ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಬೆಳ್ತಂಗಡಿ ಪರಿಸರದಲ್ಲಿ ಪವಿತ್ರ ಇಸ್ಲಾಮಿನ ಆಶಯಾದರ್ಶಗಳನ್ನು ಪಸರಿಸುತ್ತಿರುವ ದಾರುಸ್ಸಲಾಂ ಬೆಳ್ತಂಗಡಿಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ SKSSF ದಾರುಸ್ಸಲಾಂ ಬೆಳ್ತಂಗಡಿ ಶಾಖೆಯ ಮೊದಲನೇ ವಾರ್ಷಿಕೋತ್ಸವ ಕಾರ್ಯಕ್ರಮವು ಫೆಬ್ರವರಿ 01 ರಿಂದ 19 ರವರೆಗೆ ದಾರುಸ್ಸಲಾಂ ಕ್ಯಾಂಪಸ್ ಬೆಳ್ತಂಗಡಿಯಲ್ಲಿ ಜರುಗಲಿದೆ.
ದಾರುಸ್ಸಲಾಂ ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ರವರ ಉದ್ಘಾಟನೆಯೊಂದಿಗೆ ಫೆಬ್ರವರಿ 01 ರಂದು ಕಾರ್ಯಕ್ರಮವು ಪ್ರಾರಂಭಗೊಳ್ಳಲಿದೆ. ಫೆಬ್ರವರಿ 05 ಬೆಳಿಗ್ಗೆ 10ಗಂಟೆಗೆ ಸರಿಯಾಗಿ ಸುನ್ನತ್ ಜಮಾಅತ್ತಿನ ಧೀರ ಶಬ್ದವಾದ ಮುಜ್ತಬಾ ಫೈಝಿ ಆನಕ್ಕರರವರು ಆದರ್ಶ ಅಧ್ಯಯನ ಶಿಬಿರವನ್ನು ನಡೆಸಿಲಿದ್ದಾರೆ. ಕಾರ್ಯಕ್ರಮದ ಕೊನೆಯ ದಿನವಾದ ಫೆಬ್ರವರಿ 19ರಂದು ಮಗ್ರಿಬ್ ನಮಾಝಿನ ಬಳಿಕ ಬುರ್ದಾ ಮಜ್ಲಿಸ್ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಅಂದು ಖ್ಯಾತ ಪ್ರಭಾಷಣಗಾರ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲರವರು ಮುಖ್ಯ ಪ್ರಭಾಷಣ ನಡೆಸಿಲಿದ್ದಾರೆ.
ವಾರ್ಷಿಕೋತ್ಸವದ ಅಂಗವಾಗಿ ಅನುಸ್ಮರಣಾ ಸಂಗಮಗಳು, ಆದರ್ಶ ಅಧ್ಯಯನ ಶಿಬಿರ, ಫಿಕ್ಹ್ ಸೆಮಿನಾರ್, ಪ್ರತಿಭಾ ಸ್ಪರ್ಧೆಗಳು, ಬಹುಮಾನ ವಿತರಣೆ ಹಾಗೂ SKSSF ಸ್ಥಾಪನಾ ದಿನಾಚರಣೆ ಇನ್ನಿತಿರ ಕಾರ್ಯಕ್ರಮ ನಡೆಯಲಿದೆ. ಹಲವಾರು ಸಯ್ಯಿದರು, ಉಲಮಾ ಉಮರಾ ನೇತಾರರು, ಧಾರ್ಮಿಕ-ಶೈಕ್ಷಣಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.