ಕಲಬುರಗಿ (ವಿಶ್ವ ಕನ್ನಡಿಗ ನ್ಯೂಸ್) ; ಶಾಲೆಯಲ್ಲಿ ಮೆದುಳು ಜ್ವರ ತಡೆಯಲು ನೀಡಲಾಗುತ್ತಿದ್ದ ವ್ಯಾಕ್ಸಿನ್ ಪಡೆದಿದ್ದ ವಿದ್ಯಾರ್ಥಿಯೋರ್ವ ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದಾನೆ. ಇದಕ್ಕೆ ಬೇಜವಾಬ್ದಾರಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಮಕ್ಕಳಿಗೆ ಮಾರಕವಾಗಿ ಕಾಡುವ ಮೆದುಳು ಜ್ವರ ತಡೆಗಾಗಿ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ವ್ಯಾಕ್ಸಿನ್ ಕೊಡಲಾಗುತ್ತಿದೆ. ಅದರಂತೆ ವ್ಯಾಕ್ಸಿನ್ ಪಡೆದಿದ್ದ ಕಲಬುರಗಿಯ ಹೀರಾಪೂರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕ ಆಕಾಶ ಎಂಬಾತ ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಬಾಲಕನ ಸಾವಿಗೆ ಜೆಇ ವಾಕ್ಸಿನ್ ಕಾರಣ ಎಂದು ಪೊಷಕರು ಆರೋಪಿಸಿದ್ದಾರೆ. ಆಕಾಶ ಓದುತ್ತಿದ್ದ ಹೀರಾಪುರ ಸರ್ಕಾರಿ ಶಾಲೆಯಲ್ಲಿ ಕಳೆದ ಡಿ.5 ರಂದು ಮಕ್ಕಳಿಗೆ ಜೆಇ ವ್ಯಾಕ್ಸಿನ್ ನೀಡಲಾಗಿತ್ತು. ಅಂದು ಆಕಾಶನಿಗೂ ಕೂಡಾ ವಾಕ್ಸಿನ್ ಹಾಕಲಾಗಿತ್ತು. ಎರಡು ದಿನಗಳ ನಂತರ ಆಕಾಶನಿಗೆ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಡಿ.9 ರಂದು ವಿಪರೀತ ಜ್ವರದಿಂದ ಬಳಲಿದ ಆಕಾಶನನ್ನು ನಗರದ ಸಂಗಮೇಶ್ವರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಮುಂಚೆ ಆರೋಗ್ಯವಾಗಿದ್ದ ಬಾಲಕ ವ್ಯಾಕ್ಸಿನ್ ಕೊಟ್ಟ ಬಳಿಕ ಜ್ವರಕ್ಕೆ ಬಲಿಯಾಗಿದ್ದಾನೆ. ಇದಕ್ಕೆ ಜೆಇ ವ್ಯಾಕ್ಸಿನ್ ಕಾರಣ, ಇದರಲ್ಲಿ ಆರೋಗ್ಯ ಅಧಿಕಾರಿ ಸಿಬ್ಬಂದಿ ಬೇಜವಾಬ್ದಾರಿಯೇ ಕಾರಣ ಎಂದು ಪೊಷಕರು ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.