ಹೈದರಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಕ್ಯಾನ್ಸರ್ ನಿಂದ ಬಳಲುತ್ತಿರುವ ಆರು ವರ್ಷದ ಬಾಲಕನೊಬ್ಬ ತನ್ನ ಬಳಿ ಮಾಡಿದ ಹೃದಯಸ್ಪರ್ಶಿ ಮನವಿಯೊಂದರ ಕಥೆಯನ್ನು ವೈದ್ಯರೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹೈದರಾಬಾದ್ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಸುಧೀರ್ ಕುಮಾರ್ ಈ ಅನುಭವ ಹಂಚಿಕೊಂಡಿದ್ದಾರೆ. ಆರು ವರ್ಷದ ಮಗು ತಾನು ಕ್ಯಾನ್ಸರ್ನಿಂದ ಬಳಲುತ್ತಿದ್ದೇನೆ ಎಂದು ತನ್ನ ಪೋಷಕರಿಗೆ ಹೇಳಬೇಡಿ ಎಂದು ವಿನಂತಿಸಿದ್ದಾನೆ ಎಂದು ವೈದ್ಯರು ಹೇಳುತ್ತಾರೆ.
ವೈದ್ಯರ ಟ್ವೀಟ್ ಈ ರೀತಿಯಾಗಿದೆ.. ಒಪಿಯಲ್ಲೂ ಬ್ಯುಸಿ ದಿನವಾಗಿತ್ತು. ಆಗ ಯುವ ದಂಪತಿಗಳು ನನ್ನ ಕೋಣೆಗೆ ಪ್ರವೇಶಿಸಿದರು. ಅವರು ನನ್ನ ಬಳಿ ಅವರ ಮಗ ಮನುವಿಗೆ ಕ್ಯಾನ್ಸರ್ ಇದೆ, ಅವನು ಹೊರಗಿದ್ದಾನೆ, ನಾವು ಇದನ್ನು ಅವನಿಗೆ ತಿಳಿಸಿಲ್ಲ, ಈ ಬಗ್ಗೆ ವೈದ್ಯರೂ ಅವನ ಬಳಿ ಹೇಳಬೇಡಿ ಎಂದು ಮನವಿ ಮಾಡಿದರು.
ನಾನು ಹೆತ್ತವರ ಕೋರಿಕೆಯನ್ನು ಸ್ವೀಕರಿಸಿ, ಅವರ ಮಗ ಮನುವನ್ನು ನೋಡಿದೆ. ವೀಲ್ ಚೇರ್ ನಲ್ಲಿದ್ದ ಮನುವಿನ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನಂತರ, ಮನುವಿಗೆ ಮೆದುಳಿನ ಎಡಭಾಗದಲ್ಲಿ ಗ್ಲಿಯೊಬ್ಲಾಸ್ಟೊಮಾ ಮಲ್ಟಿಫಾರ್ಮ್ ಗ್ರೇಡ್ 4 ಇರುವುದು ಪತ್ತೆಯಾಯಿತು. ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ, ಅವನ ಬಲಗೈ ಮತ್ತು ಕಾಲು ಪಾರ್ಶ್ವವಾಯುವಿಗೆ ಒಳಗಾಯಿತು. ನಂತರ ಮಗುವಿಗೆ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ ಮಾಡಲಾಯಿತು. ಮನುವಿನ ಚಿಕಿತ್ಸೆ ಕುರಿತು ಪೋಷಕರೊಂದಿಗೆ ಚರ್ಚಿಸಿ ಅವರ ಅನುಮಾನಗಳಿಗೆ ಉತ್ತರಿಸಿದೆನು.
ಅವರು ಹೊರಡಲು ಮುಂದಾದಾಗ, ಮನು ವೈದ್ಯರ ಬಳಿ ನನಗೆ ಮಾತನಾಡಬೇಕು ಎಂದು ಹೇಳಿದನು. ಅವನ ಹೆತ್ತವರು ಕೋಣೆಯಿಂದ ಹೊರಹೋದ ನಂತರ, ಬಾಲಕ ನನ್ನ ಹತ್ತಿರ ಬಂದನು. ಅವನು ನನ್ನಲ್ಲಿ ಡಾಕ್ಟರ್ ನಾನು ನನ್ನ ಐಪ್ಯಾಡ್ನಲ್ಲಿ ಈ ರೋಗದ ಬಗ್ಗೆ ಎಲ್ಲವನ್ನೂ ಓದಿದ್ದೇನೆ ಮತ್ತು ನಾನು ಇನ್ನೂ 6 ತಿಂಗಳು ಮಾತ್ರ ಬದುಕಲು ಸಾಧ್ಯ ಇದೆ ಎಂದು ನನಗೆ ತಿಳಿದಿದೆ, ಆದರೆ ನಾನು ಇದನ್ನು ನನ್ನ ಹೆತ್ತವರೊಂದಿಗೆ ಹಂಚಿಕೊಂಡಿಲ್ಲ. ಅವರು ಅದನ್ನು ಸಹಿಸಲಾರರು, ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ದಯವಿಟ್ಟು ನೀವು ಕೂಡಾ ಇದನ್ನು ಅವರೊಂದಿಗೆ ಹಂಚಿಕೊಳ್ಳಬೇಡಿ ಎಂದು ಹೃದಯಸ್ಪರ್ಶಿ ಮನವಿಯೊಂದನ್ನು ಮಾಡಿದನು.
ಟ್ವಿಟರ್ನಲ್ಲಿ ವೈದ್ಯರು ಹಂಚಿಕೊಂಡಿರುವ ಟಿಪ್ಪಣಿಯಲ್ಲಿ, ಬಾಲಕನ ಮಾತುಗಳನ್ನು ಕೇಳಿ ಆಘಾತವಾಯಿತು ಮತ್ತು ಸ್ವಲ್ಪ ಸಮಯದವರೆಗೆ ಮಾತನಾಡಲು ಸಹ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ನಾನುಬಾಲಕನನ್ನು ಹಿಡಿದು ನೀನು ವಿನಂತಿಸಿದಂತೆಯೇ, ಈ ಬಗ್ಗೆ ಪೋಷಕರಿಗೆ ತಿಳಿಸುವುದಿಲ್ಲ ಎಂದು ಭರವಸೆ ನೀಡಿದೆನು. ಆದರೆ ಮನುವಿನ ತಂದೆ-ತಾಯಿಗೆ ಮನು ಹೇಳಿದ್ದನ್ನು ನಾನು ಹಂಚಿಕೊಂಡಿದ್ದಾನೆ. ‘ಎಷ್ಟೇ ಸಮಯ ಉಳಿದಿದ್ದರೂ ಕುಟುಂಬದವರು ಒಟ್ಟಾಗಿ ಆನಂದಿಸುವುದು ಅನಿವಾರ್ಯವಾಗಿತ್ತು. ಮೇಲಾಗಿ ಮನುವಿಗೆ ತನ್ನ ಅನಾರೋಗ್ಯದ ಅರಿವಿತ್ತು. ಅದಕ್ಕೇ ನಾನು ಮನುವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಮಗನ ಕಾಯಿಲೆಯ ಬಗ್ಗೆ ತಿಳಿದ ಹೆತ್ತವರ ಕಣ್ಣುಗಳು ತುಂಬಿ ಬಂದವು. ಅವರು ಧನ್ಯವಾದ ಹೇಳಿ ಹೊರಟರು.
ಒಂಬತ್ತು ತಿಂಗಳ ನಂತರ, ಮನುವಿನ ಪೋಷಕರು ನನ್ನನ್ನು ನೋಡಲು ಬಂದರು. ನನ್ನನ್ನು ನೋಡಿದ ಅವರು, ನಾವು ಮನುವಿನೊಂದಿಗೆ ತುಂಬಾ ಸಂತೋಷದ ಸಮಯವನ್ನು ಕಳೆದಿದ್ದೇವೆ. ಮನು ಡಿಸ್ನಿಲ್ಯಾಂಡ್ಗೆ ಭೇಟಿ ನೀಡಲು ಬಯಸಿದ್ದನು. ನಾವು ಕೆಲಸದಿಂದ ವಿರಾಮ ತೆಗೆದುಕೊಂಡು ಅವನಿಗೆ ಎಲ್ಲವನ್ನೂ ತೋರಿಸಿದೆವು. ಒಂದು ತಿಂಗಳ ಹಿಂದೆ ನಾವು ಅವನನ್ನು ಕಳೆದುಕೊಂಡೆವು. ಆ ಅದ್ಭುತವಾದ 8 ತಿಂಗಳುಗಳನ್ನು ನಮಗೆ ನೀಡಿದ್ದಕ್ಕಾಗಿ ಧನ್ಯವಾದ ಹೇಳಲು ಇಂದಿನ ಭೇಟಿಯಾಗಿದೆ ಎಂದು ಅವರು ಹೇಳಿದರು. ಎಂದು ವೈದ್ಯರು ಹಂಚಿಕೊಂಡ ಟಿಪ್ಪಣಿಯಲ್ಲಿ ಹೇಳಿದ್ದಾರೆ.
6-yr old to me: "Doctor, I have grade 4 cancer and will live only for 6 more months, don't tell my parents about this"1. It was another busy OPD, when a young couple walked in. They had a request "Manu is waiting outside. He has cancer, but we haven't disclosed that to him+ — Dr Sudhir Kumar MD DM (@hyderabaddoctor) January 4, 2023
6-yr old to me: "Doctor, I have grade 4 cancer and will live only for 6 more months, don't tell my parents about this"1. It was another busy OPD, when a young couple walked in. They had a request "Manu is waiting outside. He has cancer, but we haven't disclosed that to him+
— Dr Sudhir Kumar MD DM (@hyderabaddoctor) January 4, 2023
4. I discussed the medical treatment with parents and answered a few queries. They were about to leave, when Manu requested his parents to allow him to talk to me in private. Parents accepted his request. #Cancer #seizure #Children — Dr Sudhir Kumar MD DM (@hyderabaddoctor) January 4, 2023
4. I discussed the medical treatment with parents and answered a few queries. They were about to leave, when Manu requested his parents to allow him to talk to me in private. Parents accepted his request. #Cancer #seizure #Children
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.