ಗುಡ್ಡೆಅಂಗಡಿ(ವಿಶ್ವಕನ್ನಡಿಗ ನ್ಯೂಸ್): ದ.ಕ.ಜಿ.ಪ ಕಿರಿಯ ಪ್ರಾಥಮಿಕ ಶಾಲೆ ಬೋಗೋಡಿ ಗುಡ್ಡೆಅಂಗಡಿ,ಇಲ್ಲಿಯ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ನೂತನ ಶಾಲೆಯ ಎಸ್.ಡಿ.ಎಂ.ಸಿ ಸಮಿತಿ ವತಿಯಿಂದ ನಡೆಯಿತು.
ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ (ಕೊಚ್ಚಿ)ಬೋಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು,ಶಾಲಾ ಸ್ಥಾಪಕ ಅಧ್ಯಕ್ಷರಾದ ಹಾಜಿ ಬಿ.ವಿ.ಮೊಹಮ್ಮದ್ ನೀಮಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾರ್ಪೊರೇಟರ್ ಅಬೂಬಕ್ಕರ್ ಸಿದ್ದೀಕ್,ಬಿ.ಎಂ.ಇಲ್ಯಾಸ್,ಎ.ಆರ್. ಶರೀಫ್, ನಝರ್ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯರಾದ ವೆಂಕಟೇಶ್ ಸ್ವಾಗತಿಸಿದರು,ಶಿಕ್ಷಕಿ ಲವೀನಾ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.