(www.vknews.in)ಭಾಷೆ ಮನುಷ್ಯ ಮನುಷ್ಯನ ಮಾತುಕತೆಯ ಮಾಧ್ಯಮ. ಮನುಷ್ಯ ಮನಸ್ಸುಗಳನ್ನು ಮಧುರದಲ್ಲಿ ಮಗ್ನ ಮಾಡುವ ಮಂತ್ರ. ಜಗತ್ತಿನಲ್ಲಿ ಪ್ರತಿಯೊಂದು ವ್ಯವಹಾರಗಳು ನಡೆಯುವುದು. ಭಾಷೆಗಳ ಮುಖಾಂತರ ಪ್ರಪಂಚದಲ್ಲಿ ಸಹಸ್ರರು ಭಾಷೆಗಳಿವೆ. ಅವುಗಳಲ್ಲಿ ಪ್ರಾದೇಶಿಕ ಮಾನ್ಯತೆ ರಾಷ್ಟ್ರ ಮಾನ್ಯತೆ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಭಾಷೆಗಳಿವೆ ಆ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಭಾಷೆಗಳಲ್ಲಿ ಅರಬಿಕ್ ಭಾಷೆ ಒಂದು ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಅವತೀರ್ಣಗೊಂಡದ್ದು ಈ ಭಾಷೆಯಲ್ಲಾಗಿದೆ.
ಮಿಕ್ಕ ನಾಗರಿಕತೆಗಳಿಗೆ ಸೇತುವೆಯಾಗಿ ಅರಬಿಕ್ ಭಾಷೆ, ಸಾರಲ್ಪಟ್ಟಿದೆ. ಜಗತ್ತಿನಾದ್ಯಂತ ನಾಲ್ಕು ನೂರು ದಶಲಕ್ಷ ಜನರು ದೈನಂದಿನ ಸಂವಹನ ನಡೆಸುವ ಭಾಷೆಯಾಗಿದೆ ಅರಬಿಕ್. ಈ ಭಾಷೆಯನ್ನು ನಾಗರಿಕತೆಗಳ ಸೇತುವೆ ಎನ್ನಲು ಕಾರಣ ಈ ಭಾಷೆಯಿಂದಾಗಿದೆ ಜಗತ್ತಿನಾದ್ಯಂತ ಆವಿಷ್ಕೃತ ಸಂಸ್ಕೃತಿ ಆಚಾರ ವೈಚಾರಿಕತೆ ಶಾಸ್ತ್ರಗಳು ಪ್ರಸರಿಸಲ್ಪಟ್ಟದ್ದು. ಈ ಭಾಷೆಯನ್ನು ೧೯೭೩ ಡಿಸೆಂಬರ್ 18ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜಗತ್ತಿನ ಆರು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಿತು. 2012ರಿಂದ ಮುಂದಿನ ಎಲ್ಲಾ ವರ್ಷಗಳಲ್ಲಿ ಆ ದಿನವನ್ನು ವಿಶ್ವ ಅರಬಿಕ್ ಭಾಷಾ ದಿನವಾಗಿ ಆಚರಿಸಲ್ಪಡುತ್ತಿದೆ.ವಿಶ್ವ
ಭಾಷೆಗಳಲ್ಲಿ ಅತಿ ಹೆಚ್ಚು ಭಾಷೆಗಳು ಅವಲಂಬಿತಗೊಂಡಿರುವ ಭಾಷೆಯಾಗಿದೆ ಅರಬಿಕ್. ನಮ್ಮ ನಾಡ ಭಾಷೆ ಕನ್ನಡ ಅರಬಿಕ್ ಭಾಷೆಗೂ ಅಭೇದ್ಯ ಸಂಬಂಧವಿದೆ. ಇದು ಜಗತ್ತಿನಾದ್ಯಂತ ಪ್ರಸರಿಸಿದ ನಾಲ್ಕನೇ ಅತಿ ದೊಡ್ಡ ಭಾಷೆ ಈ ಭಾಷೆಗೆ ಇನ್ನೊಂದು ಹೆಸರು ಳಾದ್(ض) ಈ ನಾಮದಲ್ಲಿ ಗುರುತಿಸಲು ಕಾರಣ ಈ ಅಕ್ಷರವು ಅರಬ್ಬಿಯಲ್ಲಿ ಮಾತ್ರವಿದೆ. ಅರೇಬಿಕ್ ಭಾಷೆಯ ಆರಂಬಿಕೆಯಲ್ಲಿ ಅನೇಕ ತರ್ಕಗಳಿವೆ. ಆದರೆ ಈ ಭಾಷೆಯನ್ನು ಮೊಟ್ಟಮೊದಲ ಬಾರಿಗೆ ನುಡಿದವರು ಮುಸ್ಲಿಮರ ಪೂರ್ವ ಪ್ರವಾದಿ ಇಸ್ಮಾಈಲ್ ( ಅ) ರವರು ಎಂದು ಉಲ್ಲೇಖಗಳಿವೆ. ತದನಂತರ ಅನೇಕ ಕವಿಗಳ, ಭಾಷಣಗಾರರ, ಲೇಖಕರ, ಕಾದಂಬರಿ ಕಾರರ, ಕೊಂಡಿಗಳೇ ಇದೆ. ಅರೇಬಿಕ್ ಸಾಹಿತ್ಯವನ್ನು ಉಲ್ಲೇಖಗಳ ಮೂಲಕ ಅಂಗೀಕರಿಸಿ ಎರಡು ವರ್ಗೀಕರಣ ಮಾಡಲಾಗಿದೆ. ಅಂಧಕಾರದ ಅರಬಿಕ್ (ಪ್ರವಾದಿ(ಸ) ರವರ ಬರುವಿಕೆಯ ಮೊದಲು), ಆಧುನಿಕ ಅರಬಿಕ್ (ಪ್ರವಾದಿ ( ಸ) ರವರ ಬರುವಿಕೆಯ ನಂತರ). ಆಧುನಿಕ ಅರಬಿಕ್ ಸಾಹಿತ್ಯವು ಅನೇಕ ಮಜಲುಗಳಲ್ಲಾಗಿ ವಿಂಗಡಿಸಲ್ಪಡುತ್ತದೆ. ಅರಬಿಕ್ ಭಾಷೆಗೆ ಹೊಸ ಮೆರುಗನು ನೀಡಿದವರು ಅಬುಲ್ ಅಸ್ವದುಲ್ ದುವಲಿ ಎಂಬುವರು. ಅರೇಬಿಕ್ ಬ್ಯಾಕರಣವನ್ನು ಮೊಟ್ಟಮೊದಲ ಬಾರಿಗೆ ಕ್ರೋಡಿಕೃತವಾಗಿ ಒಂದು ನಿಯಮದ ರೂಪಕ್ಕೆ ತಂದವರು ಇವರು. ಅದಲ್ಲದೆ ಅರಬಿ ಭಾಷೆಯ ಲಿಪಿಗಳ ಕೈಬರಹವನ್ನು ಅನುಮೋದಿಸಿ ಸ್ವಚ್ಛ ಸುಂದರ ರೀತಿಯಲ್ಲಿ ಸಜ್ಜುಗೊಳಿಸಿದ ಕೀರ್ತಿಪತಾಕೆ ಇವರ ಹಸ್ತ ಸೇರುತ್ತದೆ. ಈ ಭಾಷೆಯಲ್ಲಿರುವ ಒಟ್ಟು ಮೊತ್ತ ಅಕ್ಷರಗಳು 28. ಆ ಅಕ್ಷರಗಳ ಜೋಡಣೆಯು ಬಹಳ ಅದ್ಭುತ ರೀತಿಯಲ್ಲಿ ಆಗಿದೆ. ಅರೇಬಿಕ್ ಭಾಷಾ ಸಾಹಿತ್ಯದಲ್ಲಿ ಅನೇಕ ರೀತಿಯ ಅಧ್ಯಯನಗಳಿವೆ ಅರಬಿಕ್ ವ್ಯಾಕರಣ ,ಶೃಂಗಾರ ,ಪದ್ಯರಚನ ವಿಧಾನ, ಮುಂತಾದವುಗಳು. ಶೃಂಗಾರ ಅರೇಬಿಕ್ ಸಾಹಿತ್ಯವನ್ನು ಇನ್ನೂ ಚಂದಗೊಳಿಸುತ್ತದೆ. ಅರಬಿಕ್ ಭಾಷೆಯಲ್ಲಿ ಅತಿ ಹೆಚ್ಚು ಹೋಲಿಕೆಗಳಿವೆ. ಆ ಹೋಲಿಕೆಗಳಿಗೆ ಅನೇಕ ಮಜಲುಗಳಿವೆ .ಅತ್ಯುತ್ತಮ ಉತ್ತಮ ಸಾಧಾರಣ ಎಂಬಿತ್ಯಾದಿ ಹಂತಗಳಿವೆ. ಇದು ಸಾಹಿತ್ಯ ಭಾಗದ ಕಡ್ಡಾಯ ಭಾಗ. ವ್ಯಾಕರಣ ಸಾಹಿತ್ಯ ಭಾಗದಲ್ಲಿ ನಿರತವಾಗಿದ್ದರೂ ರೂಢಿಯಲ್ಲಿ ಅದು ಅತ್ಯವಶ್ಯಕ. ಪದ್ಯ ರಚನಾ ಶಾಸ್ತ್ರ ಇದು ಕನ್ನಡ ಭಾಷೆಯಲ್ಲಿ ಛಂದಸ್ಸಿನಂತೆ ವರ್ತಿಸುತ್ತದೆ. ಅರಬಿ ಭಾಷೆಯ ಕವಿತೆಗಳಿಗೆ ತನ್ನದೇ ಆದ ಸೌಂದರ್ಯ ನೀಡುವುದು ಈ ಸಾಹಿತ್ಯ ಶಾಖೆ. ಈ ಅಧ್ಯಯನಕ್ಕೆ ಅರೂಳ್- ಖವಾಫಿ(عروض قوافي) ಎನ್ನುವರು. ಇದನ್ನು ಮೊಟ್ಟ ಮೊದಲು ಆರಂಭಿಸಿದವರು ಖಲೀಲ್ ಬಿನ್ ಅಹಮದುಲ್ ಫರಾಹಿಧಿ ಅಲ್ ಅಝ್ದಿ. ವ್ಯಾಕರಣಶಾಸ್ತ್ರಗಳಲ್ಲಿ ಆರೋಗ್ಯ ವ್ಯಾಕರಣ ಶಾಸ್ತ್ರವು ವಿಭಿನ್ನವಾಗಿದೆ. ಏಕೆಂದರೆ ಇದರ ಆಳವಾದ ಅಧ್ಯಯನವಾಗಿದೆ. ಈ ಅಧ್ಯಯನಕ್ಕೆ ನಹ್ವ್ (نحو) ಎಂದು ಕರೆಯುತ್ತಾರೆ.
ಭಾರತ ಮತ್ತು ಅರೇಬಿಕ್ ಭಾಷೆಗೆ ಬಹಳ ಸಂಬಂಧವಿದೆ. ಭಾರತದ ಇನ್ನೊಂದು ಹೆಸರಾದ ಹಿಂದ್ ಎಂಬುದು ಅರಬಿ ಪದವಾಗಿದೆ. ಅದಲ್ಲದೆ ಇಸ್ಲಾಂ ಇಲ್ಲಿಗೆ ಆಗಮಿಸುವುದರೊಂದಿಗೆ ಇಲ್ಲಿ ಅರಬಿಕ್ ಭಾಷೆಗೆ ಸ್ಥಾನ ಗಿಟ್ಟಿಸಿಕೊಂಡಿದೆ. ಆದುದರಿಂದಲೇ ಭಾರತದ ಅನೇಕ ಪ್ರಾದೇಶಿಕ ಭಾಷೆಗಳಿಗೆ ಅರಬ್ಬಿ ಪದಗಳಿಂದ ಎರವಲು ಪಡೆದುಕೊಳ್ಳಲಾಗಿದೆ. ಭಾರತದಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಅರಬಿಕ್ ಸಾಹಿತ್ಯದಲ್ಲಿ ಮಿಂಚಿದ್ದಾರೆ. ಅವರಲ್ಲಿ ಒಬ್ಬರಾಗಿದ್ದಾರೆ ಮರ್ತಳಾ ಝಬೀದಿ ಅಲ್ ಬಲಗ್ರಾಮಿ. ಇವರು ಮೂಲತಃ ಉತ್ತರಪ್ರದೇಶದವರು. ಇವರು ತಾಜುಲ್ ಅರುಸ್ ಎಂಬ ಅರಬಿಕ್ ಭಾಷೆಯ ಅತಿ ದೊಡ್ಡ ನಿಘಂಟು ರಚಿಸಿದ್ದಾರೆ. ಗುಲಾಂ ಅಲಿ ಆಜಾದ್ ಬಲಗ್ರಾಮಿ, ಇವರು ಅನೇಕ ಕವಿತೆಗಳನ್ನು ಅರಬಿಕ್ ಭಾಷೆಯಲ್ಲಿ ರಚಿಸಿದ್ದಾರೆ. ಅರಬ್ಬಿದ ಸಾಹಿತ್ಯದಲ್ಲಿ ಉತ್ತಮ ಕವಿ ಆಗಿದ್ದ ಹಸ್ಸಾನ್ ಬಿನ್ ಸಾಬಿತ್( ರ) ಹೆಸರಿನೊಂದಿಗೆ ಭಾರತದ ಹಸ್ಸಾನ್ ಎಂದು ಕರೆದಿದ್ದಾರೆ. ಅದೇ ರೀತಿ ಇಮಾಮ್ ಅಹಮದ್ ರಝಾ ಖಾನ್ ಬರೆಲ್ವಿ ಇವರು ಉತ್ತರಪ್ರದೇಶದವರು. ಇವರು ಅನೇಕ ಗ್ರಂಥಗಳನ್ನು ಅರಬಿಕ್ ಭಾಷೆಯಲ್ಲಿ ರಚಿಸಿದ್ದಾರೆ. ಇನ್ನೊಂದು ಮಹಾ ಅರಬ್ ಬಿಗ್ ಸಾಹಿತಿ ಫಳ್ಲು ಹಕ್ ಖೈರಾಬಾದಿ. ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಹೌದು. ನವ ಸಾಹಿತ್ಯ ಲೋಕಕ್ಕೆ ಶೋಭೆಯಾಗಿರುವ ಭಾರತೀಯ ಅದು ಅಬುಲ್ ಹಸನ್ ನದ್ವಿ. ಇವರು ಅನೇಕ ಕಥೆ ,ಕಾದಂಬರಿ ಹಾಗೂ ಇನ್ನಿತರ ಅನೇಕ ಸಾಹಿತ್ಯ ಪರ್ವಗಳಲ್ಲಿ ತುಂಬಿಕೊಂಡಿದ್ದಾರೆ. ಭಾರತದಲ್ಲಿ ಅನೇಕ ಆರಬಿ ಕಲಿಸಲ್ಪಡುವ ವಿಶ್ವವಿದ್ಯಾನಿಲಯಗಳು ಇವೆ. ಅವುಗಳೆಂದರೆ ಜಾಮಿಆ ನೂರಿಯ ಅರಬಿಯಾ, ದಾರುಲ್ ಉಲೂಂ ದಿಯೋಬಂದ್,,ಬಾಖಿಯಾತ್ ಸ್ವಾಲಿಹಾತ್ , ದಾರುಲ್ ಹುದಾ ,ರಹ್ಮಾನಿಯಾ,ಮರ್ಕಝ್ ಇತ್ಯಾದಿಗಳು… ಹಾಗೂ ಪ್ರಸ್ತುತ ಭಾರತದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಅರಬಿಕ್ ಪೀಠ ಸ್ಥಾಪಿತಗೊಂಡಿದೆ.
ಕರ್ನಾಟಕಕ್ಕೆ ಅರಬಿಕ್ ಭಾಷೆಯ ಉತ್ತಮ ಸಂಬಂಧವಿದೆ ಏಕೆಂದರೆ ಕನ್ನಡದ ಅನೇಕ ಪದಗಳು ಎರವಲು ಪಡೆದುಕೊಂಡಿದ್ದು ಅರಬಿಕ್ ಭಾಷೆಯಿಂದಲೆ. ಬಿಜಾಪುರದ ಸುಲ್ತಾನರು ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಅರಬಿಕ್ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ಕರ್ನಾಟಕದಲ್ಲಿ ದೊರಕಿತ್ತು. ಕರ್ನಾಟಕದ ಜಮಾಲುದ್ದೀನ್ ಅಲ್ ಬಗದಾದಿ ಗುಲ್ಬರ್ಗ ಎಂಬ ಪಂಡಿತರೊಬ್ಬರು ಅರಬಿಕ್ ಭಾಷೆಯಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ಅರಬಿಕ್ ವ್ಯಾಕರಣದ ಎರಡು ಗ್ರಂಥಗಳನ್ನು ಕರ್ನಾಟಕದಲ್ಲಿ ರಚಿಸಲಾಗಿದೆ ಎಂದು ಉಲ್ಲೇಖವಿದೆ. ಅದೇ ರೀತಿ ದಕ್ಷಿಣ ಕರ್ನಾಟಕದಲ್ಲಿ ಅನೇಕ ಪಂಡಿತರು ಆರೋಗ್ಯಕ್ ಭಾಷೆಯಲ್ಲಿ ನಿಪುಣರಿದ್ದಾರೆ. ಇತ್ತೀಚಿಗೆ ನಮ್ಮನ್ನ ಗಲಿದ ಮಿತ್ತಬೈಲ್ ಜಬ್ಬಾರ್ ಮುಸ್ಲಿಯರ್ ಮಹಾನರು ಅರಬಿಕ್ ಕವಿತೆ ರಚನೆ ಲೇಖನ ಬರೆಯುವಿಕೆಯಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರು. ಕರ್ನಾಟಕದ ಅನೇಕ ಸ್ಥಳಗಳಲ್ಲಿ ಇಂದು ಅರಬಿ ಕಲಿಸಿ ಕೊಡಲಾಗುತ್ತಿದೆ ಅವುಗಳಲ್ಲಿ ಶಂಶಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು , ಕರ್ನಾಟಕ ಇಸ್ಲಾಮಿಕ್ ಸೆಂಟರ್ ,ದಾರುಲ್ ಇರ್ಷಾದ್ ಮಾಣಿ, ದಾರುಲ್ ಉಲೂಂ ಉಸ್ಮಾನಿಯಾ ಶಿವಮೊಗ್ಗ,ದಾರುಲ್ ಸುಧಾ ಹಾಂಗಲ್ ,ದಾರುನ್ನೂರ್,ನೂರುಲ್ ಹುದಾ ,ಅಲ್ ಮದೀನ , ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ಕಾಲೇಜು ಸುಂಟಿಕೊಪ್ಪ, ಇತ್ಯಾದಿಗಳು… ಅರೇಬಿಕ್ ಭಾಷೆ ಜಗತ್ತಿನಾದ್ಯಂತ ತನ್ನದೇ ಆದ ಚಾಪನ್ನು ಮೂಡಿಸಿದೆ ಇಂದು ವಿಶ್ವ ಅರಬಿಕ್ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ. ಭಾಷೆಗಳ ಕಲಿಕೆಯಿಂದ ನಮ್ಮ ಶಿಕ್ಷಣದ ಅಭಿವೃದ್ಧಿ ನಡೆಯುತ್ತದೆ. ಶಿಕ್ಷಣದಿಂದ ನಾವು ಸುಂದರ ಸಮಾಜ ಕಟ್ಟೋಣ. ವಿದ್ಯೆಯೇ ಬದುಕಿನ ಆಧಾರ ಎಂದು ತಿಳಿಯೋಣ.
ಮುಹಮ್ಮದ್ ನೌಷಾದ್ ಕಟ್ಟತಾರು PG ವಿದ್ಯಾರ್ಥಿ ಜಾಮಿಅಃ ನೂರಿಯಃ ಅರಬಿಯಃ, ಕೇರಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.