(www.vknews.in) ಚುಣಾವನೆ ಪೂರ್ವದಲ್ಲೇ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳ ಬೇಡಿಕೆಗಳನ್ನು ಮನ್ನಿಸಿ ಪ್ರತಿನಿಧಿಗಳ ಬಗ್ಗೆ ಜಿಲ್ಲಾದ್ಯಂತ ಮುಖತಃ ಬೇಟಿಯಾಗಿ ಅವರ ಬಗ್ಗೆ ಅದ್ಯಯನ ನಡೆಸಿ ವಿಧಾನ ಪರಿಷತ್ತಿಗೆ ತಾನು ಆಯ್ಕೆಯಾದ ಕೂಡಲೇ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದ ಇನ್ನಿತರ ಶಾಸಕ ಸದಸ್ಯರನ್ನು ಒಟ್ಟುಗೂಡಿಸಿ ವಿಧಾನ ಪರಿಷತ್ ಕಲಾಪದಲ್ಲಿ ಬೇಡಿಕೆ ಹಾಗೂ ಕುಂದುಕೊರತೆಗಳ ಬಗ್ಗೆ ಪ್ರಸ್ತಾಪಿಸಿ ವಿಚಾರ ಮಂಡಿಸಿ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಗ್ರಾಮ ಪಂಚಾಯತ್ ಅದ್ಯಕ್ಷರ,ಸದಸ್ಯರ ಗೌರವ ಧನವನ್ನು ಹೆಚ್ಚಿಸಿ ಸದನದಲ್ಲೇ ಘೋಷಿಸಲು ಯಶಸ್ವಿಯಾದ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದ ಮುಷ್ಕರದ ಬೇಡಿಕೆಗಳ ಬಗ್ಗೆ ದ್ವನಿಯೆತ್ತಿ ಈಡೇರಿಸುವಂತೆ ವಿಧಾನ ಪರಿಷತ್ತಿನಲ್ಲಿ ಭರವಸೆ ಪಡೆದುಕೊಂಡ ಮಂಜುನಾಥ ಭಂಡಾರಿಯವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಜಿಲ್ಲಾದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ನೇತೃತ್ವದಲ್ಲಿ ಮಂಗಳೂರಿನನಲ್ಲಿ ಹೂಗೂಚ್ಚ ನೀಡಿ ಶಾಲುಹೊದಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಅಸಂಘಟಿತ ಕಾರ್ಮಿಕ ಜಿಲ್ಲಾದ್ಯಕ್ಷರಾದ ಅಬ್ಬಾಸ್ ಅಲಿ,ಎ.ಪಿ.ಎಂಸಿ ಮಾಜಿ ಅದ್ಯಕ್ಷರಾದ ಪದ್ಮನಾಭ ರೈ,ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅದ್ಯಕ್ಷರಾದ ರಜಾಕ್ ಕುಕ್ಕಾಜೆ,ಪಾಣೆಮಂಗಳೂರು ಪಂಚಾಯತ್ ರಾಜ್ ಉಸ್ತುವಾರಿ ಸಂದೇಶ್ ಶೆಟ್ಟಿ ಬಿಕ್ನಾಜೆ ಹಾಗೂ ಜಿಲ್ಲಾ ಪ್ರಮುಖರು ಹಾಜರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.