ಬ್ರಹ್ಮಾವರ (ವಿಶ್ವ ಕನ್ನಡಿಗ ನ್ಯೂಸ್) : ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ವರ್ಷದ ಲ್ಯಾಬ್ ಟೆಕ್ನಿಷಿಯನ್ ಕಲಿತಿದ್ದ ಯುವತಿಯೋರ್ವರು ನಾಪತ್ತೆಯಾದ ಘಟನೆ ನಡೆದಿದೆ. ಹೆಬ್ರಿ ಶಿವಪುರದ ಅಜ್ಜಿ ಮನೆಯಲ್ಲಿ ವಾಸವಿದ್ದ ತೀರ್ಥಹಳ್ಳಿ ಮೂಲದ ರಂಜಿತಾ ನಾಪತ್ತೆಯಾದ ಯುವತಿ.
ಉಡುಪಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ವ್ಯಾಸಂಗ ಮಾಡಿದ್ದ ಇವರು, ಬಳಿಕ ತೀರ್ಥಹಳ್ಳಿಯಲ್ಲಿ ಒಂದು ವರ್ಷ ಇದ್ದು ಉಡುಪಿಯಲ್ಲಿ ಉದ್ಯೋಗ ಹುಡುಕುವ ಉದ್ದೇಶದಿಂದ ಎರಡು ವಾರಗಳ ಹಿಂದೆ ಬಂದು ಬ್ರಹ್ಮಾವರ ಆರೂರು ಗ್ರಾಮದ ಮನೆಯಲ್ಲಿ ವಾಸವಿದ್ದರು. ಮೂರು ದಿವಸಗಳ ಹಿಂದೆ ಬ್ರಹ್ಮಾವರದ ಆಸ್ಪತ್ರೆಯಲ್ಲಿ ಕೆಲಸದ ಬಗ್ಗೆ ಮಾತನಾಡಿಕೊಂಡು ಡಿ. 11 ರಂದು ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದರು. ಬಳಿಕ ಡಿ. 9 ರಂದು ತಾಯಿ ಮನೆಯಾದ ತೀರ್ಥಹಳ್ಳಿಗೆ ಹೋಗಿ ಬರುವುದಾಗಿ ತಿಳಿಸಿ ಮಧ್ಯಾಹ್ನ ಆರೂರು ಕ್ರಾಸ್ ಕುಂಜಾಲು ಬಳಿ ಬಸ್ ಹತ್ತಿ ಹೋದವರು ತೀರ್ಥಹಳ್ಳಿಗೂ ಹೋಗದೇ, ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.