ಬೀಜಿಂಗ್ (ವಿಶ್ವ ಕನ್ನಡಿಗ ನ್ಯೂಸ್) : ಚೀನಾದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರುತ್ತಿವೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಮೃತದೇಹಗಳನ್ನು ರಾಶಿ ಹಾಕಿರುವ ದೃಶ್ಯಗಳೂ ಹೊರಬಿದ್ದಿವೆ. ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಬರುವವರ ಉದ್ದನೆಯ ಸರತಿ ಸಾಲು ಕಂಡು ಬರುತ್ತಿದೆ. ದೇಶದ ಬಹುತೇಕ ನಗರಗಳಲ್ಲಿ ಇದೇ ಪರಿಸ್ಥಿತಿ.
ಕೋವಿಡ್ ಸಾವುಗಳನ್ನು ಚೀನಾ ಮುಚ್ಚಿಡುತ್ತಿದೆ ಎಂಬ ಆರೋಪಗಳು ಸ್ವಲ್ಪ ಸಮಯದ ನಂತರ ಮತ್ತೆ ಕಾಣಿಸಿಕೊಂಡಿವೆ. 2019 ರಿಂದ ಕೇವಲ 5200 ಕೋವಿಡ್ ಸಾವುಗಳು ವರದಿಯಾಗಿವೆ ಎಂದು ಚೀನಾ ಹೇಳಿಕೊಂಡಿದೆ.
China officially announced the deaths of a total of two Covid patients across the country today.This video was made in #Henan today and shows wrapped bodies of Chinese people where relatives are pretty certain the deaths were caused by Covid.#ChineseCovidDeaths #China #COVID19 pic.twitter.com/GsSbvuYx5g — 247ChinaNews (@247ChinaNews) December 19, 2022
China officially announced the deaths of a total of two Covid patients across the country today.This video was made in #Henan today and shows wrapped bodies of Chinese people where relatives are pretty certain the deaths were caused by Covid.#ChineseCovidDeaths #China #COVID19 pic.twitter.com/GsSbvuYx5g
— 247ChinaNews (@247ChinaNews) December 19, 2022
ಉಸಿರಾಟ ಸಮಸ್ಯೆಯಿಂದಾಗುವ ಸಾವುಗಳನ್ನು ಮಾತ್ರ ಕೋವಿಡ್ ಸಾವಿನ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಸರ್ಕಾರ ಈ ಹಿಂದೆ ಸ್ಪಷ್ಟಪಡಿಸಿತ್ತು. ಈ ಮಧ್ಯೆ, “ಭಯಾನಕ ಪರಿಸ್ಥಿತಿ” ತೋರಿಸುವ ದೃಶ್ಯಗಳು ಹೊರಬಂದಿವೆ. ಅಧಿಕಾರಿಗಳು ಕೊನೆಯದಾಗಿ ಡಿಸೆಂಬರ್ 4 ರಂದು ಕೋವಿಡ್ ಸಾವುಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದರು.
ಮೃತಪಟ್ಟವರ ಪಟ್ಟಿಯನ್ನು ಬಿಡುಗಡೆ ಮಾಡಲು ಬೀಜಿಂಗ್ ಇನ್ನೂ ಸಿದ್ಧವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಔಷಧಿಗಳೂ ಸೇರಿದಂತೆ ಕೊರತೆಯ ಬಗ್ಗೆ ದೃಢೀಕರಿಸದ ವರದಿಗಳಿವೆ. ಪ್ರತಿಭಟನೆಗಳ ನಂತರ, ಸರ್ಕಾರವು ಇತ್ತೀಚೆಗೆ ದೇಶದ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿತು. ಇದರಿಂದಾಗಿ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ.
⚠️THERMONUCLEAR BAD—Hospitals completely overwhelmed in China ever since restrictions dropped. Epidemiologist estimate >60% of 🇨🇳 & 10% of Earth’s population likely infected over next 90 days. Deaths likely in the millions—plural. This is just the start—🧵pic.twitter.com/VAEvF0ALg9 — Eric Feigl-Ding (@DrEricDing) December 19, 2022
⚠️THERMONUCLEAR BAD—Hospitals completely overwhelmed in China ever since restrictions dropped. Epidemiologist estimate >60% of 🇨🇳 & 10% of Earth’s population likely infected over next 90 days. Deaths likely in the millions—plural. This is just the start—🧵pic.twitter.com/VAEvF0ALg9
— Eric Feigl-Ding (@DrEricDing) December 19, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.