ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಸೌದಿ ಅರೇಬಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಕೇರಳದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಮಲಪ್ಪುರಂನ ಮೇಲತ್ತೂರಿನ ಎಡಪ್ಪಟ್ಟ ನಿವಾಸಿ ಮುತ್ತುಪಾರ ಯೂಸುಫ್ (43) ಎಂದು ಗುರುತಿಸಲಾಗಿದೆ. ರಿಯಾದ್ ನಗರದ ಪ್ರವೇಶದ್ವಾರದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಮಿನಿ ಟ್ರಕ್ ಮತ್ತು ಟ್ರೈಲರ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ರಿಯದಿನ ಕೆನ್ಸ್ ಎಂಬ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇವರು, ಮಿನಿ ಟ್ರಕ್ ನಲ್ಲಿ ದಮ್ಮಾಮ್ ನಲ್ಲಿ ಸರಕುಗಳನ್ನು ವಿತರಿಸಿದ ನಂತರ ರೂಮಿಗೆ ಹಿಂದಿರುಗುತ್ತಿದ್ದರು. ಯೂಸುಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದ ಬಗ್ಗೆ ಕಂಪನಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಮೃತರು ತಂದೆ ಬೀರನ್, ತಾಯಿ ಮರಿಯಾ, ಪತ್ನಿ ರಜಿನಾ, ಮಕ್ಕಳು ಸನಾ ನಜರೀನ್ (14), ಶಹಲ್ ಶಾನ್ (10) ಮತ್ತು ಫಾತಿಮಾ ಶಾಸ್ಸಾ (ಎರಡೂವರೆ ವರ್ಷ) ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ತಾಯ್ನಾಡಿಗೆ ಕೊಂಡೊಯ್ಯಲಾಗುವುದು ಎಂದು ಸಂಭಂದಿಕರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.