(www.vknews.in) ಡಿ 22. ಮಂಗಳೂರು: ಮಂಗಳೂರಿನಲ್ಲಿ ಸತತವಾಗಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಹಾಗೂ ದೌರ್ಜನ್ಯ ನಿಲ್ಲಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅಕ್ಷಿತ್ ಸುವರ್ಣರವರ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಚುನಾವಣೆ ಹತ್ತಿರ ಬರುವ ಸಮಯದಲ್ಲಿ ಇಂತಹ ಘಟನೆಗಳನ್ನು ಹುಟ್ಟುಹಾಕಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ನಿರಂತರವಾಗಿ ನಡೆಯತೊಡಗಿದೆ ಇದಕ್ಕೆ ಆಡಳಿತಾರೂಡ ಬಿಜೆಪಿ ಸರಕಾರ ನೇರ ಹೊಣೆಯಾಗಿದೆಯೆಂದು ಆರೋಪಿಸಿದರು. ಯಾವುದೇ ಸಂಘಟನೆಗಳಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಇಂತಹ ಕೆಲಸ ನಡೆಸುವ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕುವುದರೊಂದಿಗೆ ಇಂತಹ ಕೃತ್ಯದಲ್ಲಿ ತೊಡಗುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರ ವಹಿಸಬೇಕೆಂದು ಮಾತನಾಡುತ್ತ ಹೇಳಿದರು.
ರಾಜ್ಯ ಜೆಡಿಎಸ್ ಮುಖಂಡರಾದ ಇಕ್ಬಾಲ್ ಅಹ್ಮದ್ ಮೂಲ್ಕಿಯವರು ಮಾತನಾಡುತ್ತ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಸಂಘಟನೆಗಳು ಮಾಡಿದರೆ ಇಲ್ಲಿ ಕಾನೂನು ಹಾಗೂ ಸುರಕ್ಷಾ ಕ್ರಮ ಕೈಗೊಳ್ಳಲಿಕ್ಕಿರುವ ಪೊಲೀಸ್ ಇಲಾಖೆ ಅಗತ್ಯವೆನಿದೆ ಎಂದು ಕಿಡಿಕಾರಿದರು. ಅದೇ ರೀತಿ ದೇಶದ ಹಾಗೂ ರಾಜ್ಯದ ಅತ್ಯುನ್ನತ ಪದದಲ್ಲಿರುವವರಿಗೆ ಜಿಲ್ಲಾ ಭೇಟಿ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ಸುಭದ್ರವಾದ ಸುರಕ್ಷತೆಯನ್ನು ನಿರಂತರವಾಗಿ ನೀಡುತ್ತಿದೆ, ಹಾಗಿರುವಾಗ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೋ ಒಬ್ಬನ್ನನ್ನು ಏನೋ ಮಾಡಿದನೆಂದು ಆರೋಪ ಹೊರೆಸಿ ಮಾರಾಣಾoತಿಕವಾಗಿ ಹಲ್ಲೆ ನಡೆಸುತ್ತಿರುವುದು ದೊಡ್ಡ ತಪ್ಪು. ಈ ರೀತಿಯಲ್ಲಿ ಕಾರ್ಯಾಚರಿಸುವ ಯಾವುದೇ ಸಂಘಟನೆಗಳ ಸದಸ್ಯರುಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕಠಿಣವಾದ ಕ್ರಮ ಕೈಗೊಂಡು, ಜೈಲಿಗಟ್ಟಬೇಕೆಂದು ಪೊಲೀಸ್ ಇಲಾಖೆ ಮಾಡಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹಾಗು ಜಿಲ್ಲಾ ಸಂಘಟನಾ ಉಸ್ತುವಾರಿಯಾದ ರತೀಶ್ ಕರ್ಕೆರ, ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸತ್ತಾರ್ ಬಂದರ್, ಮಂಗಳೂರು ಕ್ಷೇತ್ರಾಧ್ಯಕ್ಷರಾದ ಖಲೀಲ್, ಜಿಲ್ಲಾ ನಾಯಕರಾದ ಸುಶೀಲ್ ನೊರೊನ್ಹಾ, ದಿನಕರ್ ಉಲ್ಲಾಳ್, ರತ್ನಾಕರ್ ಸುವರ್ಣ, ನಾಸೀರ್ ಉಲ್ಲಾಳ್, ಮಹಿಳಾ ಘಟಕದ ಅಧ್ಯಕ್ಷರಾದ ರಮೀಝಾ ನಾಸೀರ್, ಎಮ್ ಎನ್ ಶಾ, ಹಕೀಂ, ಪುರುಷೋತ್ತಮ್, ನಾಸೀರ್ ಬಂದರ್, ಮಂಗಳೂರು ದಕ್ಷಿಣ ಕ್ಷೇತ್ರ ದ ಮಹಾಪ್ರದಾನ ಕಾರ್ಯದರ್ಶಿ ಸುಮಿತ್ ಸುವರ್ಣ, ಹಾಗು ಮಂಗಳೂರು ಉತ್ತರ ಕ್ಷೇತ್ರದ ಮಹಾಪ್ರದಾನ ಕಾರ್ಯದರ್ಶಿ ರಹೀಮ್ ಮಲ್ಲೂರು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಿವ ಸಾಲ್ಯಾನ್, ರಿನೀತ್ ಎನ್ ಪುಜಾರಿ, ಜಿತೇಶ್ ರೈ, ಆಶಿಶ್ ಶೆಟ್ಟಿ, ನಿಹಾಳ್, ನಿಖಿಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.