ಕಾಲೇಜು ಪರಿಸರ ಸುಂದರಗೊಳಿಸಿದ ವಿದ್ಯಾರ್ಥಿಗಳು
ಬಾವುಟಗುಡ್ಡೆ, ನ.1: ಸಂತ ಅಲೋಷಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು ಇದರ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಲಾಗಿದ್ದ ‘ಹ್ಯಾಂಡ್ ಮೇಡ್’ ವಿಶೇಷ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳ ಮುಖಾಂತರ ಕಾಲೇಜು ಪರಿಸರದಲ್ಲಿರುವ ಮರಗಳ ಕಟ್ಟೆಗಳಲ್ಲಿ ಸುಂದರ ವರ್ಲಿ ಚಿತ್ರಗಳನ್ನು ಬಿಡಿಸಿ, ಸಂಸ್ಕೃತಿಯ ಅರಿವನ್ನು ಉಳಿಸುವ, ಮತ್ತು ಕಾಲೇಜು ಪರಿಸರವನ್ನು ಆಕರ್ಷಕವಾಗಿಸುವ ಕಾರ್ಯಕ್ರಮ ನಡೆಯಿತು. ಕಾಲೇಜಿನಲ್ಲಿರುವ ಮದರ್ ತೆರೆಸಾ ಪೀಸ್ ಪಾರ್ಕ್ ನಲ್ಲಿನ ಮರಗಳ ಕಟ್ಟೆಗಳಲ್ಲಿ ವರ್ಲಿ ಚಿತ್ರ ಬಿಡಿಸುವ ಚಟುವಟಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳ ಜೊತೆಗೆ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಭವ್ಯಾ ಶೆಟ್ಟಿ ಮತ್ತು ವಿದ್ಯಾರ್ಥಿ ಸಂಯೋಜಕಿ ಸನಾ ಕೈ ಜೋಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.