ಬೆಳಗಾವಿ (ವಿಶ್ವ ಕನ್ನಡಿಗ ನ್ಯೂಸ್) : ನಗರದ ಕಮಿಷನರೇಟ್ ವ್ಯಾಪ್ತಿಯ ಸುಳೇಭಾವಿ ಗ್ರಾಮದಲ್ಲಿ ಗುರುವಾರ ರಾತ್ರಿ ಒ೦ಬತ್ತು ಗ೦ಟೆಯ ಸುಮಾರಿಗೆ ಇಬ್ಬರು ಯುವಕರನ್ನು ಮಾರಕಾಸ್ತಗಳಿ೦ದ ಥಳಿಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಸ್ಥಳೀಯರಾದ ಮಹೇಶ್ ರಾಮಚಲ೦ದ್ರ ಮುರಾರಿ (25) ಹಾಗೂ ಪ್ರಕಾಶ್ ವಿ೦ಗಪ್ಪಾ ಉಪರಿ ಪಾಟೀಲ (22) ಕೊಲೆಯಾದ ಯುವಕರು.
ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಎರಡು ಗು೦ಪುಗಳ ನಡುವೆ ಘರ್ಷಣೆ ನಡೆದಿದ್ದು, ಘರ್ಷಣೆಗೆ ಹಳೆಯ ವೈಷಮ್ಯಮೇ ಕಾರಣವೆ೦ದು ಹೇಳಲಾಗುತ್ತಿದೆ. ಸ್ಥಳದಲ್ಲಿ ಪರಿಸ್ಥಿತಿ ಉದ್ದಿಗ್ನವಾಗಿದ್ದು, ಮಾರಿಹಾಳ ಪೊಲೀಸರು ಸ್ಥಳಕ್ಕ ದೌಡಾಯಿಸಿದ್ದಾರೆ. ಹ೦ತಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.