ದೋಹ(ವಿಶ್ವಕನ್ನಡಿಗ ನ್ಯೂಸ್): ಮೊರಾಕ್ಕೊ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಫ್ರಾನ್ಸ್ ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.
ಭಾನುವಾರ ನಡೆಯುವ ಫೈನಲ್ನಲ್ಲಿ ಫ್ರಾನ್ಸ್ ಲಿಯೊನಾಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾವನನ್ನು ಎದುರಿಸಲಿದೆ.
ಫ್ರಾನ್ಸ್ನ ಫುಲ್ ಬ್ಯಾಕ್ ಆಟಗಾರ ಥಿಯೊ ಹೆರ್ನಾಂಡಿಸ್ ಅವರು ಗಳಿಸಿದ ಗೋಲಿನ ಮೂಲಕ ಐದನೇ ನಿಮಿಷದಲ್ಲೇ ಮುನ್ನಡೆ ಪಡೆದ ಫ್ರಾನ್ಸ್ ಪರ 79ನೇ ನಿಮಿಷದಲ್ಲಿ ರಂಡಾಲ್ ಕೊಲೊ ಮುವಾನಿ ಗೋಲು ಗಳಿಸುವ ಮೂಲಕ ಮುನ್ನಡೆ ಹೆಚ್ಚಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.