ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಕನ್ನಡ ನಾಡು ನುಡಿಯ ಮಹತ್ವ ಸಾರುತ್ತಾ ಮತ್ತೊಂದು ಕನ್ನಡ ರಾಜ್ಯೋತ್ಸವ ನಮ್ಮ ಮುಂದೆ ಬಂದಿದೆ. ಕನ್ನಡ ನಾಡಿನ ಹಿರಿಮೆ ಗರಿಮೆ ಮತ್ತೊಮ್ಮೆ ಜಗತ್ತಿನಲ್ಲಿ ಅನುರಣಿಸತೊಡಗಿದೆ. ಕನ್ನಡಿಗರು ಹುಟ್ಟು ಶ್ರಮಿಕರು. ಜನರ ಕಷ್ಟ ಬವಣೆ ಅವರಿಗೆ ಚೆನ್ನಾಗಿ ಗೊತ್ತಿದೆ. ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಲು ಕನ್ನಡ ಹೋರಾಟ ಗಾರರು,ಸಾಹಿತಿಗಳು, ಚಿಂತಕರ ತ್ಯಾಗ ಪರಿಶ್ರಮ ಇದ್ದರೂ ಪ್ರತಿಯೊಬ್ಬ ಕನ್ನಡಿಗರ ಪಾಲೂ ಅದರಲ್ಲಿದೆ.
ಮತ್ತೊಂದು ಸಂಭ್ರಮದ ದಿನ ಟಿಪ್ಪು ಜಯಂತಿ. ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರರಾಗಿ ಜಗದ್ವಿಖ್ಯಾತರಾಗಿರುವ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ (ರ)ರವರ ಮಹನೀಯ ಸ್ಮರಣೆಯ ಈ ದಿನ ಪ್ರತಿಯೊಬ್ಬ ನೈಜ ದೇಶಪ್ರೇಮಿಯ ದೇಶಪ್ರೇಮ ಬಡಿದೇಳಬೇಕಾದ ಮಹತ್ವದ ದಿನ!
ತನ್ನ ಇಬ್ಬರು ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟ ಇತಿಹಾಸ ಜಗತ್ತಿನಲ್ಲಿದ್ದರೆ ಅದು ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ (ರ) ರವರದ್ದು ಮಾತ್ರ. ನಾಡಿನ ಸರ್ವರಿಗೂ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು.
ಡಾ! ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.