(www.vknews.in)ಎಸ್ಡಿಎಂಸಿ ಸಮನ್ವಯ ವೇದಿಕೆ ಹಾಗೂ ಮಹಾ ಪೋಷಕರಾದ ಡಾ.ನಿರಂಜನಾರಾಧ್ಯ.ವಿ.ಪಿ. ರವರ ಸತತ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಹಲವು ವರ್ಷದ ಬೇಡಿಕೆಯನ್ನು ಸರಕಾರವು ಅಂಗೀಕರಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಅಡುಗೆಯವರ ಸಂಬಳ ವನ್ನು ಎಸ್ಡಿಎಂಸಿ ಖಾತೆಯಿಂದ ಕೊಡುವ ಬಗ್ಗೆ ಆದೇಶವನ್ನು ಹೊರಡಿಸಲಾಗಿದೆ. ಅಕ್ಷರ ದಾಸೋಹ ಬ್ಯಾಂಕ್ ಖಾತೆಯನ್ನು ಮುಖ್ಯಅಡುಗೆಯವರು ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಯಲ್ಲಿ ನಿರ್ವಹಿಸುತ್ತಿದ್ದು, ಇನ್ನು ಮುಂದೆ SDMC ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಯಲ್ಲಿ ನಿರ್ವಹಿಸುವ ಬಗ್ಗೆ ಹೊರಡಿಸಿದ ಆದೇಶವನ್ನು ಎಸ್ಡಿಎಂಸಿ ಸಮನ್ವಯ ವೇದಿಕೆಯು ಸ್ವಾಗತಿಸುತ್ತದೆ.
ಮೊಯಿದಿನ್ ಕುಟ್ಟಿ, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.