ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾಗಿ, ನಂಡೆ ಪೆಂಗಳ್ ಅಭಿಯಾನದ ಸ್ಥಾಪಕಾಧ್ಯಕ್ಷರಾಗಿ ಹಲವಾರು ಬಡಕುಟುಂಬದ ಹೆಣ್ಣು ಮಕ್ಕಳ ಜೀವನಕ್ಕೆ ಆಸರೆಯಾಗಿ ಹಾಗೂ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಗುರಿತಿಸಿಕೊಂಡಿದ್ದು, ಉಲಮಾ ಪಂಡಿತರ ಪ್ರೀತಿ ಪಾತ್ರರಾದ ಶಾಂತ ಸ್ವಭಾವದ ನಗುಮುಖದ ವ್ಯಕ್ತಿತ್ವ ನೌಶಾದ್ ಹಾಜಿ ಸುರಲ್ಪಾಡಿಯವರು ಇಂದು ನಮ್ಮನ್ನಗಲಿದರು. ಇವರ ವಿಯೋಗಕ್ಕೆ KCF ಒಮಾನ್ ಸಂತಾಪ ಸೂಚಿಸಿದೆ.
ಇವರ ನಿಧನವು ಸಮಾಜಕ್ಕೆ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಠವಾಗಿದ್ದು, ಅದಲ್ಲದೆ ಇವರ ಸಮಾಜಮುಖಿ ಕಾರ್ಯಗಳು ಸಮಾಜಕ್ಕೂ ಸಮುದಾಯಕ್ಕೂ ಮಾದರಿಯಾಗಲಿ, ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ(ಆಮೀನ್). ಎಂದು KCF ಒಮಾನ್ ನಾಯಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.