(www.vknews.in) ಲತೀಫೀಸ್ ಅಸೋಸಿಯೇಷನ್ ಇದರ ವತಿಯಿಂದ
ಬೆಳ್ತಂಗಡಿ, ಪುತ್ತೂರು, ಕಡಬ,ಚಿಕ್ಕಮಗಳೂರು ತಾಲೂಕುಗಳ ಲತೀಫಿ ಸಂಗಮ ಹಾಗೂ ಅಗಲಿದ ನಾಯಕರ ಅನುಸ್ಮರಣಾ ಮಜ್ಲಿಸ್ ಕಾರ್ಯಕ್ರಮವು ದಿನಾಂಕ 07-01-2023 ಶನಿವಾರ ಬೆಳಿಗ್ಗೆ 9:30 ಕ್ಕೆ ನೂರುಲ್ ಉಲಮಾ ಫೌಂಡೇಶನ್ ಸಫಾ ನಗರ ಮಠ ಉಪ್ಪಿನಂಗಡಿ ಯಲ್ಲಿ ಜರುಗಲಿದೆ . ಕಾರ್ಯಕ್ರಮದ ನೇತೃತ್ವವನ್ನು ಶೈಖುಲ್ ಹದೀಸ್ ಶೈಖುನಾ ಕೆ ಸಿ ಉಸ್ತಾದ್ (ಪ್ರಿನ್ಸಿಪಾಲ್ ದಾರುಲ್ ಉಲೂಂ ಲತೀಫಿಯ್ಯ ಹಝ್ರತ್ ಮಕಾನ್ ವೆಲ್ಲೂರು)ವಹಿಸಲಿದ್ದಾರೆ. ಲತೀಫೀಸ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ದಾವೂದ್ ಲತೀಫಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಂ ಇಯ್ಯತ್ತುಲ್ ಕಾರ್ಯದರ್ಶಿ ಬಹು ಯು ಕೆ ಮುಹಮ್ಮದ್ ಸಅದಿ ವಳವೂರು ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಲತೀಫೀಸ್ ಬೆಳ್ತಂಗಡಿ ತಾಲೂಕು ಸಮಿತಿ ಪ್ರ.ಕಾರ್ಯದರ್ಶಿ ಪಿ ಎಚ್ ಝಕರಿಯ್ಯ ಲತೀಫಿ ಸ್ವಾಗತ ಬಾಷಣ ನೆರವೇರಿಸಿ, ಲತೀಫೀಸ್ ನ್ಯಾಷನಲ್ ಸಮಿತಿ ಕಾರ್ಯದರ್ಶಿ ಅಬ್ದುಲ್ ಗಫೂರು ಲತೀಫಿ ಕೇರಳ ಹಾಗೂ ಲತೀಫೀಸ್ ರಾಜ್ಯಾಧ್ಯಕ್ಷ ಜಮಾಲುದ್ದೀನ್ ಲತೀಫಿ ಪ್ರಾಸ್ತಾವಿಕ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಶೈಖುನಾ ಉಸ್ತಾದರ ಬುಖಾರಿ ಹದೀಸ್ ತರಗತಿ ನಡೆಯಲಿದೆ. ತದನಂತರ ರಾಜ್ಯ ಸಮಿತಿ ಹಾಗೂ ಬೆಳ್ತಂಗಡಿ ತಾಲೂಕು ಸಮಿತಿಯ ಜನರಲ್ ಬೋಡಿ ಮಹಾಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯಾದಂತವಿರುವ ಎಲ್ಲಾ ಲತೀಫಿಗಳು ಭಾಗವಹಿಸುವಂತೆ ಕೋರಲಾಗಿದೆ.
ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಲತೀಫೀಸ್ ಅಸೋಸಿಯೇಷನ್ ಬೆಳ್ತಂಗಡಿ ತಾಲೂಕು ಸಮಿತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.