ದಮ್ಮಾಮ್(ವಿಶ್ವಕನ್ನಡಿಗ ನ್ಯೂಸ್): ಮೂರು ವಾರಗಳಿಂದ ಜುಬೈಲ್ನ ಅಲ್ ಫಲಾಹ್ ಮೈದಾನದಲ್ಲಿ ನಡೆದ ಪ್ರೇಕ್ಷಕರ ನೆಚ್ಚಿನ ಐಪಿಎಲ್ ಮಾದರಿ ಕ್ರಿಕೇಟ್ ಪಂದ್ಯಾಕೂಟವಾದ ಸೌದಿ ಪ್ರೀಮಿಯರ್ ಲೀಗ್ ಶುಕ್ರವಾರ ರಾತ್ರಿ ಬಹಳ ಯಶಸ್ವಿಯೊಂದಿಗೆ ಮುಕ್ತಾಯಗೊಂಡಿತು. ಗುರುವಾರ ಲೀಗ್ ನ ಕೊನೆಯ 4 ಪಂದ್ಯಗಳನ್ನು ಎಲ್ಲಾ ಎಂಟು ತಂಡಗಳು ಪರಸ್ಪರ ಆಡಿತ್ತು. ಮ್ಯಾಕ್ ಝಿಗ್ಮ, ಫಾಸ್ಟೆಕ್ ವಾರಿಯರ್ಸ್ ಹಾಗೂ ಕೆಎಮ್ಟಿ ಸ್ಟೈಕರ್ಸ್ ಮೂರೂ ತಂಡಗಳು ಅದಾಗಲೆ ಮುಂದಿನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ನಾಲ್ಕನೆ ಸ್ಥಾನದ ಅರ್ಹತೆಗಾಗಿ ಲೀಗ್ ನ ಕೊನೆಯ ಪಂದ್ಯ ಫ್ರೆಂಡ್ಸ್ ಆಡ್ಕ ಹಾಗೂ ಯುನಿಫೈಡ್ ನಡುವೆ ನಡೆಯಿತು. ಅಂತಿಮವಾಗಿ ಫ್ರೆಂಡ್ಸ್ ಅಡ್ಕ ತಂಡವನ್ನು ಮಣಿಸಿ ಯುನಿಫೈಡ್ ಅಂತಿಮ ನಾಲ್ಕನೇ ಸ್ಥಾನಕ್ಕೆ ಅರ್ಹತೆ ಪಡೆಯಿತು.
ಅರ್ಹತಾ ಸುತ್ತಿನ ಅಂಕ ಪಟ್ಟಿಯ ಮೊದಲ ಎರಡು ತಂಡಗಳಾದ ಮ್ಯಾಕ್ ಝಿಗ್ಮ ಹಾಗೂ ಫಾಸ್ಟೆಕ್ ನಡುವೆ ನಡೆದಂತಹಾ ಪಂದ್ಯದಲ್ಲಿ ಫಾಸ್ಟೆಕ್ ವಾರಿಯರ್ಸ್ ಗೆದ್ದು ಮೊದಲ ತಂಡ ವಾಗಿ ಫೈನಲ್ ಪ್ರವೇಶಿಸಿತು. ಅಂಕ ಪಟ್ಟಿಯ ಮೂರು ಮತ್ತು ನಾಲ್ಕನೇ ಸ್ಥಾನದಲಿದ್ದ ಕೆಎಮ್ಟಿ ಸ್ಟೈಕರ್ಸ್ ಹಾಗೂ ಯುನಿಫೈಡ್ ನಡುವೆ ನಡೆದಂತಹಾ ಎಲಿಮಿನೇಟರ್ ಪಂದ್ಯದಲ್ಲಿ ಯುನಿಫೈಡ್ ಗೆಲ್ಲುವುದರೊಂದಿಗೆ ಎರಡನೇ ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಿತು. ಫೈನಲ್ ಗೆ ಎರಡನೇ ತಂಡದ ಅರ್ಹತೆಗಾಗಿ ಮ್ಯಾಕ್ ಝಿಗ್ಮ ಹಾಗೂ ಯುನಿಫೈಡ್ ನಡುವೆ ಜಿದ್ದಾ ಜಿದ್ದಿನ ಹೊರಾಟ ನಡೆಯಿತು. ಕೊನೆಯದಾಗಿ ಮ್ಯಾಕ್ ಝಿಗ್ಮ ಗೆಲುವಿನೊಂದಿಗೆ ಅಂತಿಮ ಹಂತಕ್ಕೆ ಪ್ರವೇಶ ಪಡೆಯಿತು.
ಅಡ್ಕ ಪ್ರಾಯೋಜಕತ್ವ ಹಾಗೂ ಫಹದ್ ಅಲ್ ತಮೀಮಿ ಸಹ ಪ್ರಾಯೋಜಕತ್ವದಲ್ಲಿ ನಡೆದ ಸೌದಿ ಪ್ರೀಮಿಯರ್ ಲೀಗ್ ನ ಮೂರನೇ ಆವೃತಿಯ ಪ್ರಶಸ್ತಿಗಾಗಿ ಮೊದಲ ಅರ್ಹತಾ ಪಂದ್ಯವಾಡಿದ ಫಾಸ್ಟೆಕ್ ಹಾಗೂ ಮ್ಯಾಕ್ ಝಿಗ್ಮನಡುವೆ ನಡೆಯಿತು. ಬಲಿಷ್ಟ ಮ್ಯಾಕ್ ಝಿಗ್ಮ ಫಾಸ್ಟೆಕ್ ತಂಡವನ್ನು ಮಣಿಸುವುದರೊಂದಿಗೆ ಮೈದಾನದಲ್ಲಿ ಪೂರ್ಣ ಪ್ರಮಾಣದಲ್ಲಿ ನೆರಿದಿದ್ದ ಪ್ರೇಕ್ಷಕರ ಮುಂದು ಎಸ್ಪಿಎಲ್ ಪ್ರಶಸ್ತಿ ಎತ್ತಿ ಹಿಡಿಯಿತು. ಸರಣಿಯುದ್ದಕ್ಕೂ ಮ್ಯಾಕ್ ಝಿಗ್ಮ ಪರ ರಶೀದ್ ದಾಂಡುಗಾರಿಕೆ ಹಾಗೂ ಕಿಶೋರ್ ಎಸೆತಗಾರಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ದಾಂಡುಗಾರಿಗೆ ಎಸೆತಗಾರಿಕೆ ಪ್ರಶಸ್ತಿಯನ್ನು ಗೆದ್ದರುಕೊಂಡರು. ಸರಣಿಯ ಅತ್ಯುತ್ತಮ ವಿಕೇಟ್ ಕೀಪರ್ ಪ್ರಶಸ್ತಿಯನ್ನು ಫಾಸ್ಟೆಕ್ ತಂಡದ ಮಾಲಕ ನೈಮುಲ್ ಅಶ್ರಫ್ ಕೊಂಚಾರ್ ಗೆದ್ದುಕೊಂಡರು. ಸರಣಿಯಲ್ಲಿ ಬೌಲರ್ ಗಳ ಬೆವರಿಳಿಸಿದ ಮ್ಯಾಕ್ ಝಿಗ್ಮ ತಂಡದ ಐಕಾನ್ ಹಾಗೂ ಕಪ್ತಾನ ಬಾಲೂ ಬಿಜು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸ್ನೇಹದೀಪ ಎಚ್ಐವಿ ಮಕ್ಕಳ ಸಹಾಯಾರ್ತವಾಗಿ ನಡೆಸಿದ ಸೌದಿ ಪ್ರೀಮಿಯರ್ ಲೀಗ್ ಮೂರನೇ ಆವೃತಿಯ ಸಭಾ ಕಾರ್ಯಕ್ರಮದ ಮುಂಚಿತವಾಗಿ ನೆರೆದಿದ್ದ ಜನರ ಮುಂದೆ ಶಮೀರ್ ಅಹ್ಮದ್ ಬಾವ ಸ್ನೇಹ ದೀಪ ಎಚ್ಐವಿ ಮಕ್ಕಳ ವಿಡೀಯೊ ತುನುಕು ಬಿಗ್ ಸ್ಕ್ರೀನ್ ನಲ್ಲಿ ಪ್ರದರ್ಶಿಸುವ ಮೂಲಕ ಎಸ್ಪಿಎಲ್ ಆಯೋಜನೆಯ ಉದ್ದೇಶ ಜನರಿಗೆ ಮನವರಿಗೆ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಲೀಮ್ ಉಡುಪಿ ಅತಿಥಿಗಳನ್ನು ಸ್ವಾಗತಿಸಿದರು, ಎಸ್ಪಿಎಲ್ ಆಯೋಜಕರಾದ ಇಬ್ಬ ಬಜ್ಪೆ , ಸೆಫ್ವಾನ್ ಬಜ್ಪೆ, ಮೊಹಮ್ಮದ್ ಫಯಾಝ್ ಹಾಗೂ ನಝೀರ್ ಕಲ್ಲೂರ್ ಅತಿಥಿಗಳಿಗೆ ಹೂವುಗುಚ್ಚ ನೀಡಿ ವೇದಿಕೆಗೆ ಭರಮಾಡಿಕೊಂಡರು. ಸಭಾ ಕಾರ್ಯಕ್ರಮವನ್ನು ಝಕರೀಯಾ ಅಲ್ ಮುಝೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ನೇಹ ದೀಪ ಎಂಬ ಸಂಸ್ಥೆಯ ಆಶಾ ಕಿರಣವಾಗಿರುವ ಸೌದಿ ಪ್ರೀಮಿಯರ್ ಲೀಗ್ ಇನ್ನೂ ಮುಂದುವರಿಯಲಿದೆ ಇಂತಹಾ ಇನ್ನಷ್ಟು ಕಾರ್ಯಕ್ರಮಗಳು ನಿಮ್ಮಿಂದಾಗಲಿ ಎಂದು ಬೆಂಬಲಿಸಿದರು. ಶರೀಫ್ ಅಲ್ ಮುಝೈನ್ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕ್ರೀಡಾಕೂಟದ ಪ್ರಾಯೋಜಕರಾದ ಅಡ್ಕ ಕಾಂಟ್ರಾಕ್ಟಿಂಗ್ ಇದರ ಶೇಕ್ ಅಹ್ಮದ್ ಭಾವ ಹಾಗೂ ಸಹ ಪ್ರಾಯೋಜಕರಾದ ಫಹದ್ ಅಲ್ ತಮೀಮಿ ಸಂಸ್ಥೆಯ ವ್ಯವಹಾರ ಸಲಹೆಗಾರರಾದ ಅಬ್ದುಲ್ ಅಝೀಝ್ ಇವರನ್ನು ವೇದಿಕೆಯಲ್ಲಿ ಎಸ್ಪಿಎಲ್ ನ ವಿಷೇಶ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾಜದಲ್ಲಿ ಚಿರ ಪರಿಚಿತ ಮುಸ್ತಾಕ್ ಅಹ್ಮದ್ ಕಾರ್ಕಳ ಇವರಿಗೆ ಎಸ್ಪಿಎಲ್ ವತಿಯಿಂದ ವೇದಿಕೆಯಲ್ಲಿ ಅತಿಥಿಗಳ ಮುಂದೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇನ್ನು ಮುಂದಕ್ಕೆ ಅವರು ಡಿಜೆ ಮುಸ್ತಾಕ್ ಅಲ್ಲ ಮುಸ್ತಾಕ್ ಅಹ್ಮದ್ ಕಾರ್ಕಳ ಎಂಬ ಸಂದೇಶ ಸಲೀಮ್ ಉಡುಪಿ ರವಾನಿಸಿದರು.
ವೇದಿಕೆಯಲ್ಲಿ ಅಶ್ಫಾಕ್ ಪ್ಲಾಂಟ್ ಸೊಲ್ಯುಶನ್, ನಝೀರ್ ಹುಸೈನ್ ಅಲ್ ಫಲಾಹ್, ಅಬ್ದುಲ್ ಸತ್ತಾರ್ ಕ್ಲೌಡ್ 7, ಶಿವ ಶಕ್ತಿ ಕ್ಲೌಡ್ 7, ಸಿದ್ದೀಕ್ ಕೆಎಮ್ಟಿ ಬ್ಲೂ ಲೈನ್, ಆಸೀಫ್ ಡೀಲ್ಸ್, ಮೊಹಮ್ಮದ್ ಫಾರೂಕ್ ಪೋರ್ಟ್ ವೈ, ಸೈಯ್ಯದ್ ಭಾಮ, ಫಾರೂಕ್ ಅರಬ್ ಎನರ್ಜಿಯ, ಬಶೀರ್ ಅಲ್ ಫಲಕ್, ಯೂನುಸ್ ಮನಿಪಾಲ್, ಆಸಿಫ್ ಕೃಷ್ಣಾಪುರ ಹಾಗೂ ಹಾಜಿ ಇಸ್ಮಾಯಿಲ್ ಉಪಸ್ಥಿತರಿದ್ದರು. ಸೈಫಲ್ಲ ತೋಡಾರ್ ಕಾರ್ಯಕ್ರಮವನ್ನು ನಿರೂಪಿಸಿ ಸಫ್ವಾನ್ ಬಜ್ಪೆ ವಂದಿಸಿದರು.
ವರದಿ – ಹಫೀಝ್ ಇಸ್ಮಾಯಿಲ್ ಎಸ್ಪಿಎಲ್ ಮೀಡಿಯಾ ಟಿಮ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.