ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಉಳ್ಳಾಲ ಸಮೀಪ ಬೈಕಿನಲ್ಲಿ ಗೋಣಿಚೀಲದಲ್ಲಿ ಸುಮಾರು 40 ಸಾವಿರ ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಮಂಜೇಶ್ವರ ಸುಂಕದಕಟ್ಟೆಯ ಮೊಹಮ್ಮದ್ ರಾಝಿಕ್ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಅಸ್ಗರ್ ತಲೆಮರೆಸಿಕೊಂಡಿದ್ದಾನೆ.
ಈರ್ವರೂ ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ಯಮಹಾ R15 ಬೈಕಿನಲ್ಲಿ ಗೋಣಿಚೀಲದಲ್ಲಿ 4 ಕೆ.ಜಿ ತೂಕದ ರೂ.40,000 ಮೌಲ್ಯದ ಗಾಂಜಾ ಮಾರಾಟ ಮಾಡಲು ಬರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಬೈಕ್ ಅಡ್ಡಗಟ್ಟುವ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತನಿಂದ ಗಾಂಜಾ ಹಾಗೂ ರೂ.1 ಲಕ್ಷ ಸೇರಿದಂತೆ ಒಟ್ಟು 1,40,000 ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.