ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್) : ಆಟವಾಡುತ್ತಿದ್ದ ಮಗುವಿಗೆ ದ್ವಿಚಕ್ರ ವಾಹನ ಢಿಕ್ಕಿಯಾಗಿ ಮೃತಪಟ್ಟ ಘಟನೆ ಮಡಿಕೇರಿಯ ಮೇಕೇರಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಸ್ಮಾ ಹಾಗು ಇದ್ರಿಸ್ ಅಲಿ ದಂಪತಿ ಪುತ್ರಿ 5 ವರ್ಷದ ಅಲಿಝಾ ಮೃತಪಟ್ಟ ಮಗು.
ರಸ್ತೆ ಬದಿ ಆಟವಾಡುತ್ತಿದ್ದಾಗ ಮಗುವಿಗೆ ದ್ವಿಚಕ್ರ ವಾಹನ ಢಿಕ್ಕಿಯಾಗಿದೆ. ಅಪಘಾತದ ವೇಳೆ ದ್ವಿಚಕ್ರ ವಾಹನ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿದೆ. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.