(ವಿಶ್ವ ಕನ್ನಡಿಗ ನ್ಯೂಸ್) : ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಆಫ್ರಿದಿ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಶಾ ಅವರನ್ನು ವರಿಸಲಿದ್ದಾರೆ. ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಶಾಹೀನ್ ಅವರ ನಿಕಾಹ್ ಸಮಾರಂಭವು ಫೆಬ್ರವರಿ 3 ರಂದು ನಡೆಯಲಿದೆ. ಎರಡೂ ಕುಟುಂಬದವರು ಮದುವೆ ತಯಾರಿ ಆರಂಭಿಸಿದ್ದಾರೆ. ಅಫ್ರಿದಿ ಮಗಳು ಅನ್ಶಾ ಅವರನ್ನು ಮದುವೆಯಾಗುವುದು ನನ್ನ ಆಸೆ ಎಂದು ಶಾಹೀನ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಶಾಹಿದ್ ಅಫ್ರಿದಿ ಅವರ ಕುಟುಂಬದವರು ತಮ್ಮ ಮಗಳ ಮದುವೆಗಾಗಿ ಶಾಹಿನ್ ಅಫ್ರಿದಿ ಕುಟುಂಬವನ್ನು ಸಂಪರ್ಕಿಸಿದ್ದರು, ತನ್ನ ಮಗಳು ವೈದ್ಯಕೀಯ ಅಧ್ಯಯನವನ್ನು ಮುಂದುವರೆಸುತ್ತಿದ್ದಾಳೆ ಎಂದು ಅಫ್ರಿದಿ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು. ಇದು(ಅಂಶಾಗೆ ಮದುವೆ) ನನ್ನ ಆಸೆಯಾಗಿತ್ತು ಮತ್ತು ಅಲ್ಹಮ್ದುಲಿಲ್ಲಾಹ್ ಅದು ಈಗ ನಿಜವಾಗುತ್ತಿದೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.