ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) ; ಮಂಗಳೂರಿನ ವಿವಾಹಿತ ಯುವಕನೋರ್ವ ಪ್ರೇಯಸಿಯೊಂದಿಗೆ ನಗರದ ಲಾಡ್ಜ್ ನಲ್ಲಿ ತಂಗಿದ್ದಾರೆ೦ದು ತಿಳಿದ ಯುವಕನ ಪತ್ನಿ ಭಾನುವಾರ ಸಂಜೆ ಸುಳ್ಯಕ್ಕೆ ಬ೦ದು ಲಾಡ್ಜ್ ಬಳಿ ಗಲಾಟೆ ಮಾಡಿದ ಪ್ರಕರಣ ನಡೆದಿದೆ.
ತನ್ನ ಪತ್ನಿ ಲಾಡ್ಜ್ನ ರಿಸೆಪ್ಶನ್ ಬಳಿಗೆ ಬ೦ದು ನಿಂತಿರುವ ವಿಷಯ ತಿಳಿದ ಲಾಡ್ಜ್ ನಲ್ಲಿದ್ದ ವಿವಾಹಿತ ಯುವಕ ಪ್ರೇಯಸಿಯೊಂದಿಗೆ ಲಾಡ್ಜ್ ನಿ೦ದ ಹೊರಗೆ ಬಂದಿದ್ದಾನೆ. ಇವರು ಬರುವುದನ್ನು ಕಾಯುತ್ತಿದ್ದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ. ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ.
ಯುವತಿ ಪತಿಯನ್ನು ಮತ್ತು ಆತನ ಪ್ರೇಯಸಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎ೦ದು ತಿಳಿದುಬ೦ದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.