(www.vknews.in) ; ಹಿಜಾಬ್ ತಲೆಗೆ ಕಟ್ಟುವುದರಿಂದ ಕಲಿತದ್ದು ಮಿದುಳಿಗೆ ತಲುಪುವುದಿಲ್ಲ. ಹೊರಗಿನ ವಿಷಯಗಳನ್ನು ಮಿದುಳಿಗೆ ಸಾಗಿಸುವ ತಲೆಯ ನಾಳಗಳೆಲ್ಲಾ ಹಿಜಾಬ್ ನಿಂದ ಮುಚ್ಚಿರುತ್ತವೆ ತಾನೇ!! ಹಿಜಾಬ್ ನ ಒಂದು ತುದಿಯಿಂದ; ಕೈಗಳನ್ನು ಬಿಗಿಯಾಗಿ ಕಟ್ಟಿರುವುದರಿಂದ ನೋಟ್ಸ್ ಬರೆಯಲು ಅಸಾಧ್ಯವಾಗುತ್ತದೆ. ಮತ್ತೊಂದು ತುದಿಯಿಂದ ನಾಲಗೆಯನ್ನು ಎಳೆದು ಕಟ್ಟಲಾಗಿರುತ್ತದೆ. ಇದರಿಂದಾಗಿ ಉಪನ್ಯಾಸಕಿಯರೊಂದಿಗೆ ಸಂವಹನ ಮಾಡಲು ಹಿಜಾಬ್ಧಾರಿಗಳಿಗೆ ಅಸಾಧ್ಯವಾಗುತ್ತದೆ. ಹಿಜಾಬ್ ಧರಿಸಿದಾಕ್ಷಣ ಕಣ್ಣು ಮಂಜಾಗುವುದರಿಂದ ಬ್ಲಾಕ್ ಬೋರ್ಡ್ ನಲ್ಲಿ ಉಪನ್ಯಾಸಕಿ ಬರೆದದ್ದನ್ನು ಓದುಲು ಸಾಧ್ಯವಾಗುವುದಿಲ್ಲ! ಹಿಜಾಬ್ ನಲ್ಲಿ ಬೆಳೆಯುವ ಮುಳ್ಳುಗಂಟಿಗಳು ಇತರ ವಿದ್ಯಾರ್ಥಿಗಳ ಮೈ ಮೇಲೆ ಚುಚ್ಚುವುದರಿಂದ; ಹಿಜಾಬ್ಧಾರಿಗಳನ್ನು ಗೇಟ್ ನಲ್ಲೇ ತಡೆಯಲಾಗುತ್ತೆ. ಹಿಜಾಬ್ ಬಟ್ಟೆಯಲ್ಲಿ ಅಳವಡಿಸಲಾಗಿರುವ ‘ಪಬ್ಲಿಕ್ ಚಿಪ್’ ನಿಂದ ಆಗಾಗ ಆರ್ಭಟ ಕೇಳಿಬರುವುದರಿಂದ ಇತರ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಉಂಟಾಗುತ್ತದೆ! ಹೀಗೆಲ್ಲಾ ಶಿಕ್ಷಣಕ್ಕೆ ಅಡ್ಡಿ ಉಂಟು ಮಾಡುವ ಹಿಜಾಬ್ ಮುಖ್ಯವಾ? ಶಿಕ್ಷಣ ಮುಖ್ಯವಾ? ನೀವೆ ಹೇಳಿ!
ಹಿಜಾಬ್ ಮುಖ್ಯನಾ? ಶಿಕ್ಷಣ ಮುಖ್ಯನಾ ಎಂದು ಪೆದ್ದುಪೆದ್ದಾಗಿ ಪ್ರಶ್ನೆಕೇಳುವ ಆ್ಯಂಕರ್/ರಿಪೋರ್ಟರ್ ಗಳೇ.. 🍼
ಹಿಜಾಬ್ ಎಂದರೆ ನಾಲಗೆಯನ್ನು, ಮಿದುಳನ್ನು, ಕೈಗಳನ್ನು ಬಿಗಿಯಾಗಿ ಕಟ್ಟಿ ಇಡುವುದಲ್ಲ! ತಲೆಗೆ ಶಾಲು ಸುತ್ತಿಕೊಳ್ಳುವುದಷ್ಟೆ! ಹಿಜಾಬ್ ನಿಂದ ಕಲಿಕೆ ಅಸಾಧ್ಯ ಎಂದಾಗಿದ್ರೆ ತಾನೆ; ಕಲಿಕೆ ಮುಖ್ಯನಾ… ಹಿಜಾಬ್ ಮುಖ್ಯನಾ ಎಂಬ ಪ್ರಶ್ನೆಗೆ ಪ್ರಸಕ್ತಿ ಇರೋದು!!
ಭದ್ರವಾಗಿ ಕೂದಲು ನೇಯ್ದಿರುವ ತಲೆಯನ್ನು ಸುತ್ತಿಕೊಳ್ಳುವ ಶಾಲು ಎಂದು ಹೇಳಲಾಗುವ ಒಂದು ತುಂಡು ಬಟ್ಟೆಯಷ್ಟೇ ಹಿಜಾಬ್! ಓದುವುದಕ್ಕೂ, ಮನನ ಮಡುವುದಕ್ಕೂ, ತರಗತಿ ಆಲಿಸುವುದಕ್ಕೂ, ಬರೆಯುವುದಕ್ಕೂ ಯಾವ ವಿಧದಲ್ಲೂ ಅಡ್ಡಿಪಡಿಸದ ಒಂದು ತುಂಡು ಬಟ್ಟೆಯನ್ನೇ ಮುಂದಿಟ್ಟು; ಅದು ಮುಖ್ಯನಾ ಇದು ಮುಖ್ಯನಾ ಎಂದು ಪ್ರಶ್ನೆಕೇಳುವವರ ಬುದ್ಧಿವಂತಿಕೆಗೆ ಯಾವ ಪ್ರಶಸ್ತಿ ಕೊಡೋಣ!!??
✍️ಎ.ಕೆ.ನಂದಾವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.