ಬೆಂಗಳೂರು (www.vknews.in) : ಜುಲೂಸ್ ಎ ಮುಹಮ್ಮದಿ ಸಮಿತಿಯು ಅಕ್ಟೊಬರ್ 9 ನೇ ತಾರೀಖು YMCA ಮೈದಾನದಲ್ಲಿ ಈದ್ ಮೀಲಾದ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಜೆ 5 ಗಂಟೆಗೆ ಧ್ವಜಹಾರೋಣದಿಂದ ಮೀಲಾದ್ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಲಾಮಾ ಜಾಮಿ ಅಶ್ರಫ್ ಸಾಹಬ್ ಕಛೋಛ ಷರೀಫ್, ಮುಫ್ತಿ ಮುಜಾಹಿದ್ ಹುಸೈನ್ ರಜ್ವಿ ಇಲಹಬಾದ್ ಮತ್ತು ಮೌಲಾನಾ ನಾಸಿರ್ ರಜಾ ಸಾಹಬ್ ಭಾಗವಹಿಸಲಿದ್ದಾರೆ. ಅವರೊಂದಿಗೆ ಸ್ಥಳೀಯ ಮೌಲಾನಗಳು ಮತ್ತು ರಾಜಕೀಯ ಗಣ್ಯರು ಸಹ ಪಾಲ್ಗೊಳ್ಳಲಿದ್ದಾರೆ. ಈದ್ ಮೀಲಾದ್ ಬಗ್ಗೆ ಧಾರ್ಮಿಕ ಮುಖಂಡರು ಪ್ರವಚನವನ್ನು ನೀಡಲಿದ್ದಾರೆ.
ಈ ಸಲ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮೀಲಾದ್ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಕಸ್ತೂರಬಾ ಮತ್ತು ನೃಪತುಂಗ ರಸ್ತೆಯಲ್ಲಿ ಯಾವುದೇ ಮೆರವಣಿಗೆ ಹೋಗುವ ಹಾಗಿಲ್ಲ. ಜುಲೂಸ್ ಎ ಮುಹಮ್ಮದಿ ಸಮಿತಿಯ ಅಧ್ಯಕ್ಷರಾದ ಜನಾಬ್ ಆಫ್ಸರ್ ಬೇಗ್ ರವರು ಮಾಧ್ಯಮ ವೃಂದದೊಂದಿಗೆ ಮಾತನಾಡುತ್ತಾ ಸಾರ್ವಜನಿಕರು ಕಾರ್ಯಕ್ರಮಕ್ಕೆ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಬರಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡಬಾರದು. ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಈ ಸಲ ಮೆರವಣಿಗೆ ಇಲ್ಲ. ನಿಮ್ಮ ಸವಾರಿಗಳಲ್ಲಿ ಅಥವಾ ನಡೆಯುತ್ತಾ ಪ್ರವಾದಿವರ್ಯರ ಸ್ಮರಣೆ ಮಾಡುತ್ತಾ YMCA ಮೈದಾನಕ್ಕೆ ಬನ್ನಿ. ದಾರಿಯಲ್ಲಿ ದಯವಿಟ್ಟು ಶಿಸ್ತು ಕಾಪಾಡಿಕೊಳ್ಳಿ. ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಬೇಡಿಕೊಂಡರು.
ನಿಮ್ಮ ವಾಹನಗಳನ್ನು ನಿಲ್ಲಿಸಲು ಸಿವಿಲ್ ಕೋರ್ಟ್ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಈದ್ ಮೀಲಾದ್ ಪುಣ್ಯ ಕಾರ್ಯಕ್ರಮಕ್ಕೆ ಬನ್ನಿ ಎಂದು ಹೇಳುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.
ವರದಿ ; ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.