ಹೆನ್ನಾಬೈಲ್(ವಿಶ್ವಕನ್ನಡಿಗ ನ್ಯೂಸ್): ಹಿಜಾಬ್ ಹಲಾಲ್ ವಿವಾದಗಳ ಸುತ್ತಲಿನ ವಾಸ್ತವಾಂಶಗಳು ಸೇರಿದಂತೆ ರಣರೋಚಕ ವಿಚಾರಗಳನ್ನು ಹೊಂದಿ ರಾಜ್ಯಾದ್ಯಂತ ಓದುಗರ ಕುತೂಹಲಕ್ಕೆ ಕಾರಣವಾಗಿರುವ ಲೇಖಕ ಮುಷ್ತಾಕ್ ಹೆನ್ನಾಬೈಲರವರ 3ನೇಯ ಕೃತಿ “ಸುಪ್ತಸಾಗರ”ವನ್ನು ಗಾಂಧೀ ಜಯಂತಿಯಂದು ಅವರ ಸ್ವಗೃಹದಲ್ಲಿ ಆಶಾ ಕಾರ್ಯಕರ್ತೆಯರು ಬಿಡುಗಡೆಗೊಳಿಸಿದರು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಆಶಾ ಕಾರ್ಯಕರ್ತೆಯರಾದ ವನೀತಾ ನಾಯ್ಕ್ ,ಸರೋಜಾ ಶೆಟ್ಟಿ, ಶಾಲಿನಿ ಕಮಲಶಿಲೆ, ಸುಲೋಚನ ಉಳ್ಳೂರ್, ಇದು ಸಮಸ್ತ ಆಶಾ ಕಾರ್ಯಕರ್ತೆಯರ ಸೇವೆಗೆ ಸಂದ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.
ಪುಸ್ತಕದಲ್ಲಿ ಪ್ರಸ್ತುತ ರಾಜಕೀಯ ಧಾರ್ಮಿಕ ಸಾಮಾಜಿಕ ವಿಚಾರಗಳ ಬಗ್ಗೆ ವಿಶೇಷವಾದ ಮತ್ತು ವಿಶಿಷ್ಟವಾದ ವಿಶ್ಲೇಷಣೆಗಳಿವೆ. ವಿವಾದಿತ ವಿಚಾರಗಳನ್ನು ಸಮಾಜಕ್ಕೆ ಹೇರಿ ಸಮುದಾಯಗಳ ನಡುವೆ ಘರ್ಷಣೆ ಹೆಚ್ಚಿಸುವುದು ಈಗಿನ ರಾಜಕೀಯ ಚಾಳಿಯಾಗಿದೆ. ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಒತ್ತು ನೀಡುವುದರ ಜೊತೆಗೆ ವಿವಾದಿತ ವಿಷಯಗಳ ನೈಜತೆಯ ಅನಾವರಣವನ್ನು ಈ ಪುಸ್ತಕ ಮಾಡಿಸುತ್ತಿದೆ.
ಭಿನ್ನ ವಿಚಾರಗಳಿಂದ ಕೂಡಿ ಓದುಗನನ್ನು ಓದಿಸಿಕೊಂಡು ಹೋಗುವ ಪ್ರಬಲ ನಿರೂಪಣೆ ಈ ಪುಸ್ತಕದಲ್ಲಿದೆ. ಹಿಜಾಬ್ ಹಲಾಲ್ ವಿವಾದಗಳ ಜೊತೆಗೆ ಬ್ರಾಹ್ಮ್ಮಣ್ಯ ವಿವಾದ, ಜನಸಂಖ್ಯೆ, ಫಿರ್ ಔನ್ , ಯಕ್ಷಗಾನ, ಜಾಗತಿಕ ಯುದ್ಧಗಳು ಮುಂತಾದ ವಿಚಾರಗಳ ಕುರಿತಾಗಿರುವ ಲೇಖನಗಳು ಸರ್ವ ಓದುಗರನ್ನು ತಲುಪಲಿದೆ ಎಂಬ ವಿಶ್ವಾಸವನ್ನು ಲೇಖಕ ಮುಷ್ತಾಕ್ ಹೆನ್ನಾಬೈಲ್ ವ್ಯಕ್ತಪಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.