ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕೆಂಜಾರಿನ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಚಿಕ್ಕಮಗಳೂರು ಮೂಲದ ಪ್ರಸ್ತುತ ಬಜ್ಪೆಯಲ್ಲಿ ವಾಸಿಸುತ್ತಿರುವ ಶಂಸೀರ್ ಹುಸೇನ್ ಎಂಬಾತ ಅದೇ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡುವುದಾಗಿ ಕುಂಜತ್ತ ಬೈಲು ದೇವಿ ನಗರ ನಿವಾಸಿ ಮಹಮ್ಮದ್ ರಫೀಕ್ ಎಂಬಾತನಿಂದ ತೊಂಭತ್ತು ಸಾವಿರ ನಗದು ಹಾಗೂ ವಿವೋ ವೈ 21 ಮಾಡೆಲ್ ಮೊಬೈಲ್ ಅನ್ನು ಪಡೆದಿದ್ದು ಕೆಲಸ ಕೊಡಿಸದೆ ವಂಚಿಸಿರುವುದಾಗಿ ಬಜ್ಪೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಪ್ರಸ್ತುತ ಕರೆಗಳನ್ನು ಸ್ವೀಕರಿಸದೆ ತಪ್ಪಿಸುತ್ತಿದ್ದು, ಕೆಲಸದ ಭರವಸೆಯಿಂದ ನೀಡಿದ ನಗದು ಹಾಗೂ ಮೊಬೈಲ್ ಅನ್ನು ಮರಳಿ ಕೊಡಿಸಬೇಕಾಗಿ ದೂರಿನಲ್ಲಿ ತಿಳಿಸಲಾಗಿದೆ. ಠಾಣೆಯಲ್ಲಿ ದೂರು ಸ್ವೀಕರಿಸಿದ್ದು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಇನ್ನೂ ತಿಳಿದು ಬಂದಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.