ಮಡಿಕೇರಿ(ವಿಶ್ವಕನ್ನಡಿಗ ನ್ಯೂಸ್): ಗಣರಾಜ್ಯೋತ್ಸವ ಪ್ರಯುಕ್ತ SKSSF ಸಂಘಟನೆ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ಧತೆಯ ಸಂಕಲ್ಪ ಎಂಬ ಸಂದೇಶದೊಂದಿಗೆ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮಾನವ ಸರಪಳಿ ಮತ್ತು ಸೌಹಾರ್ಧ ಸಮ್ಮೇಳನ ಜನವರಿ 26- 2023 ನಾಳೆ ಸಂಜೆ 4.00 ಗಂಟೆಗೆ ಕೊಡಗು ಜಿಲ್ಲೆಯ ಕೇಂದ್ರಸ್ಥಾನ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ SKSSF ನ ನಾಯಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ನಾಳೆ ಸಂಜೆ 4.00 ಗಂಟೆಗೆ ಗಣಪತಿ ಬೀದಿಯಲ್ಲಿರುವ ಬದ್ರಿಯಾ ಮಸೀದಿಯಿಂದ ಕಾವೇರಿ ಕಲಾಕ್ಷೇತ್ರದವರೆಗೆ ಸೌಹಾರ್ಧ ಜಾಥಾ ನಡೆಯಲಿದೆ. ನಂತರ 14ನೇ ವರ್ಷದ ಬಹುಜನ ಸೌಹಾರ್ಧ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು. ಕೋಮುವಾದ , ದ್ವೇಷ ಹಬ್ಬಿಸಿ ದೇಶದ ಮಹನೀಯ ಪರಂಪರೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ವಿಧ್ವಂಸಕ ಶಕ್ತಿಗಳ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಶಾಂತಿಯುತ ವಾತಾವರಣ ಉಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಉಂಟಾಗುತ್ತಿರುವ ಅಶಾಂತಿಯ ಕುರಿತು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗುರುಗಳು, ರಾಜಕೀಯ ಮತ್ತು ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
SKSSF ಸಂಘಟನೆಯು ದೇಶ – ವಿದೇಶಗಳಲ್ಲಿ ಸಾಮಾಜಿಕ, ಕಾರುಣ್ಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಅನಾಥರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ ಸಾಂತ್ವನ ಕೇಂದ್ರವಾಗಿ SKSSF ಕಾರ್ಯಾಚರಿಸುತ್ತಿದೆ. ಯುವ ಜನತೆಯನ್ನು “ಜ್ಞಾನ, ವಿನಯ, ಸೇವೆ” ಎಂಬ ಧ್ಯೇಯ ವಾಕ್ಯದಲ್ಲಿ ಮುನ್ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ SKSSF ಸುಮಾರು 40 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ SKSSF ಕೊಡಗು ಜಿಲ್ಲಾಧ್ಯಕ್ಷರಾದ ಎಂ. ತಂಲೀಕ್ ದಾರಿಮಿ ಮಡಿಕೇರಿ, ಸಂಚಾಲಕ ಅಬ್ದುಲ್ ಕರೀಂ ಮುಸ್ಲಿಯಾರ್ ಸಿದ್ಧಾಪುರ, ಉಪಾಧ್ಯಕ್ಷ ಉಮರ್ ಮುಸ್ಲಿಯಾರ್ 40 ಏಕ್ರೆ, ಸದಸ್ಯರುಗಳಾದ ಆರಿಫ್ ಫೈಝಿ ಒಂಟಿಯಂಗಡಿ, ಹಾಗೂ ಶರಫುದ್ದೀನ್ ಸಿದ್ಧಾಪುರ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.