ದುಬೈ (www.vknews.in) : ದಾರುನ್ನೂರ್ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ದುಬೈ ಸ್ಟೇಟ್ ಇದರ 5 ನೇ ಮಹಾ ಸಭೆಯು ದಿನಾಂಕ 15/01/2023 ನೇ ರವಿವಾರದಂದು ಕೆ ಯಂ ಸಿ ಸಿ ಹಾಲ್ ನಲ್ಲಿ ಹಾಲಿ ಅದ್ಯಕ್ಷರಾದ ಜನಾಬ್ ಇಲ್ಯಾಸ್ ಕಡಬ ರವರ ಅನುಪಸ್ಥಿತಿಯಲ್ಲಿ ಹಿರಿಯರಾದ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆಯವರ ಅದ್ಯಕ್ಷತೆಯಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಸಯ್ಯದ್ ಅಸ್ಕರ್ ಅಲಿ ತಂಗಳ್ ಕೋಲ್ಪೆ ಅದ್ಯಕ್ಷರು ಯಸ್ ಕೆ ಯಸ್ ಯಸ್ ಯಫ್ ದುಬೈ ಕರ್ನಾಟಕ ಸ್ಟೇಟ್, ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ ಮೇಲ್ವಿಚಾರಕರು ಅತ್ತಿಪೆಟ್ಟ ಉಸ್ತಾದ್ ಫೌಂಡೇಷನ್ ದುಬೈ,ಜನಾಬ್ ಮಹಮ್ಮದ್ ಮಾಡಾವು ಅದ್ಯಕ್ಷರು ದಾರುನ್ನೂರ್ ಯು ಎ ಇ, ಜನಾಬ್ ಬದ್ರುದ್ದೀನ್ ಹೆಂತಾರ್ ಪ್ರಧಾನ ಕಾರ್ಯದರ್ಶಿ ದಾರುನ್ನೂರ್ ಯು ಎ ಇ, ಜನಾಬ್ ಅಶ್ರಫ್ ಖಾನ್ ಮಾಂತೂರ್ ಉಪದೇಶಕರು ದಾರುನ್ನೂರ್ ಯು ಎ ಇ, ಉಸ್ತಾದ್ ಅಲಿ ಹಸನ್ ಫೈಝಿ ಕುಕ್ಕಾಜೆ ಅದ್ಯಕ್ಷರು ಶಂಸುಲ್ ಉಲಮಾ ಅರಬಿಕ್ ಕಾಲೇಜ್ ತೋಡಾರ್ ದುಬೈ ಸ್ಟೇಟ್, ಉಸ್ತಾದ್ ಬದ್ರುಲ್ ಮುನೀರ್ ಫೈಝಿ, ಜನಾಬ್ ಮಹಮ್ಮದ್ ಶರೀಫ್ ಕಾವು ಅದ್ಯಕ್ಷರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಯು ಎ ಇ ರಾಷ್ಟ್ರೀಯ ಸಮಿತಿ, ಜನಾಬ್ ಅಬ್ದುಲ್ ರಹ್ಮಾನ್ ಸಜಿಪ ಅದ್ಯಕ್ಷರು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು ಎ ಇ ರಾಷ್ಟ್ರೀಯ ಸಮಿತಿ, ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ ಚೇರ್ಮೇನ್ ದಾರುನ್ನೂರ್ ಮಜ್ಲಿಸುನ್ನೂರ್ ಸಮಿತಿ ಯು ಎ ಇ,, ಜನಾಬ್ ಅಬ್ದುಲ್ ರಝಾಕ್ ಉಸ್ತಾದ್ ಪಾತೂರ್ ಉಪದೇಶಕರು ದಾರುನ್ನೂರ್ ದುಬೈ ಸ್ಟೇಟ್, ಜನಾಬ್ ಮಹಮ್ಮದ್ ಅಶ್ರಫ್ ಆರ್ತಿಕೆರೆ ಅದ್ಯಕ್ಷರು ಕರ್ನಾಟಕ ಇಸ್ಲಾಮಿಕ್ ಸೆಂಟರ್ ದುಬೈ ಸ್ಟೇಟ್ ಮೊದಲಾದವರು ಆಗಮಿಸಿದ್ದರು.
ಉಸ್ತಾದ್ ಅಲಿ ಹಸನ್ ಫೈಝಿ ಕುಕ್ಕಾಜೆಯವರ ದುಆದ ಬಳಿಕ ಜನಾಬ್ ಅಬ್ದುಲ್ ಅಝೀಝ್ ಸೋಪಾಡಿಯವರು ಆಗಮಿಸಿದ ಅತಿಥಿಗಳು ಮತ್ತು ಕಾರ್ಯಕರ್ತರನ್ನು ಸ್ವಾಗತಿಸಿದರು. ಈ ಸಂದರ್ಭ ದಾರುನ್ನೂರಿನ ಕಾರ್ಯವೈಖರಿಯನ್ನು ಹೃಸ್ವ ರೂಪದಲ್ಲಿ ವಿವರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಾಬ್ ಮಹಮ್ಮದ್ ಮಾಡಾವುರವರು ಅಲ್ಲಾಹನ ನಾಮದಿಂದ ಮಾಡಿದರು. ಈ ಸಂದರ್ಭ ದಾರುನ್ನೂರ್ ನಡೆದು ಬಂದ ಹಾದಿ ಮತ್ತು ದಾರುನ್ನೂರಿನ ಪ್ರಸಕ್ತ ಸನ್ನಿವೇಷವನ್ನು ವಿವರಿಸಿದರು. ಬಳಿಕ ಮರ್ಹೂಮ್ ನೌಷಾದ್ ಹಾಜಿ ಮತ್ತು ಮರ್ಹೂಮ್ ರಫೀಕ್ ಆತೂರ್ ರವರ ಸೇವೆಯನ್ನು ಮತ್ತು ಸಾಮಾಜಿಕ ರಂಗದಲ್ಲಿ ಅವರ ಅನಿವಾರ್ಯತೆಯನ್ನು ವಿವರಿಸಿ ಅವರ ಪಾರತ್ರಿಕ ಲೋಕದ ವಿಜಯಕ್ಕಾಗಿ ದುಆ ಮಾಡಿದರು.
ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಜನಾಬ್ ಮಹಮ್ಮದ್ ಶಬ್ಬೀರ್ ಫರಂಗಿಪೇಟೆಯವರು ವಾಚಿಸಿದರು. ವಾರ್ಷಿಕ ಕಾರ್ಯಚಟುವಟಿಕೆಯ ವಿವರವನ್ನು ಜನಾಬ್ ಮಹಮ್ಮದ್ ಸಿರಾಜ್ ಬಿ ಸಿ ರೋಡ್ ಮಂಡಿಸಿದರು.
ಬಳಿಕ ಅನುಸ್ಮರಣೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಯಿತು. ಮರ್ಹೂಮ್ ನೌಷಾದ್ ಹಾಜಿಯವರ ಜೀವನ ಕ್ರಮ ಸಾಮಾಜಿಕ ಸೇವೆಯನ್ನು ಉಸ್ತಾದ್ ಸಿರಾಜುದ್ದೀನ್ ಫೈಝಿಯವರು ಹಲವು ಉದಾಹರಣೆ ಸಹಿತ ವಿವರಿಸಿದರು. ಬಳಿಕ ಸಯ್ಯದ್ ಅಸ್ಕರ್ ಅಲಿ ತಂಗಳ್ ಮತ್ತು ಜನಾಬ್ ಬದ್ರುದ್ದೀನ್ ಹೆಂತಾರ್ ರವರು ಮರ್ಹೂಮ್ ನೌಷಾದ್ ಹಾಜಿ ಮತ್ತು ಮರ್ಹೂಮ್ ರಫೀಕ್ ಆತೂರು ರವರ ಸಂಘ ಸಂಸ್ಥೆಗಳಲ್ಲಿ ಮಾಡಿದ ನಿಸ್ವಾರ್ಥ ಸೇವೆ, ಅದೇ ಪ್ರಕಾರ ಅಲ್ಪ ಅವಧಿಯಲ್ಲಿ ಗಳಿಸಿದ ಜನ ಮನ್ನಣೆ, ಅದಕ್ಕಾಗಿ ಮಾಡಬೇಕಾದ ತ್ಯಾಗ ಮನೋಭಾವ ಮೊದಲಾದ ವಿಷಯಗಳನ್ನು ವಿವರಿಸಿ ಅವರ ಪಾರತ್ರಿಕ ವಿಜಯಕ್ಕಾಗಿ ದುಆ ಮಾಡಿದರು.
ನೂತನ ಸಮಿತಿ ರಚನೆಯ ಜವಾಬ್ಧಾರಿಯನ್ನು ಜನಾಬ್ ಶರೀಫ್ ಕಾವುರವರಿಗೆ ನೀಡಲಾಯಿತು. 2023 ರ ಸಾಲಿಗೆ ಈ ಕೆಳಗಿನ ಪ್ರಮುಖರನ್ನು ಸಾರಥಿಗಳನ್ನಾಗಿ ಆರಿಸಲಾಯಿತು.
ಉಪದೇಶಕ ಸಮಿತಿ ಪ್ರಮುಖರು: ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಜನಾಬ್ ಬದ್ರುದ್ದೀನ್ ಹೆಂತಾರ್, ಜನಾಬ್ ಇಲ್ಯಾಸ್ ಕಡಬ, ಜನಾಬ್ ಮಹಮ್ಮದ್ ಶರೀಫ್ ಕಾವು, ಜನಾಬ್ ನೂರ್ ಮಹಮ್ಮದ್ ನಿರ್ಕಜೆ, ಜನಾಬ್ ಅಬ್ಬಾಸ್ ಕೇಕುಡೆ, ಜನಾಬ್ ಮನ್ಸೂರ್ ದೇರಲಕಟ್ಟೆ, ಜನಾಬ್ ಅಶ್ರಫ್ ನಾಟೆಕಲ್, ಜನಾಬ್ ಯೂಸುಫ್ ಈಶ್ವರಮಂಗಲ, ಜನಾಬ್ ಅಶ್ರಫ್ ಅರ್ತಿಕೆರೆ,
ಅದ್ಯಕ್ಷರು : ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ ಉಪಾದ್ಯಕ್ಷರುಗಳು : ಜನಾಬ್ ನವಾಝ್ ಬಿ ಸಿ ರೋಡ್, ಜನಾಬ್ ಸಿರಾಜ್ ಬಿ ಸಿ ರೋಡ್, ಜನಾಬ್ ಅಶ್ರಫ್ ಬಾಂಬಿಲ, ಜನಾಬ್ ನವಾಝ್ ಮನಲ್, ಜನಾಬ್ ಬಶೀರ್ ಕೆಮ್ಮಿಂಜೆ, ಜನಾಬ್ ಅನ್ವರ್ ಮಾನಿಲ. ಪ್ರಧಾನ ಕಾರ್ಯದರ್ಶಿ : ಜನಾಬ್ ಮಹಮ್ಮದ್ ಶಬ್ಬೀರ್ ಫರಂಗಿಪೇಟೆ
ಜೊತೆ ಕಾರ್ಯದರ್ಶಿಗಳು : ಜನಾಬ್ ತಾಹಿರ್ ಹೆಂತಾರ್, ಜನಾಬ್ ಇಸ್ಮಾಯಿಲ್ ತಿಂಗಳಾಡಿ, ಜನಾಬ್ ಜಾಬಿರ್ ಬೆಟ್ಟಂಪಾಡಿ, ಜನಾಬ್ ಜಬ್ಬಾರ್ ಕಲ್ಲಡ್ಕ, ಜನಾಬ್ ಜಾಬಿರ್ ಬಪ್ಪಳಿಗೆ
ಕೋಶಾಧಿಕಾರಿ : ಜನಾಬ್ ಮಹಮ್ಮದ್ ಹನೀಫ್ ಕೆ.ಪಿ ಮೂಡಬಿದ್ರಿ ಸಹ ಕೋಶಾಧಿಕಾರಿ : ಜನಾಬ್ ಉಸ್ಮಾನ್ ಮರೀಲ್ ಲೆಕ್ಕ ಪರಿಶೋಧಕ : ಜನಾಬ್ ನಾಸಿರ್ ಬಪ್ಪಳಿಗೆ
ಸಂಘಟನೆ ಕಾರ್ಯದರ್ಶಿಗಳು : ಜನಾಬ್ ಸಾಹುಲ್ ಬಿ ಸಿ ರೋಡ್, ಜನಾಬ್ ಅಬುಬಕ್ಕರ್ ಸಿದ್ದೀಕ್ ಮೂಡಬಿದ್ರಿ, ಜನಾಬ್ ಇಫ್ತಿಕಾರ್ ಅಡ್ಯಾರ್ ಕಣ್ಣೂರ್,
ಕನ್ವೀನರುಗಳು : ಜನಾಬ್ ಅನ್ಸಾಫ್ ಪಾತೂರು,ಜನಾಬ್ ಸಮೀರ್ ಇಬ್ರಾಹಿಂ ಕಲ್ಲರೆ, ಜನಾಬ್ ಶಂಸುದ್ದೀನ್ ಹಮೀದ್ ಮೂಡಬಿದ್ರಿ, ಜನಾಬ್ ಇಫ್ತಿಕಾರ್ ಕಾಶಿಪಟ್ಣ, ಜನಾಬ್ ಯೂನುಸ್ ತಲಪಾಡಿ, ಜನಾಬ್ ನಿಝಾಮ್ ತೋಡಾರ್, ಜನಾಬ್ ಅಝ್ಹರ್ ಹಂಡೇಲ್, ಜನಾಬ್ ಇಬ್ರಾಹಿಂ ಅಬುಬಕ್ಕರ್ ಕುಂಡಾಜೆ, ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ, ಜನಾಬ್ ನವಾಝ್ ಕೋಟೆಕಾರ್, ಜನಾಬ್ ಹನೀಫ್ ಬುಳ್ಳೇರಿಕಟ್ಟೆ.
ಧಾರ್ಮಿಕ ಸಲಹೆಗಾರರು : ಸುಲೈಮಾನ್ ಮೌಲವಿ ಕಲ್ಲೆಗ, ಅಬ್ದುಲ್ ರಝಾಕ್ ಉಸ್ತಾದ್ ಪಾತೂರು, ಅಲಿ ಹಸನ್ ಫೈಝಿ ಕುಕ್ಕಾಜೆ, ಬದ್ರುಲ್ ಮುನೀರ್ ಫೈಝಿ ಸುರಿಬೈಲ್
ಕಾರ್ಯಕಾರಿ ಸಮಿತಿ ಸದಸ್ಯರು : ಜನಾಬ್ ನಾಸಿರ್ ಕಲ್ಲಡ್ಕ, ಜನಾಬ್ ರಾಝಿಕ್ ಗಡಿಯಾರ್, ಜನಾಬ್ ತಯ್ಯಿಬ್ ಹೆಂತಾರ್, ಜನಾಬ್ ರಿಫಾಯಿ ಗೂನಡ್ಕ, ಜನಾಬ್ ರಿಯಾಝ್ ಪಟ್ಟಾಡಿ, ಜನಾಬ್ ಸಂಶೀರ್ ಬಾಂಬಿಲ, ಜನಾಬ್ ಆಸಿಫ್ ಮರೀಲ್, ಜನಾಬ್ ಶಫೀಕ್ ಗಡಿಯಾರ್, ಜನಾಬ್ ಸಮೀರ್ ಕರಾಯ, ಜನಾಬ್ ಹುಸೈನ್ ರೆಂಜಲಾಡಿ, ಜನಾಬ್ ಸಾಬಿತ್ ಆತೂರ್, ಜನಾಬ್ ಹಾರಿಸ್ ಕಡಬ, ಜನಾಬ್ ಆರಿಫ್ ಕೂರ್ನಡ್ಕ, ಜನಾಬ್ ಹಾರಿಸ್ ಕೊಯಿಲ, ಜನಾಬ್ ಹಂಝ ಕೆಮ್ಮಿಂಜೆ, ಜನಾಬ್ ಇಸ್ ಹಾಕ್ ಕುಡ್ತಮುಗೇರ್, ಜನಾಬ್ ಹಾರಿಸ್ ಪಾಪೆತಡ್ಕ, ಜನಾಬ್ ಅಲಿ ಈಶ್ವರಮಂಗಲ, ಜನಾಬ್ ಮುಸ್ತಾಕ್ ಕೆಪಿ ಮೂಡಬಿದ್ರಿ, ಜನಾಬ್ ಮುಜೀಬ್ ಕೆ.ಪಿ ಮೂಡಬಿದ್ರಿ, ಜನಾಬ್ ನಾಸಿರ್ ಕುಂದಾಪುರ, ಜನಾಬ್ ಅಶ್ರಫ್ ಕೆ.ಪಿ ಮೂಡಬಿದ್ರಿ, ಜನಾಬ್ ಅಕ್ಬರ್ ಹಂಡೇಲ್, ಜನಾಬ್ ಮಹಮ್ಮದ್ ರೆಗ್ ಟಾಗ್, ಜನಾಬ್ ಇಂತಿಯಾಝ್ ಕಡಬ, ಜನಾಬ್ ಜಾಸಿರ್ ಕಡಬ,
ನೂತನ ಸಮಿತಿಗೆ ಶುಭಕೋರಿ ಹಾಗೂ ನೌಶಾದ್ ಹಾಜಿ ಅನುಸ್ಮರಣೆಯನ್ನು ಜನಾಬ್ ಅಶ್ರಫ್ ಖಾನ್ ಮಂತೂರ್, ಜನಾಬ್ ಅಬ್ದುಲ್ ರಹ್ಮಾನ್ ಸಜಿಪ, ಜನಾಬ್ ಅಶ್ರಫ್ ಅರ್ತಿಕೆರೆ, ಜನಾಬ್ ನವಾಝ್ ಕೋಟೆಕಾರ್, ಜನಾಬ್ ಶರೀಫ್ ಕೊಡ್ನೀರ್ ಮೊದಲಾದವರು ಮಾತನಾಡಿದರು.
ನೂತನ ಅದ್ಯಕ್ಷ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆಯವರು ದಾರುನ್ನೂರನ್ನು ಹೊಸ ಯೋಜನೆಯೊಂದಿಗೆ ಮುನ್ನಡೆಸಬೇಕಾಗಿರುವುದು ಕಾಲದ ಅನಿವಾರ್ಯವಾಗಿದ್ದು ಅದಕ್ಕಾಗಿ ಎಲ್ಲ ಶಾಖೆಗಳ ಪ್ರಮುಖರ ಸಹಕಾರವನ್ನು ಕೋರಿ, ಅಲ್ಲಿ ಕಲಿಯುವ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಎಲ್ಲರೂ ಮುಂದೆ ಬರಬೇಕೆಂದು ವಿನಂತಿಸಿ ಮಾತಿಗೆ ಪೂರ್ಣವಿರಾಮವನ್ನಿತ್ತರು.
ಕಾರ್ಯಕ್ರಮವನ್ನು ಜನಾಬ್ ನವಾಝ್ ಬಿಸಿ ರೋಡ್ ರವರು ಚೊಕ್ಕಟವಾಗಿ ನಿರೂಪಿಸಿದರು. ಜನಾಬ್ ತಾಹಿರ್ ಹೆಂತಾರ್ ರವರ ವಂದನಾರ್ಪಣೆಯೊಂದಿಗೆ ಮಹಾ ಸಭೆ ಮತ್ತು ಅನುಸ್ಮರಣೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.