ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ಘಟಕದ ವತಿಯಿಂದ ‘ಕನ್ನಡ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ದಿನಾಂಕ 01-11-2022ನೇ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಜರುಗಿತು.
ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಎಸ್ ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ರಾಜ್ಯೋತ್ಸವದ ಹಿನ್ನಲೆ ಮತ್ತು ಪ್ರಾಮುಖ್ಯತೆ ಬಗ್ಗೆ ಗೌರವ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿದರು.
ನರಕಕ್ಕೆ ಇಳಿಸಿ ನಾಲಗೆ ಸೀಳ್ಸಿ ಬಾಯಿ ಹೊಲಿಸಿ ಹಾಕಿದ್ರೂ ಮೂಗ್ನಲ್ ಕನ್ನಡ ಪದವಾಡ್ತೀನಿ ಎಂದು ಮಲಗಿದ್ದ ಕನ್ನಡಿಗರನ್ನು ಅಂದು ಬಡಿದೆಬ್ಬಿಸಿದ ಜಿ ಪಿ ರಾಜರತ್ನಂ ಮಗದೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸಿದರು. ಕಾರ್ಯಕಾರಣಿ ಸಮಿತಿ ಸದಸ್ಯರಾದ ಶ್ರೀ ಎನ್ ಸುಬ್ರಾಯ ಭಟ್, ಶ್ರೀ ರಘು ಇಡ್ಕಿದು ಮತ್ತು ಶ್ರೀ ಗಣೇಶ್ ಪ್ರಸಾದ್ ಜೀ ಅವರು ಕನ್ನಡ ಚುಟುಕು ಮತ್ತು ಕವನವನ್ನು ಹಾಡಿ ರಂಜಿಸಿದರು. ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಾ. ಮೀನಾಕ್ಷಿ ರಾಮಚಂದ್ರ, ಶ್ರೀಮತಿ ಸುಖಲಾಕ್ಷಿ, ಶ್ರೀಮತಿ ರತ್ನಾವತಿ ಜೆ ಬೈಕಾಡಿ, ಕೆ. ಕೃಷ್ಣಪ್ಪ, ಮುರಲೀಧರ ಭಾರಧ್ವಜ್ ಮುಂತಾದವರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಇದೇ ಸಂಭ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.