ಕೋಲಾರ(ವಿಶ್ವ ಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳು ಅನಗತ್ಯ ಚಟುವಟಿಕೆಗಳಿಗೆ ಗಮನ ನೀಡದೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾಭಾಸ್ಯಕ್ಕೆ ಹೆಚ್ಚು ಆದ್ಯತೆ ನೀಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್.ಗಂಗಾಧರ್ ಅವರು ತಿಳಿಸಿದರು.
ಇಂದು ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ( POCSO Act – 2012 ) ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಯಾವುದೇ ವ್ಯಕ್ತಿ ಲೈಂಗಿಕ ಅತ್ಯಾಚಾರ ಮಾಡಿದರೆ , 7 ವರ್ಷ ಕಠಿಣ ಶಿಕ್ಷೆ ಅಥವಾ ಜೀವಿತಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಗಾಗಿ ಬಳಸುತ್ತಿದ್ದಾರೆ. ಇವು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರಮೇಶ್.ಎಂ ಅವರು ಮಾತನಾಡಿ ಹಲ್ಲೆ , ಪ್ರಚೋಧನೆ , ಅಶ್ಲೀಲ ವಿಡಿಯೋ ಸಂಗ್ರಹಣೆ ಮಾಡುವುದು ಬೇರೊಬ್ಬರಿಗೆ ಕಳುಹಿಸುವುದು ಅಪರಾಧವಾಗಿರುತ್ತದೆ . ಇದಕ್ಕಾಗಿ ಜಿಲ್ಲೆಯಲ್ಲಿ ಪೋಕ್ಸ್ ಕಾಯ್ದೆ ಎಂಬ ಪ್ರತ್ಯೇಕ ವಿಭಾಗ ಇದೆ.
18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌಜನ್ಯ ಮಾಡಿದರೆ ಅಂತವರ ವಿರುದ್ಧ ಪೋ ಕಾಯ್ದೆಯಡಿ ಶಿಕ್ಷೆ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಮಕ್ಕಳ ಬಾಲ್ಯವಿವಾಹ , ಭಿಕ್ಷಾಟನೆ , ವೇಶ್ಯಾವಾಟಿಕೆ ಕಂಡುಬಂದಲ್ಲಿ ಯಾರೇ ಆಗಲಿ ದೂರವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ . ಇಂತಹ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳ ರಘುಪತಿ ಅವರು ಮಾತನಾಡಿ , ಎಲ್ಲರಿಗೂ ಕಾನೂನಿನ ಬಗ್ಗೆ ಅರಿವಿರಬೇಕು. ಇತ್ತೀಚಿನ ದಿನಗಳಲ್ಲಿ ಆತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು , ಇಂದಿನ ಯುವ ಜನರು ವಿವಾಹ ಮಾಡಿಕೊಳ್ಳುವುದಾದರೆ ತಮ್ಮ ಪೋಷಕರ ಅನುಮತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜ ಕಾರ್ಯವಿಭಾಗದ ಸಂಯೋಜಕರಾದ ಡಾ || ಗುಂಡಪ್ಪ ದೇವಿಕೇರಿ , ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ || ಜಯರಾಮ್.ಟಿ , ವಕೀಲರಾದ ಸುರೇಂದ್ರ ಕುಮಾರ್ , ಬಿ.ವಿ.ವೆಂಕಟೇಶ್ , ಗಮನ ಮಹಿಳಾ ಸಮೂಹದ ಶಾಂತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.