ಕೇರಳ (ವಿಶ್ವ ಕನ್ನಡಿಗ ನ್ಯೂಸ್) ; ರಜೆಯ ಮೇಲೆ ಊರಿಗೆ ಬಂದಿದ್ದ ವಲಸಿಗ, ಬೈಕಿನಲ್ಲಿ ಪ್ರಯಾಣಿಸುವಾಗ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಸಾವನ್ನಪ್ಪಿದ್ದಾರೆ. ಕೊಂಗನೂರಿನ ಪುಣತ್ತಿಲ್ಪುರದ ಅಬೂಬಕ್ಕರ್ ಎಂಬವರ ಪುತ್ರ ಪಿ.ಪಿ.ಮುನೀರ್ (49) ಮೃತ ದುರ್ದೈವಿ.
ಅನಾರೋಗ್ಯ ಪೀಡಿತ ತಂದೆಯನ್ನು ನೋಡಿಕೊಂಡು ಪತ್ನಿಯೊಂದಿಗೆ ಮನೆಗೆ ಮರಳುತ್ತಿದ್ದಾಗ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸೌದಿ ಅರೇಬಿಯಾದ ಹಯಾಲ್ ಪ್ರಾಂತ್ಯದಲ್ಲಿ ಕೆಲಸ ಮಾಡುತ್ತಿರುವ ಮುನೀರ್ ತನ್ನ ತಂದೆಯ ಚಿಕಿತ್ಸೆಗೆ ಸಂಬಂಧಿಸಿದಂತೆ ಎರಡೂವರೆ ತಿಂಗಳ ಹಿಂದೆ ತವರಿಗೆ ಮರಳಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.