(www.vknews.in) : ಬ್ರಿಕ್ ಸ್ಟೋನ್ ಕಂಪೆನಿ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಆಯೋಜನೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಮತ್ತು ಯಾನಪೋಯಾ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಸಹಕಾರದೊಂದಿಗೆ “ಬ್ರಿಕ್ ಬಿಡಿಎಮ್ – ಆಸರೆ – 2022-23” ಇದು ಸಮಾಜಕ್ಕೊಂದು ಕೊಡುಗೆ ಎಂಬ ಅಭಿಯಾನದಡಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಅರ್ಹ ಫಲಾನುಭವಿಗಳಿಗೆ ಉಚಿತ ವಿವಿಧ ಪರಿಕರಗಳ ವಿತರಣೆ ಜೊತೆಗೆ ಹಲವು ಸಾಮಾಜಿಕ ಕಾರ್ಯಕ್ರಮವು ಇದೇ ಬರುವ ದಿನಾಂಕ ಡಿಸೆಂಬರ್ 31 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್, ಮಂಟೆಪದವು ಇದರ ಸಭಾಂಗಣದಲ್ಲಿ ವಿಶೇಷವಾಗಿ ಆಯೋಜಿಸಲಾಗಿದೆ.
ಅಸಹಾಯಕರ ಕೈಹಿಡಿಯುವ, ನೊಂದವರ ಕಣ್ಣೀರೊರೆಸುವ, ಸಹಾಯದ ನಿರೀಕ್ಷೆಯಲ್ಲಿರುವವರಿಗೆ ಬಾಳಿಗೆ ಬೆಳಕಾಗುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಇದಾಗಿದ್ದು ಬ್ರಿಕ್ ಬಿಡಿಮ್ ಆಸರೆ 2022 – 23 ಎಂಬ ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಮೂತ್ರಪಿಂಡ ರೋಗಿಗಳಿಗೆ 6 ತಿಂಗಳುಗಳ ಕಾಲ ಉಚಿತ ಡಯಾಲಿಸಿಸ್, ಬಡ ಮಹಿಳೆಯರಿಗೆ ಕುಟುಂಬ ನಡೆಸಲು ಸಹಕಾರಿಯಾಗಿ ಹೊಲಿಗೆ ಯಂತ್ರ ವಿತರಣೆ, ಏಡ್ಸ್ ರೋಗಿಗಳ ವೃದ್ಧರ ಹಾಗು ಅನಾಥರ ಶುಶೂಷೆಯಲ್ಲಿ ತೊಡಗಿಸಿಕೊಂಡ ಸ್ವಯಂಸೇವಕರಿಗೆ ಗೌರವ ಧನ, ವೀಲ್ ಚೈರ್ ವಿತರಣೆ, ವಾಟರ್ ಬೆಡ್ ವಿತರಣೆ, ವಾಕರ್ ವಿತರಣೆ, ಶಾಲಾ ವಿಧ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ವೈದ್ಯಕೀಯ ಶಿಬಿರ, ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಶಾಲಾ ವಿಧ್ಯಾರ್ಥಿಗಳಿಗೆ ಸಮಾಜಿಕ ಕಳಕಳಿಯ ಕುರಿತು ಪ್ರಬಂಧ ಸ್ಪರ್ದೆ ಹಾಗು ರಕ್ತದಾನ ಜಾಗೃತಿ ಕುರಿತು ಚಿತ್ರಲೇಖ ಸ್ಪರ್ದೆ, ಪದವಿ ಪೂರ್ವ ವಿಧ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ, ವಿಶೇಷ ವಿಕಲಚೇತನ ಮಕ್ಕಳ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ, ಕಣ್ಣು, ಕಿವಿ, ಮೂಗು, ಗಂಟಲು,ದಂತ, ಎಲುಬು, ಹೆರಿಗೆ ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞರು ಭಾಗವಹಿಸಲಿದ್ದು ರಕ್ತದೊತ್ತಡ, ಮಧುಮೇಹ ಪರೀಕ್ಷೆಯನ್ನು ನಡೆಸಲಾಗುವುದು. ಮಹಿಳೆಯರಿಗೆ ಪ್ರತ್ಯೇಕವಾಗಿ ಮೊಬೈಲ್ ಕ್ಲಿನಿಕ್ ಬಸ್ ಮುಖಾಂತರ ಚಿಕಿತ್ಸೆ ಇದ್ದು, ತಪಾಸನೆಗೊಳಪಟ್ಟ ಅರ್ಹ ರೋಗಿಗಳಿಗೆ ಉಚಿತ ಔಷಧಿ ಹಾಗೂ ಕನ್ನಡಕ ವಿತರಣೆ ನಡೆಯಲಿದೆ.
ಸಾರ್ವಜನಿಕರು ಮತ್ತು ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕಾಗಿ ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
ಪ್ರಕಟನೆ : ಅಧ್ಯಕ್ಷರು ಮತ್ತು ಸದಸ್ಯರು ಬ್ಲಡ್ ಡೋನರ್ಸ್ ಮಂಗಳೂರು (ರಿ) ಬ್ರಿಕ್ ಸ್ಟೋನ್ ಕಂಪೆನಿ ಸೌದಿ ಅರೇಬಿಯಾ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.