕನ್ನಡಿಗ ನ್ಯೂಸ್): ಕೋವಿಡ್ -೧೯ ರೂಪಾಂತರಗೊಂಡು ಓಮಿಕಾನ್ ಆಗಿ ೩ ನೇ ಅಲೆ ಶುರುವಾಗಿದೆ. ರಾಜ್ಯ , ಜಿಲ್ಲೆ ಸೇರಿದಂತೆ ದಿನೇದಿನೇ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಮಕ್ಕಳಲ್ಲೂ ಹೆಚ್ಚಾಗಿ ಕಾಣಿಸುತ್ತಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಕೆಲ ದಿನಗಳ ಕಾಲ ರಜೆ ಘೋಷಣೆ ಮಾಡಿ ಮಕ್ಕಳನ್ನು ಸೋಂಕು ಮುಕ್ತರನ್ನಾಗಿಸಬೇಕು ಎಂದು ಸಮಾಜ ಸೇವಕ ಸಿಎಂಆರ್ ಶ್ರೀನಿವಾರ್ ಒತ್ತಾಯಿಸಿದರು .
ನಗರದ ದರ್ಗಾ ಮೊಹಲ್ಲಾ ಮತ್ತು ಮುನ್ಸಿಪಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿ , ಮೂರನೇ ಅಲೆಯೂ ಶುರುವಾಗಿದೆ ಎಂಬುದರ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋ೦ಕು ಕಾಣಿಸಿಕೊಂಡಿದೆ . ಪ್ರತಿ ದಿನಾ ನೂರಾರು ಮಕ್ಕಳಲ್ಲಿ ಕೋವಿಡ್ ಕಂಡು ಬರುತ್ತಿದೆ. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಆಸತೆಗಳ ಮುಂದೆ ಪೋಷಕರು ಚಿಕಿತ್ಸೆಗಾಗಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಕಂಡು ಬರುತ್ತಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ , ಈಗಾಗಲೇ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೋವಿಡ್ ನಿಯಂತ್ರಣ ಕರ್ಪೂನಿಂದಾಗಿ ಸಾಧ್ಯವಾಗುವುದಿಲ್ಲ . ಇಲಾಖೆಗಳು ಇದರ ಪರಿಣಾಮದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು. ಕರ್ಪ್ಯೂ ಬಗ್ಗೆ ಸಚಿವ ಸಂಪುಟದ ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ಒತ್ತಾಯ ಮಾಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೋವಿಡ್ ನಿಯಂತಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಕೋವಿಡ್ ಮೊದಲ ಮತ್ತು ಎರಡನೆ ಅಲೆ ಕಾಲಘಟ್ಟದಲ್ಲಿ ಸೋಂಕಿತರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ರೋಟರಿ ಕ್ಲಬ್ , ಸಿಎಂಎಆರ್ ಫೌಂಡೇಷನ್ ಹಾಗೂ ಭಾರತ್ ಸೇವಾದಳ ಮಾಡಿದೆ.
ಆರೋಗ ವಿಚಾರದಲ್ಲಿ ಕೂಡಲೇ ಎಚ್ಚೆತ್ತುಕೊಂಡು ಸಮೂಹ ಸೇವೆಗೆ ಕಾರ್ಯಪವೃತ್ತರಾಗಿದ್ದು , ಮೊದಲ ಎರಡನೇ ಹಂತದಲ್ಲಿ ೧,೦೦೦ ಔಷಧಿ ಕಿಟ್ ವಿತರಣೆ ಮಾಡಲಾಗಿದೆ. ೩ ನೇ ಹಂತದಲ್ಲಿ ಸುಮಾರು ೩ ಕ್ಕೂ ಹೆಚ್ಚು ಔಷಧಿ ಕಿಟ್ ವಿತರಣೆಗೆ ಬೇಡಿಕೆ ಬಂದಿದೆ. ಈಗಾಗಲೇ ತಾಲೂಕಿನಾದ್ಯಂತ ಎಲ್ಲಾ ಪಾಥಮಿಕ ಆರೋಗ್ಯ ಕೇಂದ್ರಗಳಿಗೆ ನಮ್ಮ ತಂಡದಿಂದ ಕಿಟ್ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಕೋವಿಡ್ ಪ್ರಥಮ , ಎರಡನೇ ಹಾಗೂ ಮೂರನೆ ಅಲೆಯಲ್ಲಿ ಸೋಂಕಿತರಿಗೆ ಅಗತ್ಯವಾಗಿ ಬೇಕಾಗಿರುವ ಔಷಧಿಗಳನ್ನು ತಲುಪಿಸುವ ಕೆಲಸ ಸಿಎಂಎಆರ್ ಫೌಂಡೇಷನ್ , ಭಾರತ ಸೇವಾದಳ ಹಾಗೂ ರೋಟರಿ ಕ್ಲಬ್ ಮಾಡುತ್ತಿದೆ . ಔಷಧಿ ಕಿಟ್ ವಿತರಿಸುವ ಪ್ರತಿಷ್ಠಿತ ಕಂಪನಿಗಳ ಔಷಧಿಗಳನ್ನು ಒಳಗೊಂಡ ಕಿಟ್ ಸೋಂಕಿತರಿಗೆ ಕಲ್ಪಿಸಲಾಗುವುದು . ಅದಷ್ಟು ಬೇಗ ಜಿಲ್ಲೆಯನ್ನು ಕೊರೋನ ಮುಕ್ತವನ್ನಾಗಿ ಮಾಡುವುದು ನಮ್ಮೆಲ್ಲರ ಅಭಿಲಾಶೆಯಾಗಿದೆ ಎಂದು ಹೇಳಿದರು .
ಕೋಲಾರ ನಗರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ರಮೇಶ್ ಮಾತನಾಡಿ , ಕೊವೀಡ್ ಸಂದರ್ಭದಲ್ಲಿ ಸಿಎಂಆರ್ ಶ್ರೀನಾಥ್ ಅವರು ಗುಣಮಟ್ಟದ ಔಷಧಿಗಳ ಕಿಟ್ಗಳನ್ನ ವಿತರಣೆ ಮಾಡುತ್ತಿರುವುದು ಶ್ಲಾಘನೀಯ . ಸಿಎಂಆರ್ ತಂಡದ ಸದಸ್ಯರು ಸೋಂಕಿತರಿಗೆ ಮನೆ ಬಾಗಿಲಿಗೆ ಹೋಗಿ ಅವರಿಗೆ ಧೈರ್ಯ ತುಂಬುವ ಮೂಲಕ ಔಷಧಿ ಕಿಟ್ಗಳನ್ನು ವಿತರಣೆ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದಿಂದ ಔಷಧಿಗಳ ಬರುವುದು ತಡವಾದರೂ ಸಿಎ೦ ಆರ್ ಅವರ ಬಳಗ ಕ್ಷಣಾರ್ಧಲ್ಲಿ ಬೇಡಿಕೆಗೆ ತಕ್ಕಂತೆ ಉಚಿತವಾಗಿ ಔಷಧಿಗಳನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಸೂಚಿಗಳನ್ನು ಪಾಲನೆ ಮಾಡಬೇಕೆಂದು ಮನವಿ ಜನಸಾಮಾನರು ಕೂಡ ಸರ್ಕಾರದ ಮಾರ್ಗ ಮಾಡಿದರು .
ಕೋಲಾರ ಜಿಲ್ಲಾ ಕಾರ್ಯನಿರತ ಪತಕರ್ತರ ಸಂಘದ ಪಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ , ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಸುಧಾಕರ್ ಹಾಜರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.