ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೈದಪ್ಪೊಯಿಲ್ ಎಂಬಲ್ಲಿ ಸುಮಾರು ನೂರೈವತ್ತು ಏಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮರ್ಕಝ್ ನಾಲೇಜ್ ಸಿಟಿಯ ಮೊದಲ ಹಂತದ ಉದ್ಘಾಟನಾ ಸಮಾರಂಭವು ಇದೇ ಅಕ್ಟೋಬರ್ ಕೊನೆಯ ವಾರ ನಡೆಯಲಿದ್ದು ಆ ಬಗ್ಗೆ ಕರ್ನಾಟಕದಲ್ಲಿ, ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಕಾರಂದೂರು ಮರ್ಕಝ್ ನಲ್ಲಿ ನಡೆದ ರಾಜ್ಯದ ಸುನ್ನೀ ಸಂಘಟನಾ ನಾಯಕರ ಸಭೆಯಲ್ಲಿ ನಿರ್ಧರಿಸಲಾಯಿತು.
ಬೆಂಗಳೂರು, ಮಂಗಳೂರು, ಕೊಡಗು ಮತ್ತು ಶಿವಮೊಗ್ಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ನಾಲೇಜ್ ಸಿಟಿಯ ಕಾರ್ಯ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ವಿವರಿಸಿ ಕೊಡಲಾಗುವುದು.
ಸದರಿ ಸಮಾವೇಶಗಳಲ್ಲಿ ಮರ್ಕಝ್ ನಾಲೇಜ್ ಸಿಟಿ ಅಧ್ಯಕ್ಷ ಸುಲ್ತಾನುಲ್ ಉಲಮಾ ಎ. ಪಿ.ಉಸ್ತಾದ್, ಸಯ್ಯಿದ್ ಅಲಿ ಬಾಫಖಿ ತಂಙಳ್, ಮಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್ಹರಿ, ನಾಯಕರಾದ ಸಿ.ಮುಹಮ್ಮದ್ ಫೈಝಿ, ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್, ಸಯ್ಯಿದ್ ಮುತ್ತನೂರ್ ತಂಙಳ್, ಡಾ.ಅಬ್ದುಲ್ ಸಲಾಂ, ಅಡ್ವಕೇಟ್ ತನ್ವೀರ್ ಮುಂತಾದವರು ಭಾಗವಹಿಸಲಿದ್ದಾರೆ.
ಇದರ ಪ್ರಚಾರಾರ್ಥ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆಯ ಮರ್ಕಝ್ ಸರ್ಕಲ್ ಉಳ್ಲಾಲ ಸಮಿತಿಯನ್ನು ಉಳ್ಳಾಲದ ತಾಜುಲ್ ಉಲಮಾ ಸುನ್ನಿ ಸೆಂಟರ್ನಲ್ಲಿ ಸಂಘ ಕುಟುಂಬದ ನಾಯಕರ ಸಮ್ಮುಕದಲ್ಲಿ ನಡೆದ ಸಮಾವೇಶದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಸದ್ರಿ ಸಮಾವೇಶ ದಲ್ಲಿ ಮರ್ಕಝ್ ನಾಲೆಡ್ಜ್ ಸಿಟಿ ಉದ್ಘಾಟನಾ ಸಮಾರಂಭ ಸ್ವಾಗತ ಸಮಿತಿ ಚೆಯರ್ ಮ್ಯಾನ್ ಸಯ್ಯಿದ್ ತುರಾಬ್ ತಂಙಲ್,ಮರ್ಕಝ್ ಕೋ ಆರ್ಡಿನೇಟರ್ ಮರ್ಝೂಖ್ ಸ ಅದಿ,ಮರ್ಕಝ್ ನಾಲೆಡ್ಜ್ ಸಿಟಿ ಗ್ಲೋಬಲ್ ಸ್ಕೂಲ್ ಚೆಯರ್ ಮ್ಯಾನ್ ಅಲಿ ಕುಂಞ ಮುಸ್ಲಿಯಾರ್, ಕರ್ನಾಟಕ ಪ್ಲಾನಿಂಗ್ ಸಮಿತಿ ಅಧ್ಯಕ್ಷ ರಾದ ಸಯ್ಯಿದ್ ಇಸ್ಮಾಯಿಲ್ ತಂಞಲ್ ಉಜಿರೆ,ಸಯ್ಯಿದ್ ಜಮಾಲುಲೈಲಿ ತಂಞಲ್ ವಾದಿ ಇರ್ಪಾಣಿ, ಜನರಲ್ ಕನ್ವೀನರ್ ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು, ಕನ್ವೀನರ್ ಇಸ್ಮಾಯಿಲ್ ಸ ಅದಿ ಕಿನ್ಯ,ಜಿಲ್ಲಾ ಚೇರ್ಮನ್ ಯಾಕೂಬ್ ಸ ಅದಿ ನಾವೂರು,ಜನರಲ್ ಕನ್ವೀನರ್ ಅಶ್ರಫ್ ಕಿನಾರ, ಸುನ್ನಿ ಸಂಘ ಕುಟುಂಬದ ನಾಯಕರಾದ ಸಯ್ಯಿದ್ ಜಲಾಲ್ ತಂಙಲ್,ಹಾಗೂ ಉಲಮಾ ಉಮರಾಗಳು ಭಾಗವಹಿಸಿದ್ದರು.
ಮರ್ಕಝ್ ನಾಲೆಜ್ ಸಿಟಿ ಉಳ್ಳಾಲ ಸರ್ಕಲ್ ಸಮಿತಿ : ಚೇರ್ಮನ್ : ಬಿಜಿ ಹನೀಫ್ ಹಾಜಿ ಉಳ್ಳಾಲ ಜನರಲ್ ಕನ್ವೀನರ್ : ಖುಬೈಬ್ ತಂಗಲ್ ಕೋಶಾಧಿಕಾರಿ : ಬಶೀರ್ ಸಖಾಫಿ ವೈಸ್ ಚೇರ್ಮನ್ ಗಳಾಗಿ : ಜಲಾಲುದ್ದೀನ್ ತಂಗಲ್, ಶಿಹಾಬುದ್ದಿನ್ ಸಖಾಫಿ, ಮೋರೋಕೊ ಮದನಿ, ಜಾಯಿಂಟ್ ಕನ್ವೀನರ್ : ಝಿಯಾದ್ ತಂಗಲ್, ಅಯ್ಯೂಬ್ ಮಹ್ಳರೀ, ಇಸ್ಹಾಕ್ ಪೇಟೆ, ಮುಸ್ತಫ ಎಂ. ನಗರ ಸದಸ್ಯರುಗಳಾಗಿ : ಜಾಬಿರ್ ಫಾಲಿಲಿ, ಶಬೀರ್ ಪೇಟೆ, ಇಲ್ಯಾಸ್ ಕೈಕೊ, ಅಬ್ದುರ್ರ್ಮಾನ್ ಅಕ್ಕರೆಕ್ಕೆರೆ, ಅಮೀರ್ ತೊಕ್ಕೊಟ್ಟು, ಹೈದರ್ ಮುಕ್ಕಚ್ಚೆರಿ, ಅಲ್ತಾಫ್ ಶಾಂತಿಬಾಗ್ ಆರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.