ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಮಸೂದ್ ಮನೆಗೆ ಜಿಲ್ಲೆಯ ಸಾಮಾಜಿಕ ಸಂಸ್ಥೆ ಟೀಂ ಬಿ-ಹ್ಯೂಮನ್ ತಂಡದ ಸದಸ್ಯರು ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಹಾಗೂ ಅಗತ್ಯ ಕಾನೂನು ನೆರವು ನೀಡುವ ಭರವಸೆಯನ್ನು ನೀಡಿದರು.
ಅದಲ್ಲದೆ ಮಸೂದ್ ಸಹೋದರ ಮಿರ್ಷಾದ್ ಬೆಂಗಳೂರಿನಲ್ಲಿ ಸಣ್ಣ ಜ್ಯೂಸ್ ಅಂಗಡಿಯಲ್ಲಿ ಕೆಲಸಕ್ಕಿದ್ದು, ಮಸೂದ್ ಕುಟುಂಬಕ್ಕೆ ಆಧಾರಸ್ಥoಭವಾಗುವ ಉದ್ದೇಶದಿಂದ ಸಹೋದರ ಮಿರ್ಷದ್ ನಿಗೆ ವಿದೇಶಕ್ಕೆ ಹೋಗುವ ವೀಸಾ ಮತ್ತು ಅಲ್ಲಿ ಒಳ್ಳೆಯ ಉದ್ಯೋಗ ನೀಡುವ ಭರವಸೆಯನ್ನು ಟೀಂ ಬಿ-ಹ್ಯೂಮನ್ ನೀಡಿತು.
ಈ ಸಂದರ್ಭದಲ್ಲಿ ಟೀಂ ಬಿ-ಹ್ಯೂಮನ್ ಟ್ರಸ್ಟೀಗಳಾದ ಆಸೀಫ್ ಡೀಲ್ಸ್, ಸೌದಿ ಉದ್ಯಮಿ ಯೂನುಸ್ ಮಣಿಪಾಲ್, ಇಂತಿಯಾಜ್ ಪುತ್ತೂರು, ಜಲೀಲ್, ಮಜೀದ್ ಪಿ.ಪಿ, ಅನ್ಸಾರ್ ಬೆಳ್ಳಾರೆ, ಉಮ್ಮರ್ ಕುಳತೋಡಿ ಭೇಟಿ ತಂಡದಲ್ಲಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.