ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆಯುತು. ಧ್ವಜಾರೋಹಣವನ್ನು ಎಸ್ ಡಿಎಂಸಿಯ ಕಾರ್ಯಾಧ್ಯಕ್ಷರಾದ ಶ್ರೀ ಜಯಂತ ಹರ್ಲಡ್ಕ ರವರು ನೆರವೇರಿಸಿದರು.
ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲೀಲಾವತಿ ಸೇವಾಜೆ, ಎಸ್ ಡಿ ಎಂ ಸಿ ಸದಸ್ಯರಾದ ಲೀಲಾಧರ ಗುಡ್ಡೆ ಬಟ್ಟೆ ಕಜೆ, ಕೃಷ್ಣಪ್ಪಗೌಡ ಅಡಿಕೆಹಿತ್ಲು, ಧನಂಜಯ ಗೌಡ ಬಾಳೆತೋಟ, ಅಚ್ಚುತ ಮುಂಡೋಕಜೆ , ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ, ಪೋಷಕರು , ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಸಭಾಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಶಿಕ್ಷಕರಾದ ವಸಂತ್ ನಾಯಕ್ ಸ್ವಾತಂತ್ರ್ಯದ ಮಹತ್ವ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮಹನೀಯರ ಬಗ್ಗೆ ಸ್ಮರಿಸಿದರು. ಸಭಾಧ್ಯಕ್ಷರಾದ ಜಯಂತ ಹರ್ಲಡ್ಕ ಮತ್ತು ಅತಿಥಿಗಳು ಶುಭ ಹಾರೈಸಿದರು. ವಿದ್ಯಾರ್ಥಿಗಳು ಭಾಷಣ ದೇಶಭಕ್ತಿಗೀತೆ ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು. ಮುಖ್ಯಶಿಕ್ಷಕಿ ಸಂಧ್ಯಾ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ರಾಜೇಶ್ವರಿ ಎಂ ಟಿ ಧನ್ಯವಾದ ಅರ್ಪಿಸಿದರು. ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.