(www.vknews.in) ಮಂಗಳೂರು ಬೀಬಿ ಅಶೂರ ವುಮೆನ್ಸ್ ಕಾಲೇಜಿನಲ್ಲಿ 74 ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಯಾದ ಕಾಲೇಜಿನ ಸ್ಥಾಪಕರಾದ ಅಬೂಬಕರ್ ಸಿದ್ದೀಖ್ ಬೆಂಗ್ರೆಯವರು ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ
ಪ್ರಿನ್ಸಿಪಾಲರಾದ ಹನೀಫ್ ಸಖಾಫಿ ಉಸ್ತಾದ್. ಗಣರಾಜ್ಯೋತ್ಸವದ ಮಹತ್ವದ ಕುರಿತು ವಿದ್ಯಾರ್ಥಿನಿಯರಿಗೆ ವಿವರಿಸಿದರು. ಶರೀಯತ್ ಅಧ್ಯಾಪಕಿ. ಝಿಯಾದ ರವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.ವಿದ್ಯಾರ್ಥಿನಿಯಾದ ತಸ್ರೀಯಾ ಧನ್ಯವಾದ ಸಮರ್ಪಿಸಿದರು. ಹಲವು ವಿಧ್ಯಾರ್ತಿನಿಯರು ಭಾಷಣ ಹಾಗೂ ದೇಶ ಭಕ್ತಿ ಗೀತೆಗಳನ್ನು ಹಾಡಿ ಕಾರ್ಯಕ್ರಮ ವನ್ನು ಹಚ್ಚು ಕಟ್ಟಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಂಸುದ್ದಿನ್ ಶರೀಯತ್ ಅಧ್ಯಾಪಕಿ ಶಮೀನಾ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.