ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ತಾಲೂಕಿನ ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎಂಬಲ್ಲಿ ಟ್ರಾನ್ಸ್ಫರ್ ಪೆಟ್ಟಿಗೆ ಇದ್ದ ವಿದ್ಯುತ್ ಕಂಬವೇರಿ ಸರಿ ಪಡಿಸುತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಪಟ್ಟೆಯ ಪ್ರತಿಭಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ, ಪಡುವನ್ನೂರು ಗ್ರಾಮದ ಪಡುಮಲೆ ಸರ್ಕಾರಿ ಶಾಲಾ ಸಮೀಪದ ನಿವಾಸಿ ಕೃಷ್ಣ ನಾಯ್ಕ್ ಮತ್ತು ಸರಸ್ವತಿ ದಂಪತಿ ಪುತ್ರ ರಂಜಿತ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಪರಿಚಯದ ಹುಡುಗನೊಬ್ಬ ತನ್ನ ಮನೆಗೆ ವಿದ್ಯುತ್ ಇಲ್ಲ, ಅದನ್ನು ಸರಿಪಡಿಸುವಂತೆ ರಂಜಿತ್ ನಲ್ಲಿ ಹೇಳಿ ಆತನನ್ನು ತನ್ನ ಮನೆಯ ಸಮೀಪದ ಟ್ರಾನ್ಸ್ಫರ್ ಇರುವ ವಿದ್ಯುತ್ ಕಂಬದ ಬಳಿಗೆ ಕರೆದು ಕೊಂಡು ಹೋಗಿದ್ದ ಎನ್ನಲಾಗಿದ್ದು, ವಿದ್ಯುತ್ ಕಂಬವೇರಿ ವಿದ್ಯುತ್ ಸರಿಪಡಿಸಲು ಯತ್ನಿಸುತಿದ್ದ ವೇಳೆ ರಂಜಿತ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಪಡುಮಲೆ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯಾಗಿಡ್ಡ ರಂಜಿತ್ ನಿಧನದ ಹಿನ್ನಲೆಯಲ್ಲಿ ಶಾಲೆಯಲ್ಲಿ ಭಾನುವಾರ ನಡೆಯಲಿದ್ದ ಶಾಲಾ ವಾರ್ಷಿಕೋತ್ಸವವನ್ನು ಮುಂದೂಡಲಾಗಿದೆ. ಸಂಪ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.