(www.vknews.in) ಮಹಾರಾಷ್ಟ್ರ ಮಂಡಲ್ ಕತಾರ್ (MMQ), ಇಂಡಿಯನ್ ಕಲ್ಚರಲ್ ಸೆಂಟರ್ (ICC) ಸಹಯೋಗದೊಂದಿಗೆ FIFA ಆಹ್ವಾನಿತ ಗಣ್ಯರಾದ ಶ್ರೀ ಯುವರಾಜ್ ಮಲೋರ್ಜಿರಾಜೆ ಶಾಹು ಛತ್ರಪತಿ ಅವರನ್ನು ಸನ್ಮಾನಿಸಿತು. ಮಹಾರಾಷ್ಟ್ರ ಮಂಡಲ್ ಕತಾರ್ ಅಧ್ಯಕ್ಷರು ಸಂಜಯ್ ಪಾಟೀಲ್ ಹಾಗೂ 2021-2022 ಆಡಳಿತ ಮಂಡಳಿ ಸದಸ್ಯರು ಗಣ್ಯರಾದ ಶ್ರೀ ಮಲೋರ್ಜಿರಾಜೆ ಶಾಹು ಛತ್ರಪತಿ ಮತ್ತು ಶ್ರೀಮತಿ ಮಧುರಿಮಾ ರಾಜೇ ಅವರನ್ನು 23 ನವೆಂಬರ್ 2022 ರಂದು ದೋಹಾದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಸನ್ಮಾನಿಸಿದರು. ಮಲೋರ್ಜಿರಾಜೆ ಛತ್ರಪತಿ ಕೊಲ್ಲಾಪುರದ ರಾಜಮನೆತನಕ್ಕೆ ಸೇರಿದವರು ಮತ್ತು ಕೊಲ್ಲಾಪುರದ ಶಾಹುವಿನ ವಂಶಸ್ಥರು, ರಾಜಕಾರಣಿ ಮತ್ತು ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸದಸ್ಯರು. ಅವರು ಅಖಿಲ ಭಾರತ ಶ್ರೀ ಶಿವಾಜಿ ಸ್ಮಾರಕ ಸಂಘದ ಕಾರ್ಯದರ್ಶಿಯಾಗಿದ್ದಾರೆ.
ಐಸಿಸಿ ಉಪಾಧ್ಯಕ್ಷರು ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿಬಿಎಫ್ ಅಧ್ಯಕ್ಷರು ವಿನೋದ್ ನಾಯರ್, ಐಸಿಸಿ ಸಾಂಸ್ಕೃತಿಕ ಮುಖ್ಯಸ್ತರು ಶ್ವೇತಾ ಕೋಷ್ಠಿ, ಎಂಎಂಕ್ಯೂ ಮಾಜಿ ಅಧ್ಯಕ್ಷರು, ಎಂಎಂಕ್ಯೂ ಸಂಸ್ಥಾಪಕ ಸದಸ್ಯರು, ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷರು ಮಹೇಶ್ ಗೌಡ, ಇತರ ಸಂಘದ ಮುಖ್ಯಸ್ಥರು ಮತ್ತು ಎಂಎಂಕ್ಯೂ ಕೌನ್ಸಿಲ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷೀಯ ಭಾಷಣ ಮತ್ತು ಮಹಾರಾಷ್ಟ್ರದ ಸಂಪ್ರದಾಯ ಮತ್ತು ಸಂಸ್ಕೃತಿಯಂತೆ ಗಣ್ಯರನ್ನು ಸನ್ಮಾನಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ನ ಕಾರ್ಯಕಾರಿ ಸಮಿತಿಯ ಅನುಭವವನ್ನು ಶ್ರೀ ಮಲೋರ್ಜಿರಾಜೆ ಶಾಹು ಛತ್ರಪತಿ ಅವರು ಸಭೆಗೆ ತಿಳಿಸುವ ಮೂಲಕ ಸದಸ್ಯರನ್ನು ಪ್ರೇರೇಪಿಸಿದರು. ಸಮಿತಿಯು ಗಣ್ಯರ ಸಮ್ಮುಖದಲ್ಲಿ ಸದಸ್ಯರ ಪ್ರತಿಭೆಯನ್ನು ಎತ್ತಿ ಹಿಡಿಯಲು ವಿವಿಧ ಗಾಯನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಕಾರ್ಯಕ್ರಮವನ್ನು MMQ ಕಲಾವಿದೆ ಮಾನಸಿ ವಾಶಿಕರ್, ರೇವಾ ವಾಶಿಕರ್ ಮತ್ತು ಶ್ರೀಯಾ ಪಾಟೀಲ್ ಪ್ರದರ್ಶಿಸಿದ ವಿವಿಧ ಸಾಂಸ್ಕೃತಿಕ ಗಾಯನ ಕಾರ್ಯಕ್ರಮಗಳಿಂದ ಅಲಂಕರಿಸಲಾಗಿತ್ತು. ಕಲಾವಿದೆ ಪ್ರಾಂಜಲಿ ಮುಲಿಕ್ ಅವರು ಫಿಫಾ ವಿಶ್ವಕಪ್ನಲ್ಲಿ ಪೇಪರ್ಗಳ ಚಲಿಸುವ ಶಿಲ್ಪಗಳ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಶ್ವೇತಾ ಮತ್ತು ಅವರ ತಂಡವು ಯೋಗ ಸಂಗೀತ ರೂಪವನ್ನು ಪ್ರದರ್ಶಿಸಿತು. ಮಹಾರಾಷ್ಟ್ರ ಮಂಡಲ್ ಕತಾರ್ನ ಪ್ರಧಾನ ಕಾರ್ಯದರ್ಶಿ ಶ್ರೀ ಸುಶಾಂತ್ ಸಾವರ್ಡೇಕರ್ ಅವರು ಎಲ್ಲಾ ಗಣ್ಯರಿಗೆ ಮತ್ತು MMQ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.