ಮಂಡ್ಯ (ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಟನ್ ಗಟ್ಟಲೇ ಅನ್ನ ಮಣ್ಣಿನ ಗುಂಡಿ ಸೇರಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದ ಬೃಹತ್ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಊಟ ಕೊಟ್ಟರೆ ಕುರ್ಚಿ ಖಾಲಿ ಕಾಣುತ್ತವೆ ಎಂದು ಸಮಾವೇಶಕ್ಕೆ ಬಂದ ಜನರಿಗೆ ಸಮಯಕ್ಕೆ ಸರಿಯಾಗಿ ಊಟ ನೀಡದೆ, ಸಮಾವೇಶದ ಕೊನೆಯಲ್ಲಿ ನೀಡಿದಾಗ ಜನರು ಊಟ ಮಾಡದೇ ಹೋಗಿದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಜನ ಊಟ ಮಾಡದೆ ವೇಸ್ಟ್ ಆದ ಟನ್ ಗಟ್ಟಲೇ ಅನ್ನ, ಪಾಯಸವನ್ನು ಬಿಜೆಪಿ ಕಾರ್ಯಕರ್ತರು ವಿಧಿ ಇಲ್ಲದೆ ಜೆಸಿಬಿ ಮೂಲಕ ಗುಂಡಿ ತೋಡಿ ಸಮಾವೇಶ ಮಾಡಿದ ಜಾಗದಲ್ಲೇ ಮಣ್ಣು ಪಾಲು ಮಾಡಿದ್ದಾರೆ. 250 ಕೆಜಿಯ 15 ದಬರಿ ತರಕಾರಿ ಬಾತ್, 7 ದಬರಿ ಮೊಸರನ್ನ, 50 ಸಾವಿರ ಬಾದ್ಶಾ ವೇಸ್ಟ್ ಆಗಿದೆ. ಇದಿಷ್ಟೆ ಅಲ್ಲದೆ ದಬರಿಗಟ್ಟಲೆ ಪಾಯಸ ಉಳಿದಿದ್ದು ಅದನ್ನು ಮಣ್ಣುಪಾಲು ಮಾಡಲಾಗಿದೆ.
ಬಿಜೆಪಿ ನಾಯಕರ ನಡೆ ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅನ್ನವನ್ನು ಮಣ್ಣು ಮಾಡಿದ ಆಯೋಜಕರ ನಡೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.